ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕಾಂಗ್ರೆಸ್ ಹಿರಿಯ ನಾಯಕ ಪಂಡಿತ್ ಸುಖ್‌ ರಾಮ್ ನಿಧನ

|
Google Oneindia Kannada News

ನವದೆಹಲಿ, ಮೇ 11; ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಂಡಿತ್ ಸುಖ್‌ ರಾಮ್ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

95 ವರ್ಷದ ಪಂಡಿತ್ ಸುಖ್‌ ರಾಮ್ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅನಿಲ್ ಶರ್ಮಾ ಹೇಳಿದರು. ಬ್ರೈನ್‌ ಸ್ಟ್ರೋಕ್ ಉಂಟಾದ ಹಿನ್ನಲೆಯಲ್ಲಿ ಮೇ 7ರಂದು ಅವರನ್ನು ಶಿಮ್ಲಾದಿಂದ ದೆಹಲಿಗೆ ಏರ್‌ ಲಿಫ್ಟ್ ಮಾಡಲಾಗಿತ್ತು.

Breaking; ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಿಧನ Breaking; ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಿಧನ

ಹಿಮಾಚಲ ಪ್ರದೇಶದ ಮಂಡಿಯ ಆಸ್ಪತ್ರೆಯಲ್ಲಿ ಪಂಡಿತ್ ಸುಖ್‌ ರಾಮ್ ಮೊದಲು ಚಿಕಿತ್ಸೆ ಪಡೆಯುತ್ತಿದ್ದರು. ಮುಖ್ಯಮಂತ್ರಿ ಜೈರಾಮ್ ರಮೇಶ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಬಾಗೇಪಲ್ಲಿಯ ಮಾಜಿ ಶಾಸಕ ಜಿ. ವಿ. ಶ್ರೀರಾಮ ರೆಡ್ಡಿ ನಿಧನ ಬಾಗೇಪಲ್ಲಿಯ ಮಾಜಿ ಶಾಸಕ ಜಿ. ವಿ. ಶ್ರೀರಾಮ ರೆಡ್ಡಿ ನಿಧನ

ಮೇ 7ರಂದು ಪಂಡಿತ್ ಸುಖ್‌ ರಾಮ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಹೆಲಿಕಾಪ್ಟರ್ ಮೂಲಕ ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ಏರ್ ಲಿಫ್ಟ್‌ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅವರು ಸಾವನ್ನಪ್ಪಿದ್ದಾರೆ.

Congress Senior Leader Pandit Sukh Ram No More

ಪಂಡಿತ್ ಸುಖ್ ರಾಮ್ 1993 ರಿಂದ 1996ರ ತನಕ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು.

ಐದು ಬಾರಿ ವಿಧಾನಸಭೆ ಚುನಾವಣೆ, ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಂಡಿತ್ ಸುಖ್ ರಾಮ್ ಗೆಲುವು ಸಾಧಿಸಿದ್ದರು. ಪಂಡಿತ್ ಸುಖ್ ರಾಮ್ ಪುತ್ರ ಅನಿಲ್ ಶರ್ಮಾ ಮಂಡಿಯ ಬಿಜೆಪಿಯ ಶಾಸಕರು.

English summary
Congress senior leader and former union minister Pandit Sukh Ram (95) passed away. He was admitted to the AIIMS, New Delhi two days back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X