ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ಹೊಸ ಬಿರುದು ಕೊಟ್ಟ ರಾಹುಲ್ ಗಾಂಧಿ: ತೀವ್ರ ವಾಗ್ದಾಳಿ

|
Google Oneindia Kannada News

ನವದೆಹಲಿ, ಜುಲೈ 20: "ಪ್ರಬಲ ನಾಯಕ ಎನ್ನುವ ನಕಲಿ ಇಮೇಜಿನಿಂದ ಅಧಿಕಾರಕ್ಕೆ ಬಂದರು, ಅದು ಅವರ ಶಕ್ತಿಯಾಗಿತ್ತು. ಈಗ, ಅದೇ ದೇಶಕ್ಕೆ ದೌರ್ಬಲ್ಯವಾಗಿ ಪರಿಣಮಿಸಿದೆ"ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

Recommended Video

Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

ಲಡಾಖ್ ನಲ್ಲಿ ಭಾರತದ ಇಪ್ಪತ್ತು ಯೋಧರು ಹುತಾತ್ಮರಾದದ್ದನ್ನು ಹೊಸ ವಿಡಿಯೋದ ಮೂಲಕ ರಾಹುಲ್ ಗಾಂಧಿ, ಮೋದಿಯವರನ್ನು 'ನಕಲಿ ಸ್ಟ್ರಾಂಗ್ ಮ್ಯಾನ್' ಎಂದು ಲೇವಡಿ ಮಾಡಿದ್ದಾರೆ.

ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್

"ಚೀನಾ ಮುಂದಾಲೋಚನೆ ಇಲ್ಲದೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಚೀನಾದವರು ಜಗತ್ತನ್ನೇ ರೂಪಿಸಲು ಹೊರಟಿದ್ದಾರೆ. ಹಾಗಾಗಿ, ಚೀನಾದ ಕಾರ್ಯತಂತ್ರವನ್ನು ಮೊದಲು ಅರಿಯಬೇಕಿದೆ"ಎಂದು ರಾಹುಲ್, ಪ್ರಧಾನಿ ಮೋದಿಗೆ ಸಲಹೆಯನ್ನು ನೀಡಿದ್ದಾರೆ.

Congress Leader Rahul Gandhi Fresh Attack Over China, PM Fabricated Strongman Image

"ಪಾಕಿಸ್ತಾನದ ಜೊತೆಗೆ ಸೇರಿಕೊಂಡು ಕಾಶ್ಮೀರದಲ್ಲಿ ಏನಾದರೂ ಕಿತಾಪತಿಯನ್ನು ಮಾಡಿ, ಭಾರತದ ಮೇಲೆ ಒತ್ತಡ ತರುವ ಕೆಲಸವನ್ನು ಚೀನಾ ಮಾಡಬಹುದು"ಎಂದು ರಾಹುಲ್ ಗಾಂಧಿ ಎಚ್ಚರಿಕೆಯನ್ನು ನೀಡಿದ್ದಾರೆ.

"ಭಾರತ ಮತ್ತು ಚೀನಾದ ನಡುವಿನ ಉದ್ವಿಗ್ನತೆಯನ್ನು ಬರೀ ಗಡಿ ವಿವಾದ ಎಂದು ಹೇಳಲು ಬರುವುದಿಲ್ಲ. ಚೀನಾ ನಮ್ಮ ಪ್ರದೇಶವನ್ನು ಆಕ್ರಮಿಸಿಯಾಗಿದೆ. ಆದರೆ, ನಮ್ಮ ಪ್ರಧಾನಿ, ನಮ್ಮ ಒಂದಿಂಚೂ ಜಾಗ ಅತಿಕ್ರಮಣ ನಡೆದಿಲ್ಲ ಎಂದು ಹೇಳುತ್ತಾರೆ"ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

"ನನ್ನ ಪ್ರಕಾರ ಮೋದಿಗೆ ಅವರ ಇಮೇಜ್ ಅನ್ನು ಉಳಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಚಿಂತೆಯಿದೆ"ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ''ಈ ವಾರಾಂತ್ಯಕ್ಕೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಲಿದೆ. ಅದೇ ರೀತಿ ಆಗಸ್ಟ್ 10ರೊಳಗೆ ಅದರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು'' ಎಂದು ರಾಹುಲ್ ಕೆಲವು ದಿನಗಳ ಹಿಂದೆ ಒತ್ತಾಯಿಸಿದ್ದರು.

English summary
Congress Leader Rahul Gandhi Fresh Attack Over China, PM Fabricated Strongman Image,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X