ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೆಯುವ ಚಳಿಯಲ್ಲೂ ಧೋಕ್ಲಾಂನಲ್ಲಿ 1800 ಚೀನೀ ಸೈನಿಕರು!

By Sachhidananda Acharya
|
Google Oneindia Kannada News

ನವದೆಹಲಿ, ಡಿಸೆಂಬರ್ 11: ಸಾಮಾನ್ಯವಾಗಿ ಪ್ರತಿ ಚಳಿಗಾಲದಲ್ಲಿ ಭಾರತ ಮತ್ತು ಚೀನಾ ಎರಡೂ ದೇಶಗಳು ಹಿಮಾಲಯದಿಂದ ತಮ್ಮ ಸೇನೆಗಳನ್ನು ವಾಪಸ್ ಕರೆಸಿಕೊಳ್ಳುತ್ತದೆ. ಆದರೆ ಈ ಬಾರಿ ಧೋಕ್ಲಾಂನಲ್ಲಿ ಇನ್ನೂ 1,600 ರಿಂದ 1,800 ಚೀನಾದ ಸೈನಿಕರಿದ್ದಾರೆ.

ಚೀನಾ, ಭಾರತ ಮತ್ತು ಭೂತನ್ ಗಡಿ ಸಂಧಿಸುವ ಈ ಭಾಗದಲ್ಲಿ ಈ ವರ್ಷದ ಆರಂಭದಲ್ಲಿ ಸೇನಾ ಪಡೆಗಳ ಜಮಾವಣೆ ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

Chinese troops not leaving Doklam this winter, around 1,800 PLA soldiers likely to stay

ಸುಮಾರು 73 ದಿನಗಳ ಸೇನಾ ಜಮಾವಣೆಯ ನಂತರ ಕೊನೆಗೆ ಭಾರತ ಮತ್ತು ಚೀನಾ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತ್ತು. ಆದರೆ ಚೀನಾ ಇನ್ನೂ ತನ್ನ ಸೇನೆಗಳನ್ನು ಹಿಂತೆಗೆದುಕೊಂಡಿಲ್ಲ. ಪರಿಣಾಮ ಇನ್ನೂ 1800ರಷ್ಟು ಚೀನಾದ ಸೈನಿಕರು ಇಲ್ಲಿದ್ದಾರೆ.

ಚೀನಾ ಮತ್ತು ಭೂತನ್ ಮಧ್ಯೆ ಧೋಕ್ಲಾಂ ಗಡಿ ವಿವಾದವಿದ್ದು ಭೂತನ್ ದೇಶವನ್ನು ಭಾರತ ಈ ವಿಚಾರದಲ್ಲಿ ಬೆಂಬಲಿಸುತ್ತಿದೆ.

ವರದಿಗಳ ಪ್ರಕಾರ ಈ ಧೋಕ್ಲಾಂಗೆ ಹತ್ತಿರದ ಪ್ರದೇಶದಲ್ಲಿ ಚೀನಾ ಎರಡು ಹೆಲಿಪ್ಯಾಡ್ ಗಳನ್ನು ಉತ್ತಮ ದರ್ಜೆಯ ರಸ್ತೆಗಳನ್ನು, ಆಶ್ರಯ ತಾಣಗಳನ್ನು, ತಂಗುದಾಣಗಳನ್ನು ನಿರ್ಮಿಸಿದೆ ಎನ್ನಲಾಗಿದೆ.

English summary
During every winter both India and China reduce the number of troops posted along the border because of the extreme climate in the Himalayan region. But this year, around 1,600-1,800 Chinese troops have established a permanent presence in the Doklam area near Sikkim where borders of India, Bhutan and China meet, said a TOI report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X