ಐಬಿಎನ್ ಸಮೀಕ್ಷೆ: ಅಧಿಕಾರದತ್ತ ಬಿಜೆಪಿ ಹತ್ತಿರ, ಇನ್ನೂ ಹತ್ತಿರ
ನವದೆಹಲಿ, ಜ 25: ಬಿಜೆಪಿ ನೇತೃತ್ವದ NDA ಒಕ್ಕೂಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸೀಟು ಗೆಲ್ಲಲಿದೆ ಎನ್ನುತ್ತದೆ ಐಬಿಎನ್ ಜಂಟಿಯಾಗಿ ನಡೆಸಿದ ಸಮೀಕ್ಷೆ. ನರೇಂದ್ರ ಮೋದಿ ಅಲೆ ಯುಪಿಎ ಒಕ್ಕೂಟವನ್ನು ಅಧಿಕಾರದಿಂದ ದೂರವಿಡಲಿದ್ದು, ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಲಿದೆ.
ಸಿಎನ್ಎನ್ - ಐಬಿಎನ್-ಸಿಎಸ್ಡಿಎಸ್ - ಲೋಕನೀತಿ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ (ಹದಿನೆಂಟು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆ), ಮತದಾರ ಯಾರನ್ನು ಪ್ರಧಾನಿಯಾಗ ಬೇಕೆಂದು ಬಯಸಿದ್ದಾನೆ ಎನ್ನುವ ಪ್ರಶ್ನೆಗೆ ಮೊದಲ ಮತ್ತು ಎರಡನೇ ಆಯ್ಕೆಯ ನಡುವೆ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ. (ಸಮೀಕ್ಷೆ: ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಯಾರು ಮುಂದೆ)
ಸಮೀಕ್ಷೆಯ ಪ್ರಕಾರ ಪ್ರಧಾನಿ ಪಟ್ಟಕ್ಕೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡುವೆ ಭಾರೀ ವ್ಯತ್ಯಾಸ ತೋರಿ ಬರುತ್ತಿದೆ.
2009ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇವಲ ಶೇ. ಎರಡರಷ್ಟು ಮತದಾರ ಮೋದಿ ಪ್ರಧಾನಿ ಹುದ್ದೆಗೆ ಸೂಕ್ತ ಎಂದಿದ್ದವರು, 2014ರ ಚುನಾವಣೆಯ ಹೊಸ್ತಿಲಲ್ಲಿ ಮೋದಿಯೇ ಅತ್ಯಂತ ಸೂಕ್ತ ಆಯ್ಕೆ ಎಂದಿದ್ದಾನೆ. (ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಸ್ಥಾನ)
ಕರ್ನಾಟಕ ಮತ್ತು ಅಸ್ಸಾಂ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ NDA ಸಾಧನೆ ನಿರೀಕ್ಷೆಗಿಂತ ಹೆಚ್ಚು ಆಶಾದಾಯಕವಾಗಲಿದೆ ಎನ್ನುವುದು ಸಮೀಕ್ಷೆಯ ಪ್ರಮುಖ ಹೈಲೈಟ್ಸ್. ಈ ಬಾರಿಯ ಚುನಾವಣೆಯಲ್ಲಿ ಯುಪಿಎ ಒಕ್ಕೂಟ ನೂರಕ್ಕೂ ಹೆಚ್ಚು ಸ್ಥಾನವನ್ನು ಕಳೆದು ಕೊಳ್ಳಲಿದೆ.
ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಬಹುದು? ಕೊನೇ ಸ್ಲೈಡ್ ನೋಡಿ..

ಪ್ರಧಾನಿ ಹುದ್ದೆಗೆ ಮೋದಿಗೆ ಯಾರು ಪೈಪೋಟಿ
ನರೇಂದ್ರ ಮೋದಿ - ಶೇ. 34
ರಾಹುಲ್ ಗಾಂಧಿ - ಶೇ. 15
ಸೋನಿಯಾ ಗಾಂಧಿ - ಶೇ. 5
ಅರವಿಂದ್ ಕೇಜ್ರಿವಾಲ್ - ಶೇ. 3
ಮನಮೋಹನ್ ಸಿಂಗ್ - ಶೇ. 3
ಮಾಯಾವತಿ - ಶೇ. 2
ಮುಲಾಯಂ ಸಿಂಗ್ ಯಾದವ್ - ಶೇ.2
ನಿತೀಶ್ ಕುಮಾರ್ - ಶೇ. 1
ಎಲ್ ಕೆ ಅಡ್ವಾಣಿ - ಶೇ.1
ಯಾರಾದರೂ ಪರವಾಗಿಲ್ಲ - ಶೇ. 27

ಜಾತಿವಾರು ಲೆಕ್ಕಾಚಾರ
ಜಾತಿವಾರು ಲೆಕ್ಕಾಚಾರದ ಪ್ರಕಾರ ಮೇಲ್ವರ್ಗದ ಶೇ. 48ರಷ್ಟು ಮತದಾರ ಮೋದಿಯನ್ನು, ಶೇ. 11ರಷ್ಟು ರಾಹುಲ್ ಗಾಂಧಿಯನ್ನು ಪ್ರಧಾನಿಗೆ ಸೂಕ್ತವೆಂದು, ಒಬಿಸಿ ಸಮುದಾಯದ ಶೇ. 39 ರಷ್ಟು ಮೋದಿಯನ್ನು ಮತ್ತು ಶೇ. 12ರಷ್ಟು ರಾಹುಲ್ ಗಾಂಧಿಯನ್ನು, ದಲಿತ ಸಮುದಾಯದ ಶೇ. 24ರಷ್ಟು ಮೋದಿ ಮತ್ತು ಶೇ. 16ರಷ್ಟು ರಾಹುಲ್ ಗಾಂಧಿ, ಮುಸ್ಲಿಂ ಸಮುದಾಯದ ಶೇ. 11ರಷ್ಟು ಮಂದಿ ಮೋದಿ ಮತ್ತು ಶೇ. 31ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಆಯ್ಕೆ ಎಂದಿದ್ದಾರೆ.

ಯುಪಿಎ ಅಥವಾ NDA ಹೊರತಾದರೆ
ಈ ಎರಡೂ ಮೈತ್ರಿಕೂಟದ ಹೊರತಾಗಿ ಬೇರೆ ಒಕ್ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷದಲ್ಲಿ ಪ್ರಧಾನಿ ಪಟ್ಟಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಕ್ತ ಆಯ್ಕೆ ಎಂದಿದ್ದಾರೆ. ಕೇಜ್ರಿವಾಲ್ ನಂತರ ಶರದ್ ಪವಾರ್ ಸೂಕ್ತ ಎಂದಿದ್ದಾನೆ ಮತದಾರ.

NDA ಒಕ್ಕೂಟಕ್ಕೆ ಮೋದಿ ಬೇಡವೆಂದರೆ
NDA ಒಕ್ಕೂಟಕ್ಕೆ ಮೋದಿ ಬೇಡವೆಂದಾದರೆ ನಂತರದ ಆಯ್ಕೆ ಎಲ್ ಕೆ ಅಡ್ವಾಣಿ (ಶೇ. 17), ಸುಷ್ಮಾ ಸ್ವರಾಜ್ (ಶೇ. 11), ಶಿವರಾಜ್ ಸಿಂಗ್ ಚೌಹಾಣ್ (ಶೇ. 4), ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅರುಣ್ ಜೆಟ್ಲಿ ಶೇ. 2.

ಯಾರಿಗೆ ಎಷ್ಟು ಸ್ಥಾನ ?
NDA ಒಕ್ಕೂಟ (ಬಿಜೆಪಿ, ಶಿವಸೇನೆ, ಅಕಾಲಿದಳ) - 211 - 231
ಯುಪಿಎ ಒಕ್ಕೂಟ (ಕಾಂಗ್ರೆಸ್, ಎನ್ಸಿಪಿ, ಕೇರಳದ ಮೈತ್ರಿ, ಜೆಎಂಎಂ) - 107- 127
ತೃಣಮೂಲ ಕಾಂಗ್ರೆಸ್ - 20 - 28
ಎಐಡಿಎಂಕೆ - 15 - 23
ಎಡರಂಗ - 15 - 23
ವೈಎಸ್ಆರ್ ಕಾಂಗ್ರೆಸ್ - 11 - 19
ಬಿಜು ಜನತಾದಳ - 10 - 16
ಬಿಎಸ್ಪಿ - 10 - 16
ತೆಲುಗುದೇಶಂ - 9 - 15
ಎಸ್ಪಿ - 8 - 14
ಸಂಯುಕ್ತ ಜನತಾದಳ - 7 - 13
ಡಿಎಂಕೆ - 7 - 13
ಆಮ್ ಆದ್ಮಿ - 6 - 12
RJD - 6 - 10
TRS - 4 - 8
ಜೆಡಿಎಸ್ 4 - 8












Click it and Unblock the Notifications