ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನ ವಡೋದರಾದಲ್ಲಿ ಕೋಮು ಘರ್ಷಣೆ: 19 ಜನರ ಬಂಧನ

|
Google Oneindia Kannada News

ವಡೋದರಾ, ಅಕ್ಟೋಬರ್‌ 25: ಗುಜರಾತ್‌ನ ವಡೋದರಾದಲ್ಲಿ ದೀಪಾವಳಿ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶವಾದ ವಡೋದರಾದ ಪಾಣಿಗೇಟ್‌ ಬಳಿ ಮಂಗಳವಾರ ಮಧ್ಯರಾತ್ರಿ 12.45ರ ಸುಮಾರಿಗೆ ಘರ್ಷಣೆ ನಡೆದಿದೆ. ಈ ಘರ್ಷಣೆಯು ಪಟಾಕಿ ಸಿಡಿಸುವ ವಿಚಾರವಾಗಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಮು ದ್ವೇಷ ಪ್ರಚೋದನೆ; 10 ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ ಕೋಮು ದ್ವೇಷ ಪ್ರಚೋದನೆ; 10 ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ

ಈ ಘರ್ಷಣೆ ಸಂಭವಿಸಿದ ಒಂದು ಗಂಟೆಯ ಬಳಿಕೆ ಸ್ಥಳೀಯ ವ್ಯಕ್ತಿಯೊಬ್ಬ ತನ್ನ ಮನೆಯ ಮೂರನೇ ಮಹಡಿಯಿಂದ ಪೊಲೀಸರ ಮೇಲೆ ಪೆಟ್ರೋಲ್‌ ಬಾಂಬ್‌ ಅನ್ನು ಎಸೆದಿದ್ದಾನೆ. ಈ ಆರೋಪಿಯನ್ನೂ ಬಂಧಿಸಲಾಗಿದೆ ಎಂದು ವಡೋದರಾ ಉಪ ಪೊಲೀಸ್ ಆಯುಕ್ತ ಯಶಪಾಲ್ ಜಗನಿಯಾ ಹೇಳಿದ್ದಾರೆ.

Communal Clash In Gujarat Vadodara On Diwali Hindu -Muslim 19 Detained Cops

ರಾಕೆಟ್‌ ಪಟಾಕಿ ಸಿಡಿದ ಸ್ಥಳದಲ್ಲಿದ್ದ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ವಿಚಾರವಾಗಿ ಎರಡು ಕೋಮಿನವರ ನಡುವೆ ಜಗಳ ಆರಂಭವಾಗಿದೆ. ಆ ನಂತರ ಎರಡೂ ಸಮುದಾಯಗಳ ಜನರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿ ಉಂಟಾಗಿದೆ ಎಂದು ಜಗನಿಯಾ ತಿಳಿಸಿದ್ದಾರೆ.

ಪ್ರಕರಣದ ಬಳಿಕ ವಡೋದರಾದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈಗ ಪರಿಸ್ಥಿತಿ ಸಂಪೂರ್ಣ ಹತೋಟೆಯಲ್ಲಿದೆ ಅವರು ಹೇಳಿದ್ದಾರೆ. ಘರ್ಷಣೆಯಲ್ಲಿ ತೊಡಗಿದ ಶಂಕಿತರನ್ನು ಬಂಧಿಸಲಾಗುತ್ತಿದೆ. ಬಂಧಿತರಲ್ಲಿ ಎರಡೂ ಸಮೂದಾಯದವರು ಸೇರಿದ್ದಾರೆ. ಮನೆಮನೆಗೆ ತೆರಳಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗುಜರಾತ್‌ ವಿಧಾನಸಭೆಗೆ ಕೆಲ ದಿನಗಳಲ್ಲಿ ಚುನಾವಣೆ ನಡೆಯುತ್ತಿದೆ. ಕೋಮು ಸೂಕ್ಷ್ಮ ರಾಜ್ಯವಾದ ಗುಜರಾತ್‌ನಲ್ಲಿ ಮತ್ತೆ ಘರ್ಷಣೆಗಳು ಕಾಣಿಸಿಕೊಂಡಿವೆ. ಅಲ್ಲಿನ ಆಢಳಿತಾರೂಢ ಬಿಜೆಪಿ ಸರ್ಕಾರವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

English summary
Members of Hindu Muslim communities clashed over the bursting of firecrackers in a locality in Gujarat's Vadodara city on Diwali following which police detained 19 people from the two sides, an official said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X