• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಯುರ್ವೇದ್ ಚಿಕಿತ್ಸೆಯಿಂದ 5 ದಿನಗಳಲ್ಲೇ ಕೊವಿಡ್-19 ನೆಗೆಟಿವ್!

|

ನವದೆಹಲಿ, ಸಪ್ಟೆಂಬರ್.29: ಕೊರೊನಾವೈರಸ್ ಸೋಂಕು ನಿವಾರಣೆಗೆ ಯಾವ ರೀತಿ ಚಿಕಿತ್ಸೆ ಉತ್ತಮ ಎನ್ನುವುದಕ್ಕಾಗಿ ವೈದ್ಯಕೀಯ ಶೋಧನೆ ಮುಂದುವರಿದಿದೆ. ಅಲೋಪಥಿಕ್ ಔಷಧೀಯ ಪದ್ಧತಿಗಿಂತಲೂ ಆಯುರ್ವೇದಿಕ್ ಚಿಕಿತ್ಸಾ ಪದ್ಧತಿ ಹೆಚ್ಚು ಪರಿಣಾಮಕಾರಿ ಎಂಬ ಫಲಿತಾಂಶ ಹೊರ ಬಂದಿದೆ.

ಕೊವಿಡ್-19 ಸೋಂಕಿತರಿಗೆ ಸರ್ಕಾರವು ಅನುಮೋದನೆ ನೀಡಿರುವ ಸಾಂಪ್ರದಾಯಕ ಚಿಕಿತ್ಸಾ ಪದ್ಧತಿಗಿಂತ ಕೊರಿವಲ್ ಲೈಫ್ ಸೈನ್ಸಸ್ ನ "ಇಮ್ಯೂನ್ ಫ್ರೀ" ಮತ್ತು ಬಯೋಜೆಟಿಕಾದ "ರೆಜಿನ್ ಮ್ಯೂನ್" ಔಷಧಿಯ ಸಂಯೋಜನೆಯು ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್! ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!

ಸಿ ರಿಯಾಕ್ಟಿವ್ ಪ್ರೋಟೀನ್, ಪ್ರೊಕಾಲ್ಸಿಟೋನಿನ್, ಡಿ ಡೈಮರ್ ಮತ್ತು ಆರ್ಟಿ-ಪಿಸಿಆರ್ ನಂತಹ ಪರೀಕ್ಷೆಗಳು ಸಹ COVID-19 ರೋಗಿಗಳ ಸಾಂಪ್ರದಾಯಿಕ ಚಿಕಿತ್ಸೆಗೆ ಹೋಲಿಸಿದರೆ ನೈಸರ್ಗಿಕ ಚಿಕಿತ್ಸೆಯಲ್ಲಿ ಶೇಕಡಾ 20 ರಿಂದ 60 ರಷ್ಟು ಉತ್ತಮ ಸುಧಾರಣೆಯನ್ನು ತೋರಿಸುತ್ತಿವೆ ಎಂದು ಮಧ್ಯಂತರ ವರದಿಯಲ್ಲಿ ಹೇಳಲಾಗಿದೆ.

5 ದಿನಗಳಲ್ಲೇ ಕೊರೊನಾವೈರಸ್ ನಿಂದ ಗುಣಮುಖ

5 ದಿನಗಳಲ್ಲೇ ಕೊರೊನಾವೈರಸ್ ನಿಂದ ಗುಣಮುಖ

ಕೊರೊನಾವೈರಸ್ ಶಿಷ್ಟಾಚಾರದ ಪ್ರಕಾರ, ಶೇ.85ರಷ್ಟು ಸೋಂಕಿತರನ್ನು ಆಯುರ್ವೇದಿಕ್ ಪದ್ಧತಿಯ ಚಿಕಿತ್ಸೆಗೆ ಒಳಪಡಿಸಿದ ಸಂದರ್ಭದಲ್ಲಿ ಉತ್ತಮ ಫಲಿತಾಂಶ ಹೊರ ಬಂದಿದೆ. ಶೇ.60ರಷ್ಟು ಕೊವಿಡ್-19 ಸೋಂಕಿತರು ಕೇವಲ ಐದು ದಿನಗಳಲ್ಲಿ ಸೋಂಕಿನಿಂದ ಗುಣಮುಖರಾಗಿದ್ದರೆ, 10 ದಿನಗಳಲ್ಲಿ ಎಲ್ಲಾ ಸೋಂಕಿತರು ನೆಗೆಟಿವ್ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ ಎಂದು ಆಂತರಿಕ ವರದಿಯಲ್ಲಿ ಹೇಳಲಾಗಿದೆ.

ಭಾರತದ 3 ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಯೋಗ

ಭಾರತದ 3 ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಯೋಗ

ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅಭಿವೃದ್ಧಿಪಡಿಸಿರುವ ಇಮ್ಯೂನ್ ಫ್ರೀ" ಮತ್ತು ಬಯೋಜೆಟಿಕಾದ "ರೆಜಿನ್ ಮ್ಯೂನ್" ಸಂಯೋಜನೆಯನ್ನು ದೇಶದ ಮೂರು ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಯಿತು. ಆಂಧ್ರ ಪ್ರದೇಶದ ಶ್ರೀಕಾಕುಲಮ್, ಗುಜರಾತ್ ನ ವಡೋದರಾದಲ್ಲಿರುವ ಪಾರೂಲ್ ಸೇವಾಶ್ರಮ ಆಸ್ಪತ್ರೆ ಮತ್ತು ಮಹಾರಾಷ್ಟ್ರದ ಪೂಣೆಯಲ್ಲಿರುವ ಲೋಕಮಾನ್ಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.

ದೇಶದ ಔಷಧೀಯ ಪ್ರಯೋಗ ನೋಂದಣಿಯ ಅನುಮತಿ

ದೇಶದ ಔಷಧೀಯ ಪ್ರಯೋಗ ನೋಂದಣಿಯ ಅನುಮತಿ

ಇಮ್ಯೂನ್ ಫ್ರೀ" ಮತ್ತು ಬಯೋಜೆಟಿಕಾದ "ರೆಜಿನ್ ಮ್ಯೂನ್" ಸಂಯೋಜನೆ ಮೂಲಕ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಮೊದಲೇ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. ಈ ಸಂಯೋಜನೆ ಅಲಿಯೋಪಥಿಕ್ ಔಷಧಿಗಿಂತಲೂ ಪರಿಣಾಮಕಾರಿಯಾಗಿದ್ದು, ಭಾರತದ ಔಷಧೀಯ ಪ್ರಯೋಗ ನೋಂದಣಿ(CTRI) ಅನುಮೋದನೆಯನ್ನು ಪಡೆದುಕೊಂಡಿದೆ.

ದೇಶದಲ್ಲಿ 61 ಲಕ್ಷದ ಗಡಿ ದಾಟಿತು ಕೊರೊನಾವೈರಸ್ ಕೇಸ್

ದೇಶದಲ್ಲಿ 61 ಲಕ್ಷದ ಗಡಿ ದಾಟಿತು ಕೊರೊನಾವೈರಸ್ ಕೇಸ್

ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 61 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 70589 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕಳೆದ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಬುಧವಾರ ಬೆಳಗ್ಗೆ 9 ಗಂಟೆವರೆಗೂ ಕೊರೊನಾವೈರಸ್ ಸೋಂಕಿಗೆ 776 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 96318ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 61,45,292ಕ್ಕೆ ಏರಿಕೆಯಾಗಿದೆ. ಈ ಪೈಕಿ 51,01,398 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 9,47,576 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Clinical Trial Of Ayurvedic Medicine For COVID-19 Shows Surprising Results. Check Here For Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X