ಛತ್ತೀಸ್ ಘಡದಲ್ಲಿ ಐಎಸ್ಐ ಸ್ಲೀಪರ್ ಸೆಲ್, ಇಬ್ಬರ ಬಂಧನ

Subscribe to Oneindia Kannada

ಛತ್ತೀಸ್ ಘಡ, ಏಪ್ರಿಲ್ 16: ಐಎಸ್ಐ ಸ್ಲೀಪರ್ ಸೆಲ್ ನಡೆಸುತ್ತಿದ್ದರು ಎನ್ನಲಾದ ಇಬ್ಬರು ಶಂಕಿತ ಉಗ್ರರನ್ನು ಛತ್ತೀಸ್ ಘಡ ಪೊಲೀಸರು ಬಿಲಾಸ್ ಪುರ್ ನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮಣೀಂದ್ರ ಯಾದವ್ ಮತ್ತು ಸಂಜಯ್ ದೇವಗನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.[ದೇವೇಗೌಡ ಬಗ್ಗೆ ಟ್ವೀಟ್ ಮಾಡಿದ ಒಮರ್, ಕೆರಳಿದ ಸಿಟಿ ರವಿ]

ಫೋನ್ ಕರೆಗಳನ್ನು ಟ್ಯಾಪ್ ಮಾಡಿ ಈ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಇತ್ತೀಚೆಗೆ ಕಾಶ್ಮೀರ ಮತ್ತು ಮಧ್ಯ ಪ್ರದೇಶದಲ್ಲಿ ಎಟಿಎಸ್ ನಿಂದ ಸೆರೆಯಾಗಿದ್ದ ಸತ್ವಿಂದರ್ ಸಿಂಗ್, ರಜ್ಜಾನ್ ತಿವಾರಿ, ಬಲ್ರಾಮ್ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

Chhattisgarh: Police busts ISI sleeper cell arrests two

ಜಂಜ್ಗಿರ್ ಚಂಪಾ ಭಾಗಕ್ಕೆ ಸೇರಿದ ಈ ಇಬ್ಬರು ಬಂಧಿತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

"ಬಂಧಿತರ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಹಲವು ಕಡೆಗಳಿಂದ ಹಣ ಪಡೆಯುತ್ತಿದ್ದರು. ಮಾತ್ರವಲ್ಲ ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದರು. ನಮಗೆ ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ದಾಳಿ ನಡೆಸಿ ಬಂಧಿಸಿದೆವು," ಎಂದು ಬಿಲಾಸ್ಪುರ್ ಎಸ್ಪಿ ಮಯಾಂಕ್ ಶ್ರೀವಾಸ್ತವ ಹೇಳಿದ್ದಾರೆ.[ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್]

"ಸಿವಿಲ್ ಲೈನ್ಸ್ ಪ್ರದೇಶದಿಂದ ಮಣೀಂದ್ರನನ್ನು ಬಂಧಿಲಾಗಿದೆ. ಆತ ರಜ್ಜಾನ್ ತಿವಾರಿ ಜತೆ ಸಂಪರ್ಕ ಇರುವುದನ್ನು ಒಪ್ಪಿಕೊಂಡಿದ್ದಾನೆ. ತಿವಾರಿ ನಿರ್ದೇಶನದ ಮೇರೆಗೆ ನಾನು ಹಣ ವರ್ಗಾವಣೆ ಮಾಡುತ್ತಿದ್ದ ಎನ್ನುವುದನ್ನು ಮಣೀಂದ್ರ ಒಪ್ಪಿಕೊಂಡಿದ್ದಾನೆ. ಇನ್ನು ದೇವಗನ್ ನನ್ನು ಇಲ್ಲಿನ ತೆಲಿಪಾರ ಭಾಗದಿಂದ ಬಂಧಿಸಲಾಗಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Police busts ISI sleeper cell arrests two people Manindra Yadav and Sanjay Devangan in Bilaspur district of Chhattisgarh
Please Wait while comments are loading...