Click here ಟ್ವೀಟ್ ಪೋಸ್ಟ್ ಭಾರೀ ವೈರಲ್, ಏನಿದು ಹಾಗೂ ಇದಕ್ಕೆ ಪ್ರತಿಕ್ರಿಯೆಗಳು ಹೇಗಿವೆ?
ಬೆಂಗಳೂರು, ಮಾರ್ಚ್, 31: ಈಗಾಗಲೇ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬಹುತೇಕ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆಯಾಗಿದೆ. ಅದರಲ್ಲೂ ಕೆಲ ಅಭ್ಯರ್ಥಿ ತೆರೆಮರೆಯಲ್ಲಿ ನೀತಿಸಂಹಿತೆ ನಡುವೆಯೂ ಪ್ರಚಾರ ಆರಂಭಿಸಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿವೆ. ಇನ್ನು ಇದರ ನಡುವೆಯೂ BJP4India ಎಂಬ ಟ್ವಿಟ್ಟರ್ ಖಾತೆಯಲ್ಲಿ ಬರೆದಿರುವ click here ಎಂಬ ಫೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗಾದರೆ ಇದಕ್ಕೆ ಪ್ರತಿಕ್ರಿಯೆಗಳು ಹೇಗಿವೆ ಎಂದು ಇಲ್ಲಿ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿ ಪೋಸ್ಟರ್‌ಗಳು, ವಿಡಿಯೋಗಳು ವೈರಲ್ ಆಗುವುದು ಹೆಚ್ಚಾಗಿಬಿಟ್ಟಿದೆ. ಇದರಿಂದಾಗಿ ಯುವಪೀಳಿಗೆಯವರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪೋಸ್ಟ್‌ಗಳನ್ನೇ ಹೆಚ್ಚಾಗು ಹುಡುಕುತ್ತಿರುತ್ತಾರೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಸಾಮಾಜಿಕ ಮಾಧ್ಯಮ ಬಳಕೆದಾರ ಸಂಖ್ಯೆಯೂ ಹೆಚ್ಚಿದೆ ಎನ್ನಲಾಗುತ್ತಿದೆ. ಅದರಲ್ಲೂ ವಿಚಿತ್ರ ಪೋಸ್ಟ್‌ಗಳೇನಾದರೂ ಸಖತ್ ವೈರಲ್ ಆಯಿತೆಂದರೆ ಸಾಕು, ಅದನ್ನೇ ಇನ್ನೂ ವಿವಿಧ ರೀತಿಯಲ್ಲಿ ಟ್ರೆಂಡ್ ಮಾಡಿಬಿಡುತ್ತಾರೆ.

ಇನ್ನು ಇದೀಗ Click here ಎಂಬ ಪದಗಳ ಬರಹ ಟ್ವೀಟ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಈ ಚಿತ್ರವನ್ನು ಸರಳ ಬಿಳಿ ಪುಟದಲ್ಲಿ ದಪ್ಪ ಕಪ್ಪು ಫಾಂಟ್‌ನಿಂದ ಮಾಡಲಾಗಿದೆ. ಅಲ್ಲದೆ ಈ ಅಕ್ಷರವನ್ನು ಸೂಚಿಸುವಂತೆ ಒಂದು ಬಾಣದ ಗುರುತನ್ನು ಕೂಡ ಬಿಡಿಸಲಾಗಿದೆ. ಇದರಿಂದ ಅನೇಕ ಟ್ವಿಟರ್ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ ಮತ್ತು ಏನು ನಡೆಯುತ್ತಿದೆ ಎಂದು ತಿಳಿಯಲು ಪ್ರಯತ್ನಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಟೈಮ್ ಲೈನ್‌ನಲ್ಲಿ ಬರುವ "ಇಲ್ಲಿ ಕ್ಲಿಕ್ ಮಾಡಿ" ಎಂಬ ಪೋಸ್ಟ್‌ನಿಂದ ತೊಂದರೆಗೊಳಗಾಗಿದ್ದಾರೆ ಎನ್ನುವ ಮಾಹಿತಿಗಳು ಕೂಡ ಲಭ್ಯವಾಗಿವೆ.
— BJP (@BJP4India) March 30, 2024
ಕ್ಲಿಕ್ ಎಂಬುದು ಒಂದು ರೀತಿಯ ಆಯ್ಕೆ ಆಗಿತ್ತು. ಇದು ಪ್ಲಾಟ್‌ಫಾರ್ಮ್ ಅಪ್ಲೋಡ್ ಮಾಡಿದ ಫೋಟೋಗಳಿಗೆ ಪಠ್ಯ ಶೀರ್ಷಿಕೆಯನ್ನು ಸೇರಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ದೃಷ್ಟಿಹೀನರಿಗೆ ಪಠ್ಯದಿಂದ ಭಾಷಣ ಗುರುತಿಸುವಿಕೆ ಮತ್ತು ಬ್ರೈಲ್ ಭಾಷೆಯ ಸಹಾಯದಿಂದ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಲ್ಟ್ ಪಠ್ಯ ವೈಶಿಷ್ಟ್ಯದ ಭಾಗವಾಗಿ ಫೋಟೋ ಶೀರ್ಷಿಕೆಗಳು 420 ಪದಗಳವರೆಗೆ ಇರಬಹುದು. ಆಲ್ಟ್ ಪಠ್ಯ ವೈಶಿಷ್ಟ್ಯವನ್ನು 2016ರಲ್ಲಿ ಟ್ವೀಟ್‌ನಲ್ಲಿ ಪರಿಚಯಿಸಲಾಯಿತು ಎಂದು ಹೇಳಲಾಗುತ್ತಿದೆ.
What is the click here pic story.? My timeline is full of it!
— Priyanka Chaturvedi🇮🇳 (@priyankac19) March 30, 2024
ಒಟ್ಟಾರೆ ಈ Click here ಎಂಬ ಪದವು ಇದೀಗ ತುಂಬಾ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿದೆ. ಇನ್ನೂ ಕೆಲವರನ್ನೂ ಆಘಾತಕ್ಕೊಳಗಾಗುವಂತೆ ಮಾಡಿದೆ. ಇನ್ನು ಕೆಲವರು ಈ ಪೋಸ್ಟ್‌ಗೆ ಪ್ರಶ್ನೆ ಮಾಡುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications