ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ: ತೆಂಗು ಬೆಳಗಾರರ ಮೊಗದಲ್ಲಿ ಮಂದಹಾಸ

ನವದೆಹಲಿ ಡಿಸೆಂಬರ್ 23: ತೆಂಗು ಬೆಳೆಗಾರರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ಈ ಮೂಲಕ ಒಣ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಸರ್ಕಾರ ಹೆಚ್ಚಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗಳಿಗೆ (MSPs) ಅನುಮೋದನೆಯನ್ನು ನೀಡಿದೆ.

ಇದರಿಂದ ತೆಂಗು ಬೆಳೆಯುವ ರೈತರಿಗೆ ಎಂಎಸ್‌ಪಿ ಕೊಡುಗೆ ನೀಡಲಾಗಿದೆ. ಕೊಬ್ಬರಿ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.ಇದು ತೆಂಗು ಕೃಷಿಯಲ್ಲಿ ತೊಡಗಿರುವ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ದೇಶದ 12 ಕರಾವಳಿ ರಾಜ್ಯಗಳ ರೈತರ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರಕಾರ ಕೈಗೊಂಡ ಹಲವು ನಿರ್ಧಾರಗಳಲ್ಲಿ ಒಂದಾಗಿದೆ.

ಹೋಳು ಕೊಬ್ಬರಿ ಮತ್ತು ಉಂಡೆ ಕೊಬ್ಬರಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ಕ್ರಮವಾಗಿ 255ರಷ್ಟು ಮತ್ತು 400ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು 2022ನೇ ಸಾಲಿನ ಕನಿಷ್ಠ ಬೆಂಬಲ ಬೆಲೆಗೆ ಒಪ್ಪಿಗೆ ನೀಡಿದೆ.

Coconut Support Price Increase:Good news for coconut growers from the Modi government

2021ರಲ್ಲಿ 10,335 ರೂಪಾಯಿ ಇದ್ದ ಒಣ ಕೊಬ್ಬರಿ ಬೆಲೆಯನ್ನು 2022ರಲ್ಲಿ 10,590ಕ್ಕೆ ಹೆಚ್ಚಿಸಲಾಗಿದೆ. ಇನ್ನೂ 2021 ರಲ್ಲಿ 10,600 ರೂಪಾಯಿ ಇದ್ದ ಚೆಂಡು ಕೊಬ್ಬರಿಗೆ 2022ರಲ್ಲಿ ಕನಿಷ್ಠ ಬೆಲೆಯನ್ನು 11,000ಕ್ಕೆ ಹೆಚ್ಚಿಸಲಾಗಿದೆ ಎಂದು CCEA ಹೇಳಿದೆ. ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಒಣ ಕೊಬ್ಬರಿಗೆ 51.85% ಮತ್ತು ಚಂಡು ಕೊಬ್ಬರಿಗೆ 57.73% ನಷ್ಟು ಲಾಭವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕ್ಯಾಬಿನೆಟ್ ಹೇಳಿದೆ.

ಈ ನಿರ್ಧಾರವು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳನ್ನು ಆಧರಿಸಿದೆ. ಇದು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಮತ್ತು ಪ್ರಗತಿಪರ ಹಂತಗಳಲ್ಲಿ ಒಂದಾದ ಕನಿಷ್ಠ 50% ಲಾಭದ ಮಾರ್ಜಿನ್ ಅನ್ನು ಖಾತರಿಪಡಿಸುತ್ತದೆ.

ಈಗಿನ ಬೆಂಬಲ ಬೆಲೆ ಹೆಚ್ಚಳ 2018-19ರಲ್ಲಿ ಘೋಷಣೆ ಮಾಡಿದ ಎಂಎಸ್​ಪಿ ನೀತಿಯನ್ನು ಆಧರಿಸಿದೆ ಎಂದು ಕೃಷಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಈಗಿನ ಎಂಎಸ್​ಪಿ ಹೆಚ್ಚಳ ನಿರ್ಧಾರವು ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸುಗಳನ್ನು ಆಧರಿಸಿದ್ದು, ಇದು 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ.

ಈ ಹಿಂದೆ ಜನವರಿಯಲ್ಲಿ 27 ರಂದು ಕೊಬ್ಬರಿಗೆ ಇದ್ದ ಕನಿಷ್ಠ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 375 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈ ಹಿಂದೆ ಪ್ರತಿ ಕ್ವಿಂಟಾಲ್ ಗೆ 9960 ರೂಪಾಯಿ ಇದ್ದ ಬೆಲೆ ಈಗ 10335 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಪ್ರತಿ ಕ್ವಿಂಟಾಲ್‌ಗೆ 14 ರಿಂದ 15 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದೀಗ ಕೇಂದ್ರ ಸರಕಾರ ಕೊಬ್ಬರಿ ಬೆಲೆಯನ್ನು 10 ಸಾವಿರದ ಆಸುಪಾಸಿಗೆ ನಿಲ್ಲಿಸಿರುವುದು ಒಂದು ರೀತಿಯ ಅಭಾಸ ಎನಿಸಿತ್ತು.

ಪ್ರಸ್ತುತ ಕರ್ನಾಟಕದ ಕೆ.ಆರ್ ಪೇಟೆಯಲ್ಲಿ ಕೊಬ್ಬರಿಯ ಕನಿಷ್ಠ ಬೆಲೆ ಕ್ವಿಂಟಲ್ ಗೆ 9,970 ರಿಂದ ಗರಿಷ್ಠ 10,000ರಷ್ಟಿದೆ. ಚನ್ನರಾಯಪಟ್ಟಣದಲ್ಲಿ ಕನಿಷ್ಠ 6,500 ಗರಿಷ್ಠ ಬೆಲೆ 6,500 ರಷ್ಟಿದೆ. ಪುತ್ತೂರು ಮಾರುಕಟ್ಟೆಗಳಲ್ಲಿ ಕನಿಷ್ಠ 4,500ರಿಂದ ಗರಿಷ್ಠ ಬೆಲೆ11,500 ರಷ್ಟಿದ್ದರೆ, ತುರುವೇಕೆರೆಯಲ್ಲಿ ಕನಿಷ್ಠ 17,800 ಗರಿಷ್ಠ 17,900 ರಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+