Breaking: ಚೀನಾ-ಭಾರತ ಸಂಘರ್ಷ: ಚೀನಾ ಕಮಾಂಡಿಂಗ್ ಅಧಿಕಾರಿ ಹತ್ಯೆ
ಲಡಾಖ್, ಜೂನ್ 17: ಪೂರ್ವ ಲಡಾಖ್‌ನಲ್ಲಿರುವ ಗುಲ್ವಾನ್ ಕಣಿವೆಯಲ್ಲಿ ಮಂಗಳವಾರ ಸಂಜೆ ನಡೆದ ಚೀನಾ-ಭಾರತ ನಡುವಿನ ಸಂಘರ್ಷದಲ್ಲಿ ಚೀನಾ ಕಮಾಂಡಿಂಗ್ ಅಧಿಕಾರಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
Recommended Video
ಜೂನ್ 15 ಹಾಗೂ 16 ರಂದು ಉಭಯ ರಾಷ್ಟ್ರಗಳ ಸೇನೆಯ ನಡುವೆ ಘರ್ಷಣೆ ನಡೆದಿತ್ತು. ಸೋಮವಾರ ನಡೆದ ಘರ್ಷಣೆಯಲ್ಲಿ ಮೂವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
ಮಂಗಳವವಾರ ಸಂಜೆ ನಡೆದ ದಾಳಿಯಲ್ಲಿ 20 ಮಂದಿ ಭಾರತೀಯರು ಹುತಾತ್ಮರಾಗಿದ್ದರೆ 35 ಕ್ಕೂ ಹೆಚ್ಚು ಚೀನಾ ಸೈನಿಕರನ್ನು ಹೊಡೆದುರುಳಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅದರಲ್ಲಿ ಚೀನಾ ಕಮಾಂಡಿಂಗ್ ಅಧಿಕಾರಿ ಕೂಡ ಒಬ್ಬರು ಎನ್ನಲಾಗಿದೆ.

ಸೋಮವಾರ ಹಾಗೂ ಮಂಗಳವಾರ (ಜೂನ್ 15,16 ) ನಡೆದ ಸಂಘರ್ಷದ ಬಳಿಕ, ಚೀನಾ ಸೇನೆಯ ಹೆಲಿಕಾಪ್ಟರ್‌ಗಳು ತನ್ನ ಸೇನೆಯ ಮೃತ ಯೋಧರ ಶವ ಸಾಗಿಸಲು ಹಾಗೂ ಗಾಯಗೊಂಡವರನ್ನು ರಕ್ಷಿಸಲು ಧಾವಿಸಿದೆ.
ಚೀನಿ ಹೆಲಿಕಾಪ್ಟರ್‌ಗಳ ಹಾರಾಟವನ್ನು ಭಾರತೀಯ ಸೇನೆ ಗುರುತಿಸಿದೆ. ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೇನೆ ಮುಖಾಮುಖಿಯಾಗಿದ್ದು, ಎರಡೂ ಸೇನೆಗಳಿಗೆ ಈ ಗುದ್ದಾಟದಲ್ಲಿ ಅಪಾರ ಹಾನಿ ಸಂಭವಿಸಿದೆ.
ಸೋಮವಾರ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ಘರ್ಷಣೆ ಹಿನ್ನೆಲೆ ಇನ್ನೂ ನಾಲ್ಕು ಭಾರತೀಯ ಯೋಧರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ ಎಂದು ಎಎನ್ಐ ವರದಿ ಮಾಡಿದೆ.
ಈ ಘರ್ಷಣೆಯಲ್ಲಿ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ನಾಲ್ಕು ಜನ ಯೋಧರು ಬದುಕುಳಿದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಎಎನ್ಐ ಹೇಳಿದೆ. ಹಿಂಸಾತ್ಮಕ ಚಕಮಕಿಯಲ್ಲಿ 43 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ತಿಳಿಸಿದೆ.












Click it and Unblock the Notifications