ಕೊಡಿಗೆಹಳ್ಳಿ ಅಂಡರ್‌ಪಾಸ್ ಸಮಸ್ಯೆ: ಪ್ರಧಾನಿಗೆ ಮೊರೆ
ಬೆಂಗಳೂರು, ಜು.9: ಬೆಂಗಳೂರಿನಲ್ಲಿ ಒಂದೆಡೆ ರಸ್ತೆಗುಂಡಿಗಳ ಸಮಸ್ಯೆ ಇನ್ನು ಕೆಲವೆಡೆ ಅರ್ಧಕ್ಕೆ ನಿಂತ ಕಾಮಗಾರಿಗಳಿಂದ ತೊಂದರೆ ಅನುಭವಿಸುವಂತಾಗಿದೆ. ಹೀಗೆ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ತೊಂದರೆಗಳು ಗೋಚರಿಸುತ್ತವೆ. ಬ್ಯಾಟರಾಯನಪುರ ವ್ಯಾಪ್ತಿಯ ಕೊಡಿಗೇಹಳ್ಳಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣದ ಕಾಮಗಾರಿ ಆರಂಭಗೊಂಡು ಮೂರು ವರ್ಷವಾದರೂ ಪೂರ್ಣಗೊಂಡಿಲ್ಲ.
ಭೂಸ್ವಾಧೀನ ಸಮಸ್ಯೆಯಿಂದಾಗಿ ಯೋಜನೆ ನಿಂತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಈ ಕುರಿತು ಪ್ರಧಾನಿ ಕಾರ್ಯಾಲಯಕ್ಕೆ ಮೊರೆ ಹೋಗಿದ್ದಾರೆ, ವಿದ್ಯಾರಣ್ಯಪುರ, ಬಳ್ಳಾರಿ ರಸ್ತೆ, ನೇರ ಸಂಪರ್ಕ ಕಲ್ಪಿಸುವ ಕೊಡಗೇಹಳ್ಳಿ ರೈಲ್ವೆ ಗೇಟ್ ಬಳಿ ರೈಲ್ವೆ ಅಂಡರ್‌ಪಾಸ್ ನಿರ್ಮಿಸಲಾಗುತ್ತಿದೆ.

ಅನೇಕ ವರ್ಷಗಳ ಹೋರಾಟ ಬಳಿಕ ಮೂರು ವರ್ಷಗಳ ಹಿಂದೆ ಕಾಮಗಾರಿಯನ್ನು ಆರಂಭಿಲಸಾಗಿತ್ತು. ನಂತರ ಅರ್ಧದಷ್ಟು ಕಾಮಗಾರಿ ಮಾತ್ರ ಮುಗಿದಿದೆ. ರೈಲ್ವೆ ಅಂಡರ್ ಪಾಸ್ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಜನ ಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಭರವಸೆ ನೀಡಿ ವರ್ಷ ಕಳೆದರೂ ಯಾವುದೇ ಅನುಕೂಲವಾಗಿಲ್ಲ ಎಂದು ದೂರಿದ್ದಾರೆ.












Click it and Unblock the Notifications