ಛತ್ತೀಸ್ ಗಢ: 7 ನಕ್ಸಲರನ್ನು ಬಲಿತೆಗೆದುಕೊಂಡ ಭದ್ರತಾ ಸಿಬ್ಬಂದಿ

ಬಿಜಾಪುರ(ಛತ್ತೀಸ್ ಗಢ), ಏಪ್ರಿಲ್ 27: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ 7 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ.

ಇಂದು(ಏ.27) ಬೆಳಗ್ಗಿನ ಜಾವ ಎನ್ ಕೌಂಟರ್ ದಾಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಏ.22 ರಂದು ಮಹಾರಾಷ್ಟ್ರದ ಗಡ್ಚಿರೋಲಿ ಎಂಬಲ್ಲಿ ನಡೆದಿದ್ದ ಎನ್ ಕೌಂಟರ್ ದಾಳಿಯಲ್ಲಿ 37 ಜನ ನಕ್ಸಲರನ್ನು ಹತ್ಯೆಗೈಯ್ಯಲಾಗಿತ್ತು. ಹಡ್ಚಿರೋಲಿ ಪೊಲೀಸರ ವಿಶೇಷ ತಂಡ 'ಸಿ-60 ಕಮಾಂಡೋಸ್' ಎಂಬ ಕಾರ್ಯಾಚರಣೆ ನಡೆಸಿ, ನಕ್ಸಲರನ್ನು ಹತ್ಯಗೈದಿತ್ತು.

Chhattisgarh: Many naxals killed in an encounter with security forces in Bijapur

ಭದ್ರತಾ ಸಿಬ್ಬಂದಿ ನಕ್ಸಲರ ಬಳಿ ಶರಣಾಗುವಂತೆ ಕೇಳಿದರೂ, ನಕ್ಸಲರೇ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದರಿಂದ ಈ ಘಟನೆ ನಡೆದಿತ್ತು.

ಮಾ.13 ರಂದು ಛತ್ತೀಸ್ ಗಢ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ 9 ಸಿ ಆರ್ ಪಿಎಫ್ ಯೋಧರನ್ನು ನಕ್ಸಲರು ಕೊಂದುಹಾಕಿದ್ದರು. ಈ ಘಟನೆಯ ನಂತರ ನಕ್ಸಲ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+