IMD Weather Forecast: 05 ದಿನ ಈ ಭಾಗಗಳಲ್ಲಿ ಶೀತ ಅಲೆ, ಒಣ ಹವೆ ಅಲರ್ಟ್, ಮಳೆ ಮುನ್ಸೂಚನೆ
India Weather Alert: ದೇಶದೆಲ್ಲಡೆ ಮಳೆ ಹವಾಮಾನ ಪರಿಸ್ಥಿತಿ ಕುಗ್ಗಿದೆ. ಹಿಂಗಾರು ಮಳೆ ದುರ್ಬಲಗೊಂಡಿದ್ದು, ದಕ್ಷಿಣ ಹಾಗೂ ಉತ್ತರ ಭಾರತದ ಪ್ರಮುಖ ರಾಜ್ಯಗಳು, ಮಹಾನಗರಗಳಲ್ಲಿ ಚಳಿ ಆವರಿಸಿದೆ. ಬೆಳಬೆಳಗ್ಗೆ ದಟ್ಟ ಮಂಜು, ಮೈಕೊರೆವ ಚಳಿ ಆವರಿಸುತ್ತಿದೆ. ಇದೇ ವಾತಾವರಣ ಮುಂದಿನ 05 ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿ ಸಮುದ್ರ ಮೇಲ್ಭಾಗದಲ್ಲಿ 1.5 ಕಿಲೋ ಮೀಟರ್ ಎತ್ತರದವರೆಗ ಟ್ರಫ್ ಸೃಷ್ಟಿಯಾಗಿದೆ. ಪೂರ್ವ ಭಾರತದ ಪ್ರದೇಶದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 12 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಬಾಂಗ್ಲಾದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈ ಚಂಡಮಾರುತ ಪರಿಚಲನೆ ಉಂಟಾಗಿದೆ ಎಂದು ಬುಧವಾರದ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಲಾಗಿದೆ.

ಈ ಭಾಗಗಳಲ್ಲಿ ಶೀತದ ಅಲೆ ಮುನ್ಸೂಚನೆ
ಸದ್ಯ ವ್ಯಾಪಕ ಮಳೆ ಲಕ್ಷಣಗಳು ಕಾಣಿಸುತ್ತಿಲ್ಲ. ಬದಲಾಗಿ ಶೀತದ ಅಲೆಯ ಎಚ್ಚರಿಕೆ ಇದೆ. ದೇಶದ ಛತ್ತೀಸ್‌ಗಢ, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಉತ್ತರ ಕರ್ನಾಟಕದ ಒಳನಾಡು, ಒಡಿಶಾ, ಪಂಜಾಬ್, ತೆಲಂಗಾಣ ಮತ್ತು ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದೆ. ಇಲ್ಲಿ ತೀವ್ರ ಸ್ವರೂಪದಲ್ಲಿ ತೇವ ಭರಿತ ಗಾಳಿ ಬೀಸಲಿದೆ. ಮೈಕೊರೆವ ಚಳಿ ಕಂಡು ಬರಲಿದೆ.
55 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತೆ..
ಇನ್ನೂ ಅಸ್ಸಾಂ ಮತ್ತು ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಪೂರ್ವ ಉತ್ತರ ಪ್ರದೇಶ, ನಾಗಾಲ್ಯಾಂಡ್ ಹಾಗೂ ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಬೀಳುವ ಸಾಧ್ಯತೆ ಹೆಚ್ಚು. ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವರೆಗೆ ಗಾಳಿಯ ವೇಗದೊಂದಿಗೆ 55 ಕಿ.ಮೀ ವರೆಗೆ ಗಾಳಿಯ ವೇಗದೊಂದಿಗೆ ಬಿರುಗಾಳಿ ಬೀಸುವ ನಿರೀಕ್ಷೆ ಇದೆ. ಮುಂದಿನ ಐದು ದಿನ ಈ ಕರಾವಳಿ ಭಾಗದಲ್ಲಿ ಥಂಢಿ ಆವರಿಸಲಿದೆ.
ದೆಹಲಿ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಒಡಿಶಾ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ಕನಿಷ್ಠ ತಾಪಮಾನ ಕುಸಿದಿದೆ. ಇಲ್ಲಿ ಶೀತದ ಅಲೆ ಎಚ್ಚರಿಕೆ ನೀಡಲಾಗಿದೆ. ಮಧ್ಯಾಹ್ನ ಬಿರು ಬಿಸಲು ಕಾಡಲಿದ್ದು, ಗರಿಷ್ಟ ತಾಪಮಾನದಲ್ಲಿ ಭಾರೀ ಹೆಚ್ಚಾಗುವ ನಿರೀಕ್ಷೆ ಇದೆ. ಮುಂದಿನ ಕೆಲವು ದಿನಗಳ ಕಾಲ ಒಣಹವೆಯೇ ಮುಂದುವರಿಯಲಿದೆ.
ಈ ಭಾಗಗಳಲ್ಲಿ ಮಳೆ ಎಚ್ಚರಿಕೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಆಗಲಿದೆ. ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.












Click it and Unblock the Notifications