ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಪರೀಕ್ಷೆಯ ಪರಿಷ್ಕೃತ ನಿಯಮ ಜಾರಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಕೊರೊನಾ ಸೋಂಕು ಪರೀಕ್ಷೆಗೆ ಸಂಬಂಧಿಸಿದಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪರಿಷ್ಕೃತ ನಿಯಮ ಜಾರಿ ಮಾಡಿದೆ.

Recommended Video

ಇದ್ದಕ್ಕಿದ್ದಂತೆ ಮತ್ತೆ ಆಸ್ಪತ್ರೆಗೆ ದಾಖಲಾದ DK ಶಿವಕುಮಾರ್ | Oneindia Kannada

ಈ ಹೊಸ ನಿಯಮದ ಪ್ರಕಾರ ಲಕ್ಷಣಗಳಿಲ್ಲದಿದ್ದರೂ ಯಾರಿಗಾದರೂ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಬೇಕು ಎಂದಾದಲ್ಲಿ ಮಾಡಿಸಬಹುದು ಎಂದು ಹೇಳಿದೆ.

ಭಾರತದಲ್ಲಿ 40 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು ಭಾರತದಲ್ಲಿ 40 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

ಮೊದಲ ಬಾರಿಗೆ ಬೇಡಿಕೆ ಮೇರೆಗೆ ಕೊರೊನಾ ಪರೀಕ್ಷೆಗೆ ಅನುವುಮಾಡಿಕೊಡಲಾಗುತ್ತದೆ. ಬಳಿಕ ರಾಜ್ಯಗಳು ಹಲವು ಮಾರ್ಪಾಟುಗಳನ್ನು ಮಾಡಿಕೊಳ್ಳಲಿದೆ.

CMR Issued Revised Advisory On Coronavirus Testing protocol

ರಾಷ್ಟ್ರೀಯ ಕೊವಿಡ್ 19 ಕಾರ್ಯಪಡೆ ಶಿಫಾರಸು ಪ್ರಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ದೇಶ ಅಥವಾ ಭಾರತದ ಯಾವುದೇ ರಾಜ್ಯಗಳಿಗೆ ಪ್ರಯಾಣ ಕೈಗೊಳ್ಳುವ ಪ್ರತಿಯೊಬ್ಬರು ಕೊವಿಡ್ 19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು.

ಇಷ್ಟು ದಿನಗಳ ವರೆಗೆ ಕೊರೊನಾ ಲಕ್ಷಣವಿರುವವರು ಮಾತ್ರ ಪರೀಕ್ಷೆಗೆ ಒಳಗಾಗಬಹುದು ಎಂದು ಹೇಳಲಾಗಿತ್ತು. ಈಗ ರೋಗ ಲಕ್ಷಣವಿಲ್ಲದಿದ್ದರೂ ಅವರಿಗೆ ಇಷ್ಟವಿದ್ದರೆ ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಕಂಟೈನೆಂಟ್ ಜೋನ್‌ಗಳಲ್ಲಿ ವಾಸಿಸುತ್ತಿರುವವರು ರಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.ಕೊವಿಡ್ 19, ಪರೀಕ್ಷೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಶಿಫಾರಸುಗಳನ್ನು ವಿಸ್ತರಿಸಲಾಗಿದೆ. ಮತ್ತು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಕಂಟೈನ್ಮೆಂಟ್ ಜೋನ್‌ಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ಕಂಟೈನ್ಮೆಂಟ್ ಜೋನ್‌ನಲ್ಲಿ ವಾಸಿಸುವ ಶೇ.100 ರಷ್ಟು ಮಂದಿ ರಾಪಿಡ್ ಆಂಟಿಜೆನ್ ಟೆಸ್ಟ್‌ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.ಇದರಿಂದ ಸೋಂಕು ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ.

ಸೋಂಕಿನ ಲಕ್ಷಣ ಇರುವ ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ಕೂಡ ಪರೀಕ್ಷೆ ಮಾಡುವಂತೆ ನಿಯಮ ಹೇಳಿದೆ.65 ವರ್ಷ ಮೇಲ್ಪಟ್ಟವರು ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೆ ಅಂತವರು ಐದು ದಿನ ಹಾಗೂ ಹತ್ತು ದಿನಕ್ಕೊಮ್ಮೆ ಪರೀಕ್ಷೆ ಮಾಡಿಸಬೇಕು.

ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು.

English summary
The Indian Council of Medical Research on Friday evening released a revised advisory on COVID-19 testing protocol, permitting testing on demand for the first time but also said that states can adopt the advisory with modifications - if needed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X