• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಮೇಲೆ ಚೀನಾ 'ವಿದ್ಯುತ್ ಯುದ್ಧ'!: ಆಘಾತಕಾರಿ ಸಂಗತಿ ಬಹಿರಂಗ

|

ನವದೆಹಲಿ, ಮಾರ್ಚ್ 1: ಭಾರತ ಮತ್ತು ಚೀನಾ ನಡುವೆ ಗಡಿ, ರಾಜಕೀಯ ಮತ್ತು ಆರ್ಥಿಕ ತಿಕ್ಕಾಟಗಳು ನಡೆಯುತ್ತಿವೆ. ಅದರ ನಡುವೆ ಭಾರತದ ವಿದ್ಯುತ್ ವ್ಯವಸ್ಥೆಯ ಮೇಲೆಯೂ ಚೀನಾ ಗುರಿ ಇಟ್ಟಿದೆ ಎಂಬ ಆಘಾತಕಾರಿ ಸಂಗತಿಯನ್ನು ವರದಿಯೊಂದು ಬಹಿರಂಗಪಡಿಸಿದೆ.

ಭಾರತ-ಚೀನಾ ನಡುವೆ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದಲೂ ಗಡಿಯಲ್ಲಿನ ಸಂಘರ್ಷ ತೀವ್ರವಾಗಿದೆ. ಭಾರತದಲ್ಲಿ ಕೋವಿಡ್ ಸನ್ನಿವೇಶ ವಿಕೋಪಕ್ಕೆ ತಲುಪಿದ್ದ ಅಕ್ಟೋಬರ್ ತಿಂಗಳಲ್ಲಿ ಮುಂಬೈನಲ್ಲಿ ವ್ಯಾಪಕ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದರಿಂದ ಹಲವು ಗಂಟೆಗಳ ಕಾಲ ರೈಲುಗಳ ಓಡಾಟ ಸ್ಥಗಿತಗೊಂಡಿತ್ತು. ಆಸ್ಪತ್ರೆಗಳು ಸಹ ವಿದ್ಯುತ್ ಇಲ್ಲದೆ ತೀವ್ರ ತೊಂದರೆಗೆ ಒಳಗಾಗಿದ್ದವು. ಈ ಘಟನೆಗೂ ಚೀನಾದ ಸಂಘಟನೆಯೊಂದಕ್ಕೂ ಸಂಬಂಧ ಇರಬಹುದು ಎಂದು ವರದಿಯೊಂದು ಸರ್ಕಾರಕ್ಕೆ ತಿಳಿಸಿದೆ.

ಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆ

ಚೀನಾ ನಂಟಿನ ಬೆದರಿಕೆ ಚಟುವಟಿಕೆ ನಡೆಸುವ ರೆಡ್‌ಎಕೊ ಎಂಬ ಗುಂಪು ಭಾರತದ ವಿದ್ಯುತ್ ವಲಯವನ್ನು ಗುರಿಯನ್ನಾಗಿಸಿದೆ. ಇದರ ಚಟುವಟಿಕೆಯು ಬೃಹತ್ ಪ್ರಮಾಣದ ಸ್ವಯಂಚಾಲಿತ ನೆಟ್ವರ್ಕ್ ಸಂಚಾರ ವಿಶ್ಲೇಷಣೆ ಮತ್ತು ಪರಿಣತರ ವಿಶ್ಲೇಷಣೆಗಳ ಸಂಯೋಜಿತ ಕಾರ್ಯದ ಮೂಲಕ ಪತ್ತೆಯಾಗಿದೆ. ಭಾರತದ ವಿದ್ಯುತ್ ಪೂರೈಕೆ ಕೇಂದ್ರಗಳನ್ನು ಗುರಿಯನ್ನಾಗಿರಿಸಿ ಚಟುವಟಿಕೆಗಳನ್ನು ನಡೆಸುತ್ತಿರುವುದಕ್ಕೆ ಮುಂಬೈನ ಪವರ್ ಕಟ್ ಹೆಚ್ಚುವರಿ ಉದಾಹರಣೆಯಾಗಿ ದೊರಕಿದೆ ಎಂದು ವರದಿ ತಿಳಿಸಿದೆ. ಮುಂದೆ ಓದಿ.

ವಿದ್ಯುತ್ ವ್ಯವಸ್ಥೆಯಲ್ಲಿ ಮಾಲ್‌ವೇರ್

ವಿದ್ಯುತ್ ವ್ಯವಸ್ಥೆಯಲ್ಲಿ ಮಾಲ್‌ವೇರ್

ಜೂನ್ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ಸೈನಿಕರು ಹೊಡೆದಾಡಿಕೊಂಡು ಭಾರತದ 20 ಸೈನಿಕರು ಹುತಾತ್ಮರಾದ ಘಟನೆಯ ವೇಳೆಯೇ ಚೀನಾದ ಮಾಲ್‌ವೇರ್‌ಗಳು (ಕುತಂತ್ರಾಂಶಗಳು) ಭಾರತದ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಹದಗಡೆಸಿಲು ಸಿಸ್ಟಂಗಳೊಳಗೆ ಪ್ರವೇಶಿಸಿದ್ದವು.

ಮಾಲ್‌ವೇರ್ ಪತ್ತೆ

ಮಾಲ್‌ವೇರ್ ಪತ್ತೆ

ಹೊರಗಿನ ಶಕ್ತಿಗಳು ಅಂತರ್ಜಾಲವನ್ನು ಬಳಸುವುದರ ಕುರಿತು ಅಧ್ಯಯನ ನಡೆಸುವ ಅಮೆರಿಕ ಮೂಲದ ರೆಕಾರ್ಡೆಡ್ ಫ್ಯೂಚರ್ ಕಂಪೆನಿಯು ಈ ಮಾಲ್‌ವೇರ್ ಹರಿವನ್ನು ಪತ್ತೆಹಚ್ಚಿದ್ದವು. ಬಹುತೇಕ ಮಾಲ್‌ವೇರ್‌ಗಳು ಕಾರ್ಯೋನ್ಮುಖಗೊಂಡಿರಲಿಲ್ಲ ಎನ್ನುವುದನ್ನು ಅದು ಕಂಡುಕೊಂಡಿದೆ. ಹಾಗೆಯೇ ರೆಕಾರ್ಡೆಸ್ ಫ್ಯೂಚರ್ ಕಂಪೆನಿಯು ಭಾರತದ ವಿದ್ಯುತ್ ವ್ಯವಸ್ಥೆಯ ಒಳಪ್ರವೇಶಿಸುವುದು ಸಾಧ್ಯವಾಗದ ಕಾರಣ ಕೋಡ್‌ನ ವಿವರಗಳನ್ನು ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ.

ಪರಿಸ್ಥಿತಿ ಹಿಡಿತಕ್ಕೆ ತರಲು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂಪಡೆಯಬೇಕು:ಜೈಶಂಕರ್ಪರಿಸ್ಥಿತಿ ಹಿಡಿತಕ್ಕೆ ತರಲು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂಪಡೆಯಬೇಕು:ಜೈಶಂಕರ್

2020ರ ಆರಂಭದಿಂದಲೂ ಚಟುವಟಿಕೆ

2020ರ ಆರಂಭದಿಂದಲೂ ಚಟುವಟಿಕೆ

2020ರ ಆರಂಭದಿಂದಲೂ ರೆಕಾರ್ಡೆಡ್ ಫ್ಯೂಚರ್‌ನ ಇನ್ಸ್‌ಕಿಟ್ ಗ್ರೂಪ್, ಚೀನಾ ಸರ್ಕಾರದ ಪ್ರಾಯೋಜಿತ ಗುಂಪುಗಳು ಭಾರತದ ಸಂಸ್ಥೆಗಳ ವಿರುದ್ಧ ಸತತವಾಗಿ ಚಟುವಟಿಕೆ ನಡೆಸುತ್ತಿರುವುದು ಹೆಚ್ಚುತ್ತಿರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು ಎಂದು ವರದಿ ಹೇಳಿದೆ.

ಹತ್ತು ಕೇಂದ್ರಗಳ ಮೇಲೆ ಕಣ್ಣು

ಹತ್ತು ಕೇಂದ್ರಗಳ ಮೇಲೆ ಕಣ್ಣು

ಭಾರತದ ವಿದ್ಯುತ್ ವಲಯದ ಬೃಹತ್ ಕೇಂದ್ರಗಳನ್ನು ಗುರಿಯಾಗಿರಿಸಲು ಆಕ್ಸಿಯೊಮ್ಯಾಟಿಕಸಿಂಪ್ಟೊಟ್ ಎಂಬ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಭಾರತದ ಅತ್ಯಂತ ಮಹತ್ವದ ಮೂಲಸೌಕರ್ಯ ವ್ಯವಸ್ಥೆಯಾದ ವಿದ್ಯುತ್‌ಅನ್ನು ಸಂಪೂರ್ಣವಾಗಿ ಹದಗೆಡಿಸಲು ಅದರ ಪೂರೈಕೆ ಹಾಗೂ ಬೇಡಿಕೆ ನಿರ್ವಹಣೆ ಮಾಡುವ ನಾಲ್ಕೈದು ಪ್ರಾದೇಶಿಕ ವಿದ್ಯುತ್ ಪೂರೈಕೆ ಕೇಂದ್ರ ಸೇರಿದಂತೆ ಸುಮಾರು 10 ಪ್ರಮುಖ ಕೇಂದ್ರಗಳ ಮೇಲೆ ಅದು ಕಣ್ಣಿರಿಸಿತ್ತು ಎಂದು 2020ರ ಮಧ್ಯಭಾಗದಿಂದ ರೆಕಾರ್ಡೆರ್ ಫ್ಯೂಚರ್ ಸಂಗ್ರಹಿಸಿದ ಮಾಹಿತಿಗಳು ತಿಳಿಸಿವೆ.

ಚೀನಾದಲ್ಲಿ ಈಗ ಬಡವರೇ ಇಲ್ಲವಂತೆ..! ಹಸಿವು ನೀಗಿಸಿತಾ ಚೀನಿ ಸರ್ಕಾರ..?'ಚೀನಾದಲ್ಲಿ ಈಗ ಬಡವರೇ ಇಲ್ಲವಂತೆ..! ಹಸಿವು ನೀಗಿಸಿತಾ ಚೀನಿ ಸರ್ಕಾರ..?'

12 ಸಂಸ್ಥೆಗಳ 21 ಐಪಿ ಅಡ್ರೆಸ್‌ಗಳು

12 ಸಂಸ್ಥೆಗಳ 21 ಐಪಿ ಅಡ್ರೆಸ್‌ಗಳು

ಬಹು ನಿರ್ಣಾಯಕ ಎನಿಸಿದ ಭಾರತದ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ವಲಯದ 12 ಸಂಸ್ಥೆಗಳಿಗೆ ಸಂಬಂಧಿಸಿದ 21 ಐಪಿ ಅಡ್ರೆಸ್‌ಗಳನ್ನು ಚೀನಾ ಗುರಿ ಮಾಡಿತ್ತು. ಮುಂಬೈನ ಪಾಗ್ಧಾ ಮೂಲದ ರಾಜ್ಯ ವಿದ್ಯುತ್ ಪೂರೈಕೆ ಕೇಂದ್ರದಲ್ಲಿ ಅಕ್ಟೋಬರ್ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ವ್ಯತ್ಯಯಕ್ಕೂ ಗುರುತಿಸಲಾಗದ ಮಾಲ್‌ವೇರ್ ತಳಿಗೂ ಇರುವ ನಂಟು ಸ್ಪಷ್ಟವಾಗಿರಲಿಲ್ಲ. ಆದರೆ ಅದರ ಕುರಿತಾದ ಅಧ್ಯಯನವು ಇದರ ಸುತ್ತಲೂ ಇರುವ ಸಂಚಿನ ಕುರಿತು ಹೆಚ್ಚುವರಿ ಮಾಹಿತಿ ಹೊರಹಾಕಿದೆ.

English summary
A report revealed that China may have targetted power facilities across India and a massive power outage in Mumbai in October was an example for that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X