ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಪಕ್ಷಗಳ ಆದಾಯ, ಖರ್ಚಿನ ಲೆಕ್ಕ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ದೇಶದ ಏಳು ರಾಷ್ಟ್ರೀಯ ಪಕ್ಷಗಳು 2015-16ನೇ ಸಾಲಿನಲ್ಲಿ 1.033 ಕೋಟಿ ಆದಾಯ ಪಡೆದಿವೆ ಎಂದು ಎಡಿಆರ್ ವರದಿ ಹೇಳಿದೆ. ಇದರಲ್ಲಿ 278 ಕೋಟಿ ಹಣವನ್ನು ಖರ್ಚು ಮಾಡಿಲ್ಲ. 754 ಕೋಟಿ ಹಣ ಖರ್ಚಾಗಿದೆ.

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫ್ರಾಮ್ಸ್‌ (ಎಡಿಆರ್) ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ 570.86 ಕೋಟಿ, ಕಾಂಗ್ರೆಸ್ 261.56 ಕೋಟಿ ಆದಾಯಗಳಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Congress collected Rs 167.96 crore through sale of coupons for poll funds

2014-15ರ ಅವಧಿಯಲ್ಲಿ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಹೆಚ್ಚಿನ ಆದಾಯವನ್ನುಗಳಿಸಿದೆ. ಆಗ ಘೋಷಣೆ ಮಾಡಿದ್ದ ಆದಾಯ ಒಟ್ಟು 970.43 ಕೋಟಿ. 2015-16ರ ಅವಧಿಯಲ್ಲಿ ಪಕ್ಷದ ಆದಾಯ ಶೇ 41.17 ರಷ್ಟು ಕಡಿಮೆ ಆಗಿದೆ ಎಂದು ವರದಿ ಹೇಳಿದೆ.

ಅನಾಮಿಕವಾಗಿ ಬಂದ ಆದಾಯದಲ್ಲಿ Voluntary Contributions ಮೂಲಕ ಹಣ ಪಡೆಯಲಾಗಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫ್ರಾಮ್ಸ್‌ ನೀಡಿರುವ ವರದಿಯ ಅಂಕಿ-ಸಂಖ್ಯೆಗಳು ಹೀಗಿವೆ...

ಬಿಜೆಪಿಯ ಆದಾಯದ ವಿವರ

ಬಿಜೆಪಿಯ ಆದಾಯದ ವಿವರ

ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಆದಾಯ ಹೆಚ್ಚಿದೆ. 2014-15 ಅವಧಿಯಲ್ಲಿ ಹೆಚ್ಚು ಆದಾಯಗಳಿಸಿದೆ. 2014-15ರ ಅವಧಿಯಲ್ಲಿ 970.43 ಕೋಟಿ ಆದಾಯವನ್ನು ಪಕ್ಷ ಘೋಷಿಸಿದೆ. 2015-16ನೇ ಸಾಲಿನಲ್ಲಿ 570.86 ಕೋಟಿ ಆದಾಯಗಳಿಸಿದ್ದು, ಶೇ 41.17ರಷ್ಟು ಇಳಿಕೆಯಾಗಿದೆ.

2ನೇ ಸ್ಥಾನದಲ್ಲಿ ಕಾಂಗ್ರೆಸ್

2ನೇ ಸ್ಥಾನದಲ್ಲಿ ಕಾಂಗ್ರೆಸ್

ಕಾಂಗ್ರೆಸ್ ಪಕ್ಷ ಆದಾಯಗಳಿಕೆಯಲ್ಲಿ 2ನೇ ಸ್ಥಾನದಲ್ಲಿದೆ. 2014-15ನೇ ಅವಧಿಯಲ್ಲಿ 593.31 ಕೋಟಿ ಆದಾಯಗಳಿಸಿದ್ದರೆ. 2015-16ರಲ್ಲಿ 261.56 ಕೋಟಿ ಆದಾಯ ಬಂದಿದೆ. 2015-16ನೇ ಅವಧಿಯಲ್ಲಿ ಪಕ್ಷದ ಆದಾಯ ಶೇ 55.92ರಷ್ಟು ಕುಸಿತಕಂಡಿದೆ.

ಆದಾಯ ಸರಿ, ವೆಚ್ಚ?

ಆದಾಯ ಸರಿ, ವೆಚ್ಚ?

ಬಿಜೆಪಿಯ 570.86 ಕೋಟಿ ಆದಾಯದಲ್ಲಿ 132.06 ಕೋಟಿ ಆದಾಯ ಖರ್ಚಾಗಿಲ್ಲ. ಕಾಂಗ್ರೆಸ್ ಪಕ್ಷದ 261.56 ಕೋಟಿ ಆದಾಯದಲ್ಲಿ 68.30 ಕೋಟಿ ಆದಾಯವನ್ನು ಖರ್ಚು ಮಾಡಿಲ್ಲ.

ಸ್ವಯಂ ಪ್ರೇರಿತ ಕೊಡುಗೆ

ಸ್ವಯಂ ಪ್ರೇರಿತ ಕೊಡುಗೆ

ಅನಾಮಧೇಯ ಆದಾಯದಲ್ಲಿ ಸ್ವಯಂ ಪ್ರೇರಿತ ಕೊಡುಗೆಗಳ ಮೂಲಕ 2015-16ರಲ್ಲಿ ಬಿಜೆಪಿ 459.56 ಕೋಟಿ ಆದಾಯಗಳಿಸಿದೆ. ಕಾಂಗ್ರೆಸ್ ಕೂಪಸ್ ಸೇಲ್ ಮೂಲಕ 167.96 ಕೋಟಿ ಆದಾಯವನ್ನು 201-16ರಲ್ಲಿ ಗಳಿಸಿದೆ.

English summary
The total income of the 7 national parties for the years 2015-16 was Rs 1,033 crore of which Rs 754 crore was declared as spent while Rs 278 was unspent. BJP’s total declared income was Rs 570.86 crore out of which 23.13% or Rs 132.06 crore remained unspent, the Association for Democratic Reforms has said in a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X