ಋತುಸ್ರಾವ ಮೊದಲ ದಿನ ಮಹಿಳಾ ಉದ್ಯೋಗಿಗಳಿಗೆ ಖಾಸಗಿ ಕಂಪೆನಿ ರಜಾ ಘೋಷಣೆ

Posted By:
Subscribe to Oneindia Kannada

ನವದೆಹಲಿ, ಜುಲೈ 12 : ಋತುಸ್ರಾವದ ಮೊದಲ ದಿನ ಮಹಿಳಾ ಉದ್ಯೋಗಿಗಳಿಗೆ ರಜಾ ನೀಡುವ ವಿಚಾರವಾಗಿ ದೇಶದ ಎರಡು ಕಂಪೆನಿಗಳು ತೆಗೆದುಕೊಂಡ ನಿರ್ಧಾರ ಮೆಚ್ಚುಗೆಗೆ ಹಾಗೂ ಸಕಾರಾತ್ಮಕವಾದ ಚರ್ಚೆಯೊಂದಕ್ಕೆ ಕಾರಣವಾಗಿದೆ.

ಮುಂಬೈ ಮೂಲದ ಕಲ್ಚರಲ್ ಮಷಿನ್ ಕಂಪೆನಿ 'ಮಹಿಳೆಯರು ಋತುಸ್ರಾವದ ಮೊದಲ ದಿನ ರಜಾ ತೆಗೆದುಕೊಳ್ಳಬಹುದು' ಎಂದು ಹೇಳಿದೆ. ಆ ಕಂಪೆನಿಯ ನಿರ್ಧಾರ ಸ್ವಾಗತಿಸಿದ ಗೋಜೂಪ್ ಕಂಪೆನಿಯೂ ಈ ನಿಯಮವನ್ನು ಜಾರಿಗೆ ತಂದಿದೆ.

ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಬೇಡ ಎಂದು ಹೇಳಿಲ್ಲː ಮಾಳವಿಕಾ

Company in Mumbai is giving women a day off during their periods

"ಋತುಸ್ರಾವದ ಮೂರರಿಂದ ನಾಲ್ಕು ದಿನ ಹೆಣ್ಣುಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಶ್ರಮದ ಕೆಲಸ ಕೊಡಲೇಬಾರದು. ಆ ಕಾರಣಕ್ಕೆ ನಮ್ಮ ಹಿರಿಯರು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕೋಣೆ ಬಿಟ್ಟುಕೊಟ್ಟು ಯಾವುದೇ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅದರಲ್ಲಿ ಇದ್ದದ್ದು ಆರೋಗ್ಯ ಕಾಳಜಿಯೇ ಹೊರತು ಮೂಢನಂಬಿಕೆಯಲ್ಲ. ರಜಾ ಕೊಡುವ ನಿರ್ಧಾರ ಸ್ವಾಗತಾರ್ಹ" ಎನ್ನುತ್ತಾರೆ ಬೆಂಗಳೂರು ಮೂಲದ ಆಯುರ್ವೇದ ವೈದ್ಯರು.

ಇನ್ನು ತಮ್ಮ ಕಂಪೆನಿಯ ಹೊಸ ನಿಯಮದ ಬಗ್ಗೆ ಮಹಿಳಾ ಉದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ಕಂಪೆನಿಗಳಲ್ಲಿ ಜಾರಿಗೆ ತಂದಿರುವ ಈ ನಿಯಮ ದೇಶದಾದ್ಯಂತ ಚಾಲ್ತಿಗೆ ಬರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಗೆ ಎಂದು ಕಲ್ಚರಲ್ ಮಷಿನ್ ಕಂಪೆನಿ ಮನವಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Culture Machine- A Mumbai-based media company has introduced a “First Day of Period” leave policy for women employees. Company applied this policy from July this year.
Please Wait while comments are loading...