ಮುಂದಿನ ಪಂದ್ಯಕ್ಕೆ ದೇಶಭಕ್ತಿ ಟಚ್ ಕೊಟ್ಟ ವಿಜೇಂದರ್

Posted By:
Subscribe to Oneindia Kannada

ನವದೆಹಲಿ, ಜುಲೈ 31: ತಮ್ಮ ಮುಂದಿನ ಪ್ರೊ ಬಾಕ್ಸಿಂಗ್ ಪಂದ್ಯದಲ್ಲಿ ಚೀನಾದ ಆಟಗಾರನ್ನು ಎದುರಿಸಲಿರುವ ವಿಜೇಂದರ್ ಸಿಂಗ್ ಅವರು ತಮ್ಮದೇ ಧಾಟಿಯಲ್ಲಿ ಪಂದ್ಯವನ್ನು ವಿಶ್ಲೇಷಿಸಿದ್ದಾರೆ.

ಚೀನಾ ಮಾಲುಗಳು ಹೆಚ್ಚು ಹೊತ್ತು ಮಾರುಕಟ್ಟೆಯಲ್ಲಿ ಇರಕೂಡದು. ಕೇವಲ 45 ಸೆಕೆಂಡ್ ಗಳಲ್ಲಿ ಚೀನಾ ಸಾಮಗ್ರಿಗಳು ಗಂಟು ಮೂಟೆ ಕಟ್ಟುವಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ ಅವರು.

ಬಾಕ್ಸರ್ ವಿಜೇಂದರ್ 8ನೇ ಬಾರಿ ಸೂಪರ್ ಪೆಸಿಫಿಕ್ ಚಾಂಪಿಯನ್!

ವರ್ಷದ ಹಿಂದೆ ವೃತ್ತಿಪರ ಬಾಕ್ಸರ್ ಆಗಿ ಬದಲಾದ ನಂತರ, ಈವರೆಗೆ ಎಂಟು ಬಾಕ್ಸಿಂಗ್ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಹೊಸ ಸಾಧನೆ ಮಾಡಿರುವ ಅವರು, ಚೀನಾದ ಝುಲ್ಪಿಕರ್ ಮೈಮೈತಿಯಾಲಿ ಆ. 5ರಂದು ಮುಖಾಮುಖಿಯಾಗಲಿದ್ದಾರೆ.

Chinese Items Don't Last Too Long, Says Vijender Singh On His Next Bout

ಒಲಿಂಪಿಕ್ಸ್ ಕಂಚಿನ ಪದಕ ವಿಜೇತರೂ ಆಗಿರುವ ಪಂಜಾಬ್ ಮೂಲದ ವಿಜೇಂದರ್, ಡಬ್ಲ್ಯೂಬಿಒ ಏಷ್ಯಾ ಪೆಸಿಫಿಕ್ ಮಿಡಲ್ ವೇಟ್ ವಿಭಾಗದ ಚಾಂಪಿಯನ್ ಕೂಡಾ ಹೌದು.

ಉಸ್ತಿನಾಡ್ ಅಂತಾರಾಷ್ಟ್ರೀಯ ಬಾಕ್ಸಿಂಗ್: ಭಾರತಕ್ಕೆ 5 ಚಿನ್ನ

ಜೆಕ್ ಗಣರಾಜ್ಯದಲ್ಲಿ ನಡೆಯುತ್ತಿರುವ 48ನೇ ಗ್ರಾಂಡ್ ಪ್ರೀ ಉಸ್ತಿ ನಾಡ್ ಲ್ಯಾಬೆಮ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತವು 5 ಚಿನ್ನ, ಎರಡು ಬೆಳ್ಳಿ ಹಾಗೂ

ಭಾರತದ ಶಿವ ಥಾಪ (60 ಕೆಜಿ), ಮನೋಜ್ ಕುಮಾರ್ (69 ಕೆಜಿ), ಅಮಿತ್ ಫಂಗಲ್ (52 ಕೆಜಿ), ಗೌರವ್ ಬಿಂದೂರಿ (56 ಕೆಜಿ) ಹಾಗೂ ಸತೀಶ್ ಕುಮಾರ್ (+91 ಕೆಜಿ) ತಮ್ಮ ವಿಭಾಗಗಳ ಫೈನಲ್ ಪಂದ್ಯಗಳನ್ನು ಗೆದ್ದು ಚಿನ್ನ ಪಡೆದರು.

Who Will Win If ώάŕ Starts Between India And China | Oneindia Kannada

ಕವಿಂದರ್ ಬಿಶ್ತ್ (52 ಕೆಜಿ), ಮನೀಶ್ ಕುಮಾರ್ (81) ಬೆಳ್ಳಿ ಗೆದ್ದರೆ, ಸುಮಿತ್ ಸಾಂಗ್ವಾನ್ (91) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian boxer Vijender Singh has an undefeated 8-0 record to his name and will aim to extend his domination when he take on China's Zulpikar Maimaitiali in his professional bout on August 5 in Mumbai.
Please Wait while comments are loading...