ಗಾಲ್ವನ್‌; ಕಮಾಡಿಂಗ್ ಆಫೀಸರ್ ಸತ್ತಿದ್ದನ್ನು ಒಪ್ಪಿಕೊಂಡ ಚೀನಾ

ನವದೆಹಲಿ, ಜೂನ್ 22 : ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಚೀನಾದ ಕಮಾಡಿಂಗ್ ಆಫೀಸರ್ ಮೃತಪಟ್ಟಿದ್ದ. ಚೀನಾದ ಸೇನೆ ಕೊನೆಗೂ ಇದನ್ನು ಒಪ್ಪಿಕೊಂಡಿದೆ.

ಸೋಮವಾರ ಗಾಲ್ವನ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಸೇನಾ ಮಾತುಕತೆ ನಡೆಯುತ್ತಿದೆ. ಈ ಮಾತುಕತೆ ಸಂದರ್ಭದಲ್ಲಿ ಜೂನ್ 15ರಂದು ನಡೆದ ಘರ್ಷಣೆಯಲ್ಲಿ ಕಮಾಡಿಂಗ್ ಆಫೀಸರ್ ಮೃತಪಟ್ಟಿದ್ದನ್ನು ಚೀನಾ ಒಪ್ಪಿಕೊಂಡಿದೆ.

China Confirms Commanding Officer Killed In Ladakh Face Off

ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ಸೋಮವಾರ ವರದಿ ಮಾಡಿವೆ. ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಚೀನಾ ತನ್ನ ಕಡೆಯಲ್ಲಿಯೂ ಹಾನಿ ಆಗಿರುವುದನ್ನು ಒಪ್ಪಿಕೊಂಡಿದೆ. 45 ಚೀನಾದ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಅಂದಾಜಿಲಾಗಿತ್ತು.

ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಮೃತಪಟ್ಟಿದ್ದಾರೆ. ಚೀನಾದ ಕಮಾಡಿಂಗ್ ಆಫೀಸರ್ ಹತ್ಯೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಚೀನಾ ಮೊದಲ ಬಾರಿಗೆ ಈ ಹತ್ಯೆ ನಡೆದಿರುವುದನ್ನು ಒಪ್ಪಿಕೊಂಡಿದೆ.

ಭಾರತ ಮತ್ತು ಚೀನಾ ಯೋಧರ ನಡುವಿನ ಸಂಘರ್ಷಕ್ಕೆ ವಿವಾದಿತ ಸ್ಥಳದಲ್ಲಿ ಚೀನಾ ವೀಕ್ಷಣಾ ಗೋಪುರ ನಿರ್ಮಾಣ ಮಾಡಿದ್ದು ಕಾರಣವಾಗಿತ್ತು. ಭಾರತೀಯ ಸೇನೆ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಅದನ್ನು ತೆರವುಗೊಳಿಸಲು ಹೇಳಿದಾಗ ಘರ್ಷಣೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+