ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಕಾಂಗ್ರೆಸ್‌ನಿಂದ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

|
Google Oneindia Kannada News

ಗಾಂಧಿನಗರ, ನವೆಂಬರ್ 05: ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ 182 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪೋರಬಂದರ್‌ನಿಂದ ಗುಜರಾತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಅರ್ಜುನ್ ಮೊದ್ವಾಡಿಯಾ, ಗಾಂಧಿನಗರ ದಕ್ಷಿಣದಿಂದ ಹಿಮಾಂಶು ಪಟೇಲ್, ರಾಜ್‌ಕೋಟ್ ದಕ್ಷಿಣದಿಂದ ಹಿತೇಶ್‌ಭಾಯ್ ವೋರಾ ಅನ್ನು ಆಯ್ಕೆ ಮಾಡಲಾಗಿದೆ.

ಗುಜರಾತ್‌ ಚುನಾವಣೆಯಲ್ಲಿ 'OTP ಸೂತ್ರ' ಬಳಸುವುದಿಲ್ಲ ಎಂದಿದ್ದೇಕೆ ಕೇಜ್ರಿವಾಲ್?ಗುಜರಾತ್‌ ಚುನಾವಣೆಯಲ್ಲಿ 'OTP ಸೂತ್ರ' ಬಳಸುವುದಿಲ್ಲ ಎಂದಿದ್ದೇಕೆ ಕೇಜ್ರಿವಾಲ್?

ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಕಾರ್ಯಸೂಚಿಯೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯನ್ನು ನಡೆಸಲಾಯಿತು. ಈ ಸಭೆಯ ನಂತರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಭೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾಗವಹಿಸಿದ್ದರು. ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿರುವ 43 ಸ್ಥಾನಗಳಲ್ಲಿ ದಹೋದ್ ಜಿಲ್ಲೆಯಲ್ಲಿ ಒಂದು - ಜಲೋದ್ (ST) ಕ್ಷೇತ್ರವನ್ನು ಮಾತ್ರ ಹೊಂದಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 10 ಪಟೇಲ್ ಅಥವಾ ಪಾಟಿದಾರ್, 11 ಆದಿವಾಸಿಗಳು, 10 ಒಬಿಸಿ ಮತ್ತು ಐದು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.

Congress releases 43 candidates first list for Gujarat Elections 2022

ಗುಜರಾತ್ ವಿಧಾನಸಭೆಗೆ ಕಾಂಗ್ರೆಸ್ ಮೊದಲ ಪಟ್ಟಿ:

1. ಅಂಜಾರ್ - ರಮೇಶ ಭಾಯ್ ಎಸ್.ಡಂಗರ್

2. ಗಾಂಧಿಧಾಮ್ (SC) - ಭರತ್ ವಿ. ಸೋಲಂಕಿ

3. ದೀಸಾ - ಸಂಜಯ್ಭಾಯ್ ಗೋವಾಭಾಯಿ ರಾಬರಿ

4. ಖೇರಾಳು - ಮುಖೇಶ್‌ಭಾಯ್ ಎಂ ದೇಸಾಯಿ

5. ಕಾಡಿ (ಎಸ್‌ಸಿ) - ಪರ್ಮಾರ್ ಪ್ರವೀಣ್‌ಭಾಯ್ ಗಣಪತಭಾಯ್

6. ಹಿಮತ್‌ನಗರ - ಕಮಲೇಶ್‌ಕುಮಾರ್ ಜಯಂತಿಭಾಯಿ ಪಟೇಲ್

7. ಇದಾರ್ (SC) - ರಮಾಭಾಯಿ ವಿರ್ಚಂದಭಾಯ್ ಸೋಲಂಕಿ

8. ಗಾಂಧಿನಗರ ದಕ್ಷಿಣ - ಡಾ. ಹಿಮಾಂಶು ವಿ ಪಟೇಲ್

9. ಘಟ್ಲೋಡಿಯಾ - ಅಮೀಬೆನ್ ಎಗ್ನಿಕ್

10. ಎಲ್ಲಿಸ್ ಬ್ರಿಡ್ಜ್ - ಭಿಖು ದೇವ್

11. ಅಮರಲ್ವಾಡಿ - ಧರ್ಮೇಂದ್ರ ಶಾಂತಿಲಾಲ್ ಪಟೇಲ್

12. ದಸ್ಕ್ರೋಯ್ - ಉಮೇದಿ ಬುಧಾಜಿ ಝಲಾ

13. ರಾಜ್‌ಕೋಟ್ ದಕ್ಷಿಣ - ಹಿತೇಶ್‌ಭಾಯ್ ಎಂ. ವೋರಾ

14. ರಾಜ್‌ಕೋಟ್ ಗ್ರಾಮಾಂತರ (SC) - ಸುರೇಶ್‌ಭಾಯ್ ಕರ್ಶನ್‌ಭಾಯ್ ಬಾತ್ವರ್

15. ಜಸ್ದನ್ - ಭೋಲಾಭಾಯಿ ಭಿಖಾಭಾಯಿ ಗೋಹಿಲ್

16. ಜಾಮ್ ನಗರ ಉತ್ತರ - ಬಿಪೇಂದ್ರಸಿನ್ಹ್ ಚತುರ್ಸಿಂಹ ಜಡೇಜಾ

17. ಪೋರಬಂದರ್ - ಅರ್ಜುನ್ ಮೋದ್ವಾಡಿಯಾ

18. ಕುಟಿಯಾನ - ನಾಥಭಾಯಿ ಭೂರಾಭಾಯಿ ಒಡೆದರಾ

19. ಮಾನವದರ್ - ಅರವಿಂದಭಾಯಿ ಜಿನಾಭಾಯಿ ಲಡಾನಿ

20. ಮಹುವ - ಕನುಭಾಯಿ ಕಲ್ಸರಿಯಾ

21. ನಾಡಿಯಾಡ್ - ಧ್ರುವಲ್ ಸಾಧುಭಾಯಿ ಪಟೇಲ್

22. ಮೊರ್ವಹದಾಫ್ (ST) -ಸ್ನೇಹಲತಾಬೆನ್ ಗೋವಿಂದಭಾಯ್ ಖಂತ್

23. ಫತೇಪುರ್ (ST) - ರಘು ದಿತಾಭಾಯಿ ಮಾಚಾರ್

24. ಝಲೋದ್ (ಎಸ್ಟಿ) - ಡಾ. ಮಿತೇಶ್ ಕೆ ಗಸರಿಯಾ

25. ಲಿಮ್ಖೇಡ (ಎಸ್ಟಿ) - ರಮೇಶ್ ಕುಮಾರ್ ಗುಂಡಿಯಾ

26. ಸಂಖೇಡಾ (ST) - ಭಿಲ್ ಧೀರೂಭಾಯಿ ಚುನಿಲಾಲ್

27. ಸಯಾಜಿಗುಂಜ್ - ಅಮೀ ರಾವತ್

28. ಅಕೋಟ - ರುತ್ವಿಕ್ ಜೋಶಿ

29. ರಾವ್ಪುರ - ಸಂಜಯ್ ಪಟೇಲ್

30. ಮಂಜಲ್ಪುರ್ - ಡಾ. ತಶ್ವಿನ್ ಸಿಂಗ್

31. ಓಲ್ಪಾಡ್ - ದರ್ಶನ್‌ಕುಮಾರ್ ಅಮೃತ್‌ಲಾಲ್ ನಾಯಕ್

32.ಕಾಮ್ರೇಜ್ - ನೀಲೇಶಕುಮಾರ್ ಮನ್ಸುಖಭಾಯಿ ಕುಂಭಣಿ

33. ವರಚಾ ರಸ್ತೆ - ಪ್ರಫುಲ್‌ಭಾಯ್ ಛಗನ್‌ಭಾಯ್ ತೊಗಾಡಿಯಾ

34. ಕಟರ್ಗಾಂ - ಕಲ್ಪೇಶ್ ಹರ್ಜೀವನ್ಭಾಯಿ ವರಿಯಾ

35. ಸೂರತ್ ವೆಸ್ಟ್ - ಸಂಜಯ್ ರಮೇಶ್ಚಂದ್ರ ಪಟ್ವಾ

36. ಬಾರ್ಡೋಲಿ (SC) - ಪನ್ನಾಬೆನ್ ಅನಿಲ್ ಭಾಯಿ ಪಟೇಲ್

37. ಮಹುವಾ (ST) - ಹೇಮಾಂಗಿನಿ ದೀಪಕ್‌ಕುಮಾರ್ ಗರಸಿಯಾ

38. ಡ್ಯಾಂಗ್ಸ್ (ST) - ಮುಖೇಶ್‌ಭಾಯ್ ಚಂದರ್‌ಭಾಯ್ ಪಟೇಲ್

39. ಜಲಾಲ್ಪೋರ್ - ರಂಜಿತ್ಭಾಯ್ ದಹ್ಯಾಭಾಯಿ ಪಾಂಚಾಲ್

40. ಗಾಂದೇವಿ (ST) -ಶಂಕರಭಾಯಿ ವಿ ಪಟೇಲ್

41. ಪಾರ್ಡಿ - ಜೈಶ್ರೀ ಪಟೇಲ್

42. ಕಪ್ರದ (ST) - ವಸಂತಭಾಯ್ ಬರ್ಜುಲ್ಭಾಯ್ ಪಟೇಲ್

43. ಉಂಬರ್ಗಾಂವ್ (ST) - ನರೇಶ್ಭಾಯ್ ವಜಿರ್ಭಾಯಿ ವಾಲ್ವಿ

ಗುಜರಾತ್‌ನಲ್ಲಿ ಚುನಾವಣೆಯ ಮಾಹಿತಿ

ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಅದೇ ರೀತಿ ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
Congress releases 43 candidates first list for Gujarat Assembly Elections 2022. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X