'ಮೋದಿಯ ನವಭಾರತಕ್ಕೆ ಸ್ವಾಗತ': ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ವ್ಯಂಗ್ಯ

ನವದೆಹಲಿ, ಫೆಬ್ರವರಿ 21: ಪುಲ್ವಾಮಾ ದಾಳಿಯ ಬಳಿಕ ಒಂದು ವಾರದಿಂದ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ದೂರವುಳಿದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈಗ ತಮ್ಮ ಹಳೆಯ ಹಳಿಗೆ ಮರಳಿದ್ದಾರೆ.

ರಫೇಲ್ ಒಪ್ಪಂದ, ಅನಿಲ್ ಅಂಬಾನಿ ಜತೆಗಿನ ಸಖ್ಯ ಮುಂತಾದ ವಿಚಾರಗಳನ್ನು ಮುಂದಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರಾಹುಲ್‌, ಹುತಾತ್ಮ ಸೈನಿಕರ ವಿಚಾರವನ್ನು ಅನಿಲ್ ಅಂಬಾನಿಯ ಸಾಲದ ಹೊರೆಯೊಂದಿಗೆ ಬೆಸೆದು ಟೀಕಾಪ್ರಹಾರ ನಡೆಸಿದ್ದಾರೆ.

'ಧೈರ್ಯಶಾಲಿಗಳು ಹುತಾತ್ಮರಾಗಿದ್ದಾರೆ. ಅವರ ಕುಟುಂಬಗಳು ಒದ್ದಾಡುತ್ತಿವೆ. 40 ಯೋಧರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆದರೆ ಅವರಿಗೆ (ಶಹೀದ್) ಹುತಾತ್ಮರ ಮಾನ್ಯತೆ ನಿರಾಕರಿಸಲಾಗಿದೆ. ಇತ್ತ ಈ ಮನುಷ್ಯ ಒಮ್ಮೆಯೂ ಕೊಟ್ಟಿಲ್ಲ ಮತ್ತು ಕೇವಲ ಪಡೆದುಕೊಂಡಿದ್ದಾರೆ. ಅವರು 30,000 ಕೋಟಿಯಷ್ಟು ಅವರ ಹಣವನ್ನು ಕಾಣಿಕೆಯಾಗಿ ನೀಡಿದ್ದಾರೆ. ಕೊನೆಯವರೆಗೂ ಸಂತೋಷದಿಂದ ಬದುಕುತ್ತಾರೆ. ಮೋದಿ ಅವರ ನವಭಾರತಕ್ಕೆ ಸ್ವಾಗತ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್‌ನೊಂದಿಗೆ ಅವರು, ಅನಿಲ್ ಅಂಬಾನಿಗೆ ಸಾಲದ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ ಎಂದು ಸುಪ್ರೀಂಕೋರ್ಟ್ ಕಟುವಾಗಿ ಎಚ್ಚರಿಕೆ ನೀಡಿದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Congress president Rahul gandhi attacks narendra modi and anil ambani

ಪುಲ್ವಾಮಾದಲ್ಲಿ ಉಗ್ರರ ಮೇಲೆ ದಾಳಿ ನಡೆದ ಮರುದಿನ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಈ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮತ್ತು ಯೋಧರೊಂದಿಗೆ ಇರುವುದಾಗಿ ಹೇಳಿದ್ದರು. ಅದರ ನಂತರ ಇದುವರೆಗೂ ಯಾವುದೇ ರಾಜಕೀಯ ಹೇಳಿಕೆಯನ್ನು ಅವರು ನೀಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+