ಛತ್ತೀಸ್ ಗಢದಲ್ಲಿ ಡಿ.11ರ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ಸಿಗೆ ಭಾರೀ ಆಘಾತ!
Recommended Video

ನವದೆಹಲಿ, ಡಿಸೆಂಬರ್ 03: ಛತ್ತೀಸ್ ಗಢ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಡಿಸೆಂಬರ್ 11ರ ತನಕ ಕಾಯಬೇಕಿದೆ. ಆದರೆ, ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಪಕ್ಷವು ಆತಂಕದ ಸ್ಥಿತಿಯಲ್ಲಿದೆ. ಪಕ್ಷದ ಶಾಸಕರನ್ನು ಇತರೆ ಪಕ್ಷದವರು ತಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದು ಎಂಬ ಸಂಶಯ ಬಲವಾಗಿ ಕಾಡುತ್ತಿದೆ.
ಹೀಗಾಗಿ, ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಸುರಕ್ಷಿತವಾಗಿರಿಸಲು ಕಾಂಗ್ರೆಸ್ ಹೈಕಮಾಂಡ್ ಯೋಜನೆ ಹಾಕಿಕೊಂಡಿದೆ. ಈ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಸುದ್ದಿ ಮುಟ್ಟಿಸಲಾಗಿದೆ.
ಹೈಕಮಾಂಡ್ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಅಭ್ಯರ್ಥಿಗಳನ್ನು ಹೇಗೆಲ್ಲ ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆ ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿ ರಾಜೀವ್ ಭವನ್ ನಲ್ಲಿ ರಾಜ್ಯ ಉಸ್ತಾರಿ ಪಿಎಲ್ ಪೂನಿಯಾ, ಪಿಸಿಸಿ ಮುಖ್ಯಸ್ಥ ಭೂಪೇಶ್ ಬಾಘೇಲ್, ವಿಪಕ್ಷ ನಾಯಕ ಟಿಎಸ್ ಸಿಂಗ್ ದೇವ್ ಸೇರಿದಂತೆ 90ಕ್ಕೂ ಅಧಿಕ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕಳೆದ ವಾರದ ಮಹತ್ವದ ಸಭೆ ನಡೆಸಲಾಗಿದೆ.

ಕುದುರೆ ವ್ಯಾಪಾರದ ಬಗ್ಗೆ ಕಾಂಗ್ರೆಸ್ಸಿಗೆ ಆತಂಕ
ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಪಕ್ಷವು ಆತಂಕದ ಸ್ಥಿತಿಯಲ್ಲಿದೆ. ಪಕ್ಷದ ಶಾಸಕರನ್ನು ಇತರೆ ಪಕ್ಷದವರು ತಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದು ಎಂಬ ಸಂಶಯ ಬಲವಾಗಿ ಕಾಡುತ್ತಿದೆ. ಕುದುರೆ ವ್ಯಾಪಾರದ ಬಗ್ಗೆ ಕಾಂಗ್ರೆಸ್ ಹಾಗೂ ಚುನಾವಣಾ ಆಯೋಗ ನಿಗಾ ವಹಿಸಿದೆ.
ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಗಳು ರಾಯ್ ಪುರಕ್ಕೆ ತೆರಳುವಂತೆ ಸೂಚಿಸಲಾಗಿದೆ. ಅಪ್ತರನ್ನು ಬಿಟ್ಟು ಉಳಿದವರ ಸಂಪರ್ಕ ಸಾಧಿಸದಂತೆ ಎಚ್ಚರಿಕೆ ನೀಡಲಾಗಿದೆ. ರಾಯ್ ಪುರ್ ತಲುಪಿದ ಬಳಿಕ ಅವರನ್ನು ಗೌಪ್ಯ ಸ್ಥಳಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ.

2003ರಲ್ಲಿ ಅಜಿತ್ ಸಿಂಗ್ ಪರಿಸ್ಥಿತಿ
2003ರಲ್ಲಿ ಆಗಿನ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ನಡೆದ ಶಾಸಕರ ಕುದುರೆ ವ್ಯಾಪಾರ ನಂತರ ದೊಡ್ಡ ಹಗರಣವಾಗಿ ಸಿಬಿಐ ತನಿಖೆಗೊಳಪಟ್ಟಿದೆ.
ನಂತರ ಕಾಂಗ್ರೆಸ್ ಜತೆ ವೈಮನಸ್ಸು ಉಂಟಾಗಿ 2016ರಲ್ಲಿ ಪಕ್ಷ ತೊರೆದರು. ಕಳೆದ ಕೆಲವು ದಿನಗಳ ಹಿಂದೆ ಜನತಾ ಕಾಂಗ್ರೆಸ್ ಛತ್ತೀಸಗಢ್ (ಜೆಸಿಸಿ) ಪಕ್ಷ ಕಟ್ಟಿದರು. ಮಯಾವತಿ ಅವರನ್ನು ಪ್ರಧಾನಿ ಮಾಡಲು ಬಿಎಸ್ಪಿಗೆ ಬೆಂಬಲ ಘೋಷಿಸುವುದಾಗಿ ಹೇಳಿದ್ದಾರೆ. ಈಗ ಸದ್ಯ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಿದ್ದಾರೆ.

ಸಮೀಕ್ಷೆಗಳಲ್ಲೂ ಕಾಂಗ್ರೆಸ್ಸಿಗೆ ಹೆಚ್ಚಿನ ಬಲ ಸಿಕ್ಕಿಲ್ಲ
2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು.
ಆದರೆ, 2018ರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದ್ದಾರೆ. ಇತರರು 8 ಸ್ಥಾನ ಹೆಚ್ಚುಗಳಿಸಲಿದ್ದಾರೆ.
ಆದರೆ, 2018ರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದ್ದಾರೆ. ಇತರರು 8 ಸ್ಥಾನ ಹೆಚ್ಚುಗಳಿಸಲಿದ್ದಾರೆ.

ದಲಿತ ಮತಗಳತ್ತ ಕಾಂಗ್ರೆಸ್ ನೋಟ
ಕಳೆದ 15 ವರ್ಷಗಳಿಂದ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯು ಅಧಿಕಾರ ನಡೆಸುತ್ತಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 39 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿಯು 49 ಸ್ಥಾನ ಪಡೆದಿತ್ತು. ಬಿಎಸ್ ಪಿ ಹಾಗೂ ಪಕ್ಷೇತರರು ತಲಾ 1 ಸ್ಥಾನದಲ್ಲಿ ಗೆದ್ದಿದ್ದರು.
ಬಹುಜನ ಸಮಾಜ ಪಕ್ಷವು 35 ಸ್ಥಾನಗಳಲ್ಲಿ ಹಾಗೂ ಜನತಾ ಕಾಂಗ್ರೆಸ್ ಛತ್ತೀಸ್ ಗಢ 55 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಹೀಗಾಗಿ, ಕಾಂಗ್ರೆಸ್ ಈ ಬಾರಿ ಗೆದ್ದ ಸ್ಥಾನಗಳನ್ನು ಉಳಿಸಿಕೊಂಡು, ಬೇರೆ ಪಕ್ಷಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ.












Click it and Unblock the Notifications