ಮತ್ತೆ ಲಾಕ್‌ಡೌನ್ ಮೊರೆ ಹೋದ ಅಸ್ಸಾಂ ಸರ್ಕಾರ
ದೆಹಲಿ, ಜೂನ್ 26: ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಹಲವು ರಾಜ್ಯಗಳು ಮತ್ತೆ ಲಾಕ್‌ಡೌನ್ ಮಂತ್ರ ಜಪಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಆದೇಶ, ಸೂಚನೆ ನೀಡಿಲ್ಲ. ರಾಜ್ಯ ಸರ್ಕಾರಗಳು ಸ್ವ-ಹಿತಾಸಕ್ತಿಯಿಂದ ವಾರ್ಡ್, ಜಿಲ್ಲೆಗಳನ್ನು ಲಾಕ್‌ಡೌನ್ ಮಾಡುತ್ತಿವೆ.
Recommended Video
ಈಗ ಅಸ್ಸಾಂ ಸರ್ಕಾರ ಕಮ್ರೂಪ್ ಜಿಲ್ಲೆಯನ್ನು ಲಾಕ್‌ಡೌನ್ ಮಾಡುವುದಾಗಿ ಘೋಷಿಸಿದೆ. ಜೂನ್ 28ನೇ ತಾರೀಕು ಮಧ್ಯರಾತ್ರಿಯಿಂದ 14 ದಿನಗಳವರೆಗೂ ಕಂಪ್ಲೀಟ್ ಲಾಕ್‌ಡೌನ್ ಮಾಡಲು ನಿರ್ಧರಿಸಿದೆ. ಮೆಡಿಕಲ್ ಶಾಪ್‌ಗಳು ತೆರೆಯವುದಕ್ಕೆ ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಸಚಿವ ಹಿಮಾಂಶು ಬಸ್ವಾ ಶರ್ಮಾ ತಿಳಿಸಿದ್ದಾರೆ.
Complete lockdown to be imposed in the entire Kamrup Metropolitan district from the midnight of 28th June for the next 14 days, due to rise in COVID19 cases. Medical stores to remain open during the lockdown: Assam Health Minister Himanta Biswa Sarma pic.twitter.com/GST9X67fvH
— ANI (@ANI) June 26, 2020
ನಗರ ಪ್ರದೇಶಗಳಲ್ಲಿ ವಾರಾಂತ್ಯಕ್ಕೆ ಲಾಕ್‌ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಶನಿವಾರ ಮತ್ತು ಭಾನುವಾರ ನಗರ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಮುಂದಿನ ಆದೇಶದವರೆಗೂ ಪಟ್ಟಣ ಸಮಿತಿಗಳು ಮತ್ತು ಪುರಸಭೆಗಳ ವ್ಯಾಪ್ತಿಗೆ ಬರುವ ಪ್ರದೇಶಗಳು ಸಹ ವಾರಾಂತ್ಯದ ಲಾಕ್‌ಡೌನ್ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಈವರೆಗೂ 6647 ಮಂದಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. 4034 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 2601 ಕೇಸ್‌ಗಳು ಸಕ್ರಿಯವಾಗಿದೆ. ಒಟ್ಟು 9 ಮಂದಿ ಅಸ್ಸಾಂನಲ್ಲಿ ಸಾವನ್ನಪ್ಪಿದ್ದಾರೆ.
ತಮಿಳುನಾಡಿನಲ್ಲಿ ಚೆನ್ನೈ ಸೇರಿದಂತೆ ನಾಲ್ಕು ಜಿಲ್ಲೆಗಳನ್ನು ಕಂಪ್ಲೀಟ್ ಲಾಕ್‌ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಲವು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.












Click it and Unblock the Notifications