ಬೀದಿ ನಾಯಿ ದಾಳಿ: ನೋಯ್ಡಾದಲ್ಲಿ ಮಗು ಸಾವು- ಕೋಪಗೊಂಡ ನಿವಾಸಿಗಳ ಪ್ರತಿಭಟನೆ

ನೊಯ್ಡಾ ಅಕ್ಟೋಬರ್ 18: ದೆಹಲಿ ಸಮೀಪದ ನೋಯ್ಡಾದಲ್ಲಿ ಸೋಮವಾರ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಬೀದಿ ನಾಯಿ ದಾಳಿಯಿಂದ ಮಗು ಸಾವನ್ನಪ್ಪಿದೆ. ಮಗು ಸಾವಿನ ಬಳಿಕ ಸ್ಥಳೀಯರು ಬೀದಿ ನಾಯಿಗಳ ಸ್ಥಳಾಂತರಕ್ಕೆ ಪ್ರತಿಭಟನೆ ಮಾಡಿದರು. ತಮ್ಮ ಸುರಕ್ಷತೆಗೆ ಬೆದರಿಕೆ ಹಾಕುವ ನಾಯಿಗಳ ಸ್ಥಳಾಂತರ ಮಾಡಲು ನಾಗರಿಕ ಸಂಸ್ಥೆಗಳು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.

ನಿನ್ನೆ ಸಂಜೆ 4.30ರ ಸುಮಾರಿಗೆ ನೋಯ್ಡಾದ ಸೆಕ್ಟರ್ 100ರಲ್ಲಿರುವ ಲೋಟಸ್ ಬೌಲೆವಾರ್ಡ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ರಜನೀಶ್ ವರ್ಮಾ ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್ ಗೆ ನುಗ್ಗಿದ ನಾಯಿಯೊಂದು ಏಳು ತಿಂಗಳ ಮಗುವನ್ನು ತೀವ್ರವಾಗಿ ಗಾಯಗೊಳಿಸಿದೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರದೃಷ್ಟವಶಾತ್ ನಿನ್ನೆ ತಡರಾತ್ರಿ ಮಗು ಸಾವನ್ನ್ಪ್ಪಿದೆ ಎಂದು ನಿವಾಸಿ ರಜನೀಶ್ ಯಾದವ್ ಹೇಳಿದರು.

Child dies in Noida due to stray dog ​​attack: Angry residents protest

ಮಗುವಿನ ಪೋಷಕರು ಕಟ್ಟಡ ಕಾರ್ಮಿಕರಾಗಿದ್ದು, ಅವರು ಕಾಂಪ್ಲೆಕ್ಸ್‌ನ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಯಿ ದಾಳಿ ಮಾಡಿದಾಗ ಮಗು ಅವರ ಬಳಿಯೇ ಇತ್ತು ಎನ್ನಲಾಗುತ್ತಿದೆ. ಘಟನೆಯ ನಂತರ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಜಮಾಯಿಸಿದರು ಮತ್ತು ಬೀದಿ ನಾಯಿಗಳಿಂದ ತಮ್ಮ ರಕ್ಷಣೆಗೆ ಪೊಲೀಸರು ಮತ್ತು ನಾಗರಿಕ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಾಯಿಗಳಿಗೆ ಕ್ರಿಮಿನಾಶಕ ಮತ್ತು ಲಸಿಕೆ ಹಾಕುವಲ್ಲಿ ಪೌರಕಾರ್ಮಿಕ ಸಂಸ್ಥೆ ವಿಫಲವಾಗಿದೆ ಎಂದು ಪ್ರತಿಭಟನಾನಿರತ ನಿವಾಸಿಗಳು ಹೇಳಿದರು. ಇಲ್ಲಿನ ನಿವಾಸಿ ವಿನೋದ್ ಶರ್ಮಾ ಮಾತನಾಡಿ, ನಾಯಿಗಳು ಕ್ರೂರವಾಗಿ ಹೋಗಿದ್ದು, ಮಕ್ಕಳಿಗೆ ಇದರಿಂದ ಅಪಾರ ಅಪಾಯವಿದೆ ಎಂದು ಹೇಳಿದ್ದಾರೆ.

"ಜನರು ಈ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ನಾಯಿಗಳು ಆಕ್ರಮಣಕಾರಿಯಾಗಿವೆ ಮತ್ತು ಪ್ರತಿ ಎರಡು ತಿಂಗಳಿಗೊಮ್ಮೆ ಒಂದು ಘಟನೆ ಇಲ್ಲಿ ನಡೆಯುತ್ತದೆ. ನಮ್ಮ ಮಕ್ಕಳು ಈ ಪ್ರದೇಶದಲ್ಲಿ ಆಟವಾಡುತ್ತಾರೆ. ಭಯದಲ್ಲೇ ಮಕ್ಕಳನ್ನು ಹೊರಬಿಡುವಂತಾಗಿದೆ. ಇವರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ" ಎಂದು ಶರ್ಮಾ ಹೇಳಿದರು.

ಈ ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಹಿಡಿಯಲು ಏಜೆನ್ಸಿಗಳನ್ನು ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ನಾಯಿ ಹಿಡಿಯುವವರು ಬಂದಾಗ, ಕೆಲವು ನಿವಾಸಿಗಳು ಅವುಗಳನ್ನು ಓಡಿಸಿದ್ದರು ಎಂದು ಹೇಳಲಾಗುತ್ತಿದೆ.

ಈ ವರ್ಷದ ಆರಂಭದಲ್ಲಿ, ನಿವಾಸಿಗಳು ತಮ್ಮ ಕಾಲೋನಿಗಳಲ್ಲಿ ಬೀದಿನಾಯಿಗಳಿಗೆ ಆಹಾರವನ್ನು ನೀಡಲು ಅನುಮತಿಸುವ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇದು ಬೀದಿನಾಯಿ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂಬ ಕಾರಣಕ್ಕೆ ಹೈಕೋರ್ಟ್ ಆದೇಶವನ್ನು ವಿರಾಮಗೊಳಿಸಿತ್ತು. ಅಕ್ಕಪಕ್ಕದ ನಿವಾಸಿಗಳಿಬ್ಬರ ನಡುವಿನ ಜಗಳದಿಂದ ಈ ಪ್ರಕರಣ ನಡೆದಿದೆ. ಅವರಲ್ಲಿ ಒಬ್ಬರು ತಮ್ಮ ನೆರೆಹೊರೆಯವರು ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+