9 ಕೋಟಿ ಒಡೆಯ ಸಿಎಂ ರೂಪಾಣಿಗೆ 141 ಕೋಟಿಯ ಕುಬೇರನಿಂದ ಸವಾಲ್

Subscribe to Oneindia Kannada

ಅಹಮದಾಬಾದ್, ನವೆಂಬರ್ 21: ರಾಜ್ ಕೋಟ್ ಪಶ್ಚಿಮ ಕ್ಷೇತ್ರದಿಂದ ಮುಖ್ಯಮಂತ್ರಿ ವಿಜಯ್ ರೂಪಾಣಿ ಕಣಕ್ಕಿಳಿದಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಅವರು ತಮ್ಮ ಬಳಿ 9 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಗುಜರಾತ್: '6 ಮಂದಿ ಸಚಿವರಿಗೆ ಈ ಬಾರಿ ಟಿಕೆಟ್ ಇಲ್ಲ'

ಅವರ ವಿರುದ್ಧ ಕಾಂಗ್ರೆಸ್ ಶಾಸಕ ಇಂದ್ರನಿಲ್ ರಾಜ್ಗುರು ಅವರನ್ನು ಕಣಕ್ಕಿಳಿಸಿದ್ದು, ರಾಜ್ಗುರು140 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.

CM Vijay Rupani has Rs 9.08 cr assets, opponent Congress MLA Rs 141 crore

ಇಂದ್ರನಿಲ್ ರಾಜ್ಗುರು 12ನೇ ತರಗತಿ ಓದಿದ್ದು ಆಸ್ಪತ್ರೆ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 4.5 ಕೋಟಿ ರೂಪಾಯಿ ಮೊತ್ತದ ಲ್ಯಾಂಬೋರ್ಗಿನಿ ಕಾರು ಸೇರಿದಂತೆ ಅವರ ಬಳಿಯಲ್ಲಿ 12 ವಾಹನಗಳಿವೆ. ಫೋಕ್ಸ್ ವ್ಯಾಗನ್, ಲ್ಯಾಂಡ್ ರೋವರ್, ಬಿಎಂಡಬ್ಲ್ಯೂ, ಇನ್ನೋವಾ ಸೇರಿದಂತೆ ಥರಹೇವಾರಿ ಕಾರುಗಳನ್ನು ಅವರು ಹೊಂದಿದ್ದಾರೆ.

ಗುಜರಾತ್ : 36 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ ಬಿಜೆಪಿ

ಒಟ್ಟಾರೆ 124.59 ಕೋಟಿ ರೂಪಾಯಿ ಸ್ಥಿರ ಆಸ್ತಿ ಮತ್ತು 16.63 ಕೋಟಿ ಚರಾಸ್ತಿ ಇರುವುದಾಗಿ ರಾಜ್ಗುರು ತಮ್ಮ ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ವಿಜಯ್ ರೂಪಾಣಿ ತಮ್ಮ ಬಳಿ 9.08 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ನಾಮಪತ್ರ ಸಲ್ಲಿಸುವ ವೇಳೆ ಅಫಿಡವಿಟ್ ಸಲ್ಲಿಸಿದ್ದಾರೆ. 2014ರಲ್ಲಿ ಉಪಚುನಾವಣೆ ಎದುರಿಸುವ ವೇಳೆ ರೂಪಾಣಿ ಬಲಿ 7.21 ಕೋಟಿ ಆಸ್ತಿ ಇತ್ತು. ಅವರು ಮುಖ್ಯಮಂತ್ರಿಯಾದ ಬಳಿಕ ಆಸ್ತಿಯಲ್ಲಿ 1.87 ಕೋಟಿ ರೂಪಾಯಿ ಏರಿಕೆ ಆಗಿದೆ.

ರೂಪಾಣಿ ಕೈಯಲ್ಲಿ 3.45 ಕೋಟಿ ರೂಪಾಯಿ ಮೊತ್ತದ ನಗದು ಮತ್ತು ಚಿನ್ನಾಭರಣವಿದೆ. ಪತ್ನಿ ಬಳಿಯಲ್ಲಿ 1.97 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಇದೆ. ಇನ್ನು ಪತಿ ಮತ್ತು ಪತ್ನಿ ಬಳಿ 3.65 ಕೋಟಿ ರೂಪಾಯಿ ಮೊತ್ತದ ಸ್ಥಿರಾಸ್ತಿಗಳೂ ಇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress MLA Indranil Rajguru, who is contesting against Chief Minister Vijay Rupani from Rajkot West constituency, has declared assets worth Rs 141 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ