ಚೀನಾದಿಂದ ಗಡಿ ಗ್ರಾಮಗಳ ಹೆಸರು ಬದಲಾವಣೆ: ಭಾರತ ಆಕ್ರೋಶ
ಗಡಿಯಲ್ಲಿ ಗ್ರಾಮಗಳ ಹೆಸರನ್ನು ಬದಲಿಸಲು ಚೀನಾ ತೆಗೆದುಕೊಂಡಿರುವ ನಿರ್ಧಾರವನ್ನು ಭಾರತ ಖಂಡಿಸಿದೆ. ಗಡಿಯಲ್ಲಿ ಪದೇ ಪದೇ ಉದ್ಧಟತನ ಪ್ರದರ್ಶಿಸುತ್ತಿರುವ ಡ್ರ್ಯಾಗನ್ ದೇಶ ಚೀನಾ ಇದೀಗ ಎಲ್‌ಎಸಿಯ ಹಲವು ಗ್ರಾಮಗಳ ಹೆಸರುಗಳನ್ನು ಬದಲಾಯಿಸಿ ತನ್ನ ದೇಶಕ್ಕೆ ಸೇರಿಸಿಕೊಳ್ಳುವ ಕುತಂತ್ರಕ್ಕೆ ಮುಂದಾಗಿದೆ. ಇದನ್ನು ಖಂಡಿಸಿರುವ ಭಾರತದ ರಕ್ಷಣಾ ಸಚಿವಾಲಯ ಚೀನಾದ ಈ ಕ್ರಮ ಪ್ರಚೋದನಕಾರಿಯಾಗಿದೆ ಎಂದು ಹೇಳಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಯ(ಎಲ್‌ಎಸಿ) ಹಲವಾರು ಪ್ರದೇಶಗಳಲ್ಲಿ ಹೀಗಿರುವ ಗ್ರಾಮಗಳ ಹೆಸರು ಬದಲಾಯಿಸುವ ಚೀನಾದ ಕ್ರಮ ಪ್ರಚೋದನಕಾರಿ ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿದೆ.
ನಿರಂತರ ಜಂಟಿ ಪ್ರಯತ್ನಗಳ ನಡುವೆಯೂ ಅನೇಕ ಸ್ಥಳಗಳಲ್ಲಿ ಅನಿಶ್ಚಿತತೆಗಳು ಮುಂದುವರೆದಿವೆ. ಇಂತಹ ಪ್ರದೇಶಗಳಲ್ಲಿ ತಮ್ಮ ಸೇನಾ ಬಲ ಸಮರ್ಪಕವಾಗಿ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

ಭಾರತದ ಹಕ್ಕುಗಳನ್ನು ಗೌರವಿಸಿದಾಗ ತಮ್ಮ ಭದ್ರತಾ ಪಡೆಗಳು ಚೀನಾದ ಸೈನಿಕರೊಂದಿಗೆ ದೃಢ ಹಾಗೂ ಶಾಂತಿಯುತವಾಗಿ ವ್ಯವಹರಿಸುವುದನ್ನು ಮುಂದುವರೆಸುತ್ತವೆ.
ಸಚಿವಾಲಯವು ತನ್ನ ವರ್ಷಾಂತ್ಯದ ವಿಮರ್ಶೆಯಲ್ಲಿ, ಎಲ್‌ಎಸಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ಏಕಪಕ್ಷೀಯ ಮತ್ತು ಪ್ರಚೋದನಕಾರಿ ಕ್ರಮಕ್ಕೆ ಮುಂದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಉಭಯ ದೇಶಗಳ ಸೇನೆಗಳು ವಿವಿಧ ಹಂತಗಳಲ್ಲಿ ಮಾತುಕತೆಯಲ್ಲಿ ತೊಡಗಿವೆ.
ಪೂರ್ವ ಲಡಾಖ್‌ನಲ್ಲಿ ನಡೆದಿದ್ದ ಘರ್ಷಣೆ ಬಳಿಕ ಗಡಿಯಲ್ಲಿ ಯಥಾಸ್ಥಿತಿಯನ್ನು ತಕ್ಷಣ ಮರುಸ್ಥಾಪಿಸುವ ಭಾರತದ ನಿಲುವಿಗೆ ಧಕ್ಕೆಯಾಗದಂತೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಭಾರತ - ಚೀನಾ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಸಚಿವಾಲಯವು ಗಮನಸೆಳೆದಿದೆ.
ರಸ್ತೆಗಳು, ಸರ್ವಋತು ಸಂಪರ್ಕಕ್ಕಾಗಿ ಸುರಂಗಗಳು, ನಾಲ್ಕು ಆಯಕಟ್ಟಿನ ರೈಲು ಮಾರ್ಗಗಳು, ಬ್ರಹ್ಮಪುತ್ರಕ್ಕೆ ಅಡ್ಡಲಾಗಿ ಹೆಚ್ಚುವರಿ ಸೇತುವೆಗಳು, ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಉತ್ತರದ ಗಡಿಯಲ್ಲಿನ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ಅಭಿವೃದ್ಧಿಯನ್ನು ಸಮಗ್ರ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.
ಈ ನಿಟ್ಟಿನಲ್ಲಿ ಈಗಾಗಲೇ 13 ಸುತ್ತಿನ ಹಿರಿಯ ಸೇನಾ ಕಮಾಂಡರ್‌ಗಳ ಸಭೆಗಳು ಮುಕ್ತಾಯವಾಗಿವೆ. ಕಳೆದ 20 ತಿಂಗಳಿನಿಂದ ಮತ್ತೆ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರ್ಣಾಯಕ ಇಂಡೋ - ಚೀನಾ ಗಡಿ ರಸ್ತೆಗಳಲ್ಲಿ ಸೇತುವೆಗಳು ಮತ್ತು ಸರಬರಾಜು, ಇಂಧನ ಮತ್ತು ಯುದ್ಧಸಾಮಗ್ರಿಗಳ ಸಂಗ್ರಹಣೆ. ದ್ವಿ-ಬಳಕೆಯ ಮೂಲಸೌಕರ್ಯಗಳನ್ನು ಗುರುತಿಸಲು ಪ್ರಮುಖ ಪ್ರಯತ್ನಗಳನ್ನು ಸಹ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಅರುಣಾಚಲ ಪ್ರದೇಶಕ್ಕೆ ಸೇರಿದ 15 ಸ್ಥಳಗಳಿಗೆ ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಹೊಸ ನಾಮಕರಣ ಮಾಡಿರುವುದು ವಿವಾದ ಸೃಷ್ಟಿಸಿದೆ. ಚೀನಾದ ಅಧಿಕೃತ ನಕಾಶೆಗಳಲ್ಲಿ ಇನ್ನು ಮುಂದೆ ಇದೇ ಹೆಸರನ್ನು ಬಳಸಲು ಅದು ನಿರ್ಧರಿಸಿದೆ.
ಈ ಮೂಲಕ ಅರುಣಾಚಲ ಪ್ರದೇಶ ತನ್ನದು ಎಂದು ಪ್ರತಿಪಾದಿಸುತ್ತಿರುವ ಹಾಗೂ ಗಡಿ ಭಾಗಕ್ಕೆ ತನ್ನ ಮೂಲಸೌಕರ್ಯಗಳನ್ನು ವಿಸ್ತರಿಸುತ್ತಿರುವ ಚೀನಾ, ಮತ್ತೊಂದು ಹೆಜ್ಜೆ ಮುಂದಿರಿಸಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಭಾರತ, ಅರುಣಾಚಲ ಪ್ರದೇಶ ಈ ಹಿಂದಿನಿಂದಲೂ ಮತ್ತು ಮುಂದೆ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ. ಚೀನಾ ಹೊಸ ಹೆಸರುಗಳನ್ನು ಹುಡುಕಿದ ಮಾತ್ರಕ್ಕೆ ಈ ವಾಸ್ತವಾಂಶವನ್ನು ಅದು ಬದಲಿಸುವುದಿಲ್ಲ ಎಂದು ಹೇಳಿದೆ.
ಅರುಣಾಚಲ ಪ್ರದೇಶ ತನ್ನ ನಿಯಂತ್ರಣದಲ್ಲಿರುವ ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುತ್ತಿರುವ ಚೀನಾ ಅಲ್ಲಿನ ಒಟ್ಟು 15 ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ನೀಡಿದೆ. ಅರುಣಾಚಲ ಪ್ರದೇಶವನ್ನು ಚೀನಾ ಭೂಪಟ 'ಝಂಗ್ನಾನ್' (ದಕ್ಷಿಣ ಟಿಬೆಟ್) ಎಂದೇ ತೋರಿಸುತ್ತದೆ. 2017ರಲ್ಲಿಯೂ ಚೀನಾ ಆರು ಸ್ಥಳಗಳಿಗೆ ತನ್ನದೇ ಹೆಸರು ಇರಿಸಿತ್ತು. ಬೌದ್ಧ ಧರ್ಮ ಗುರು ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಕೂಡಲೇ ಅದು ಪ್ರತೀಕಾರದ ಕ್ರಮವಾಗಿ ಹೆಸರು ಬದಲಾವಣೆ ಮಾಡಿತ್ತು.
'ನಾವು ಈ ರೀತಿಯ ಚಟುವಟಿಕೆಯನ್ನು ಹಿಂದೆಯೂ ನೋಡಿದ್ದೇವೆ. ಅರುಣಾಚಲ ಪ್ರದೇಶ ರಾಜ್ಯದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುತ್ತಿರುವುದು ಇದು ಮೊದಲ ಸಲವೇನಲ್ಲ. 2017ರ ಏಪ್ರಿಲ್‌ನಲ್ಲಿ ಕೂಡ ಚೀನಾ ಇದೇ ರೀತಿ ಹೆಸರುಗಳನ್ನು ಇರಿಸಿತ್ತು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಝಂಗ್ನಾನ್‌ನ 15 ಪ್ರದೇಶಗಳ ಹೆಸರನ್ನು ಚೀನೀ ಭಾಷೆಯಲ್ಲಿ, ಟಿಬೆಟಿಯನ್ ಮತ್ತು ರೋಮನ್ ಅಕ್ಷರಗಳಲ್ಲಿ ಉನ್ನತೀಕರಿಸಿದ್ದೇವೆ ಎಂದು ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ.
ಎಂಟು ಜನವಸತಿ ಪ್ರದೇಶಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಹಾಗೂ ಒಂದು ಪರ್ವತ ಮಾರ್ಗ ಪ್ರದೇಶಗಳಿಗೆ ಚೀನಾ ತನ್ನದೇ ನಾಮಕರಣ ಮಾಡಿದೆ. ಈ ಹೊಸ ಹೆಸರುಗಳು 2022ರ ಜನವರಿ 1ರಿಂದ ಅಸ್ತಿತ್ವಕ್ಕೆ ಬರಲಿವೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications