ಹಿಂದೂ ಯುವ ವಾಹಿನಿಯಿಂದ ಮತಾಂತರ ಆರೋಪ, ಚರ್ಚ್ ಪ್ರಾರ್ಥನೆಗೆ ತಡೆ

ಉತ್ತರ ಪ್ರದೇಶದಲ್ಲಿ ಬ್ರಿಟಿಷರ ಕಾಲದಿಂದ ಇರುವ ಚರ್ಚ್ ವೊಂದರ ಮೇಲೆ ಮತಾಂತರದ ಆರೋಪ ಮಾಡಿದ ಕಾರಣಕ್ಕೆ ಅಲ್ಲಿನ ಪ್ರಾರ್ಥನಾ ಸಭೆಯನ್ನು ನಿಲ್ಲಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪ ಮಾಡಿದವರು ಹಿಂದೂ ಯುವ ವಾಹಿನಿ ಸದಸ್ಯರು

ಲಖನೌ, ಏಪ್ರಿಲ್ 8: ಮತಾಂತರ ಮಾಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆ ಮಾಡುವ ಕಾರಣಕ್ಕೆ ಉತ್ತರ ಪ್ರದೇಶದ ಪೊಲೀಸರು ಚರ್ಚ್ ನಲ್ಲಿ ಪ್ರಾರ್ಥನೆ ನಿಲ್ಲಿಸಿದ್ದಾರೆ. ಮಹಾರಾಜ್ ಗಂಜ್ ಜಿಲ್ಲಾ ಪೊಲೀಸರ ಬಳಿ ಈ ಬಗ್ಗೆ ಹಿಂದೂ ಯುವ ವಾಹಿನಿಯವರು ಆರೋಪ ಮಾಡಿದ್ದರು.

ಮತಾಂತರ ಮಾಡುವ ಉದ್ದೇಶದಿಂದಲೇ ಪ್ರಾರ್ಥನಾ ಸಭೆ ನಡೆಸಲಾಗುತ್ತಿದೆ ಎಂದು ಹಿಂದೂ ಯುವ ವಾಹಿನಿಯ ಗುಂಪು ಆರೋಪ ಮಾಡಿತ್ತು. ಆದರೆ ಈ ಆರೋಪವನ್ನು ಚರ್ಚ್ ನವರು ನಿರಾಕರಿಸಿದ್ದಾರೆ. ಆದರೆ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿದ್ದಾರೆ.[ಮತಾಂತರಕ್ಕಾಗಿ ಕ್ರಿಶ್ಚಿಯನ್ ಸಂಘಟನೆಗಳಿಂದ ಎನ್ ಜಿಒಗಳಿಗೆ 17 ಸಾವಿರ ಕೋಟಿ]

Church prayer stopped in UP over conversion charges

ಪೊಲೀಸರ ವಿಚಾರಣೆ ವೇಳೆ ಸಹ ಚರ್ಚ್ ನಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ದೊರೆತಿಲ್ಲ ಎಂದು ತಿಳಿದುಬಂದಿದೆ. ಆರೋಪ ಕೇಳಿಬಂದಿರುವ ಚರ್ಚ್ ಬ್ರಿಟಿಷರ ಕಾಲದಲ್ಲಿ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮತಾಂತರದ ಆರೋಪ ಕೇಳಿಬಂದಿದೆ.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]

ಅಂದ ಹಾಗೆ, ಹಿಂದೂ ಯುವ ವಾಹಿನಿ ಸಂಘಟನೆಯ ಸ್ಥಾಪಕರು ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಎಂಬುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+