ಛತ್ತೀಸ್‌ಗಢ ಅಖಾಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿಗ್ವಿಜಯ ಗ್ಯಾರಂಟಿ?
ಇಡೀ ಭಾರತ ಕಾಯುತ್ತಿರುವ ಪಂಚರಾಜ್ಯ ಚುನಾವಣೆಗೆ, ಕೆಲವೇ ದಿನದಲ್ಲಿ ಮತದಾನವೂ ನಡೆಯಲಿದೆ. ಅದರಲ್ಲೂ, ನಕ್ಸಲ್ ಪೀಡಿತ ಪ್ರದೇಶ ಛತ್ತೀಸ್‌ಗಢ ರಾಜ್ಯದಲ್ಲಿ ಗೆಲ್ಲುವವರು ಯಾರು? ಎಂಬ ಪ್ರಶ್ನೆ ಕಾಡ್ತಿದೆ. ಪಂಚರಾಜ್ಯ ಚುನಾವಣೆಯಲ್ಲಿ ಛತ್ತೀಸ್‌ಗಢ ರಾಜ್ಯವನ್ನು ಬಿಟ್ಟು, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂಗೆ ಒಂದೇ ಹಂತದಲ್ಲಿ ಈಗ ವೋಟಿಂಗ್ ನಡೆಯಲಿದೆ. ಹೀಗಿದ್ದಾಗ 2 ಹಂತದಲ್ಲಿ ಮತದಾನಕ್ಕೆ ಸಿದ್ಧವಾದ ಛತ್ತೀಸ್‌ಗಢದ ಸಮೀಕ್ಷೆ ಸಂಚಲನ ಸೃಷ್ಟಿಸಿದೆ.
ಛತ್ತೀಸ್‌ಗಢ ರಾಜ್ಯದಲ್ಲಿ ನಕ್ಸಲ್ ಹಾವಳಿ ಹೆಚ್ಚಾಗಿದ್ದು, ಇದು ದೇಶೀಯ ಮಟ್ಟದಲ್ಲಿ ಕೂಡ ದೊಡ್ಡ ತಲೆನೋವು ತಂದೊಡ್ಡಿದೆ. ಅದ್ರಲ್ಲೂ ಛತ್ತೀಸ್‌ಗಢದ ಸ್ಥಳೀಯರಿಗೆ ಪದೇ ಪದೆ ಈ ನಕ್ಸಲ್ ದಾಳಿಯ ಭಯ ಕಾಡುತ್ತಿದೆ. ಹೀಗಿದ್ದಾಗ ಬಿಜೆಪಿ ಕೂಡ ಅಖಾಡ ಪ್ರವೇಶ ಮಾಡಿ, ಹಾಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿತ್ತು. ಆದರೆ ಈಗ ಹೊರಬಿದ್ದಿರುವ ಸಮೀಕ್ಷೆಗಳು ಹೇಳುತ್ತಿರುವುದೆ ಬೇರೆ, ಛತ್ತೀಸ್‌ಗಢ ರಾಜ್ಯದಲ್ಲಿ ಈಗಿನ ಜನಾಭಿಪ್ರಾಯ ನೋಡಿದ್ರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಪಕ್ಕಾ ಅಂತಿದೆ. ಹಾಗಾದರೆ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು? ಹಾಗೂ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ?

ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ?
ಅಂದಹಾಗೆ ಮೊದಲೇ ಹೇಳಿದಂತೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ರಾಜ್ಯಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಆದರೆ ಈ ಪೈಕಿ ಉಳಿದ 4 ರಾಜ್ಯ ಒಂದು ಲೆಕ್ಕವಾದರೆ, ಛತ್ತೀಸ್‌ಗಢ ಚುನಾವಣೆಯೇ ಇನ್ನೊಂದು ಲೆಕ್ಕ. ಛತ್ತೀಸ್‌ಗಢ ಮಾತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ನಕ್ಸಲ್ ಹಾವಳಿ ಹಿನ್ನೆಲೆ & ಭದ್ರತೆ ಅಗತ್ಯತೆ ಕಾರಣಕ್ಕೆ ಛತ್ತೀಸ್‌ಗಢ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನ. 7 ಕ್ಕೆ ಮೊದಲ ಹಂತದಲ್ಲಿ ಮತದಾನ ನಡೆದರೆ, ನವೆಂಬರ್ 17 ಕ್ಕೆ ಮತ್ತೊಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ 90 ಸ್ಥಾನಗಳ ಈ ರಾಜ್ಯದಲ್ಲಿ, ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಕಾಂಗ್ರೆಸ್‌ಗೆ ಸಿಗುವ ಸ್ಥಾನ ಎಷ್ಟು ಗೊತ್ತಾ?
ಬಿಜೆಪಿಗೆ ಛತ್ತೀಸ್‌ಗಢದಲ್ಲಿ ಆಘಾತ?
ಹೌದು, ಈಗ ಹೊರಬಿದ್ದಿರುವ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ ಭರ್ಜರಿ 52 ರಿಂದ 55 ಸ್ಥಾನ ಗೆಲ್ಲಬಹುದು ಅಂತಿದೆ ಸಮೀಕ್ಷೆ. ಹಾಗೆ ಬಿಜೆಪಿ ಪಕ್ಷ ಇಲ್ಲಿ 35 ರಿಂದ 38 ಸ್ಥಾನವನ್ನ ಪಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನ ಹೊರತುಪಡಿಸಿ, ಇತರರು ಅಂದ್ರೆ ಬೇರೆ ಬೇರೆ ಪಕ್ಷಗಳು ಹಾಗೂ ಪಕ್ಷೇತರರು ಸೇರಿ 2 ರಿಂದ 3 ಸ್ಥಾನ ಪಡೆಯಬಹುದು ಎನ್ನಲಾಗಿದೆ. 'ಸ್ಮಾಲ್ ಬಾಕ್ಸ್ ಇಂಡಿಯಾ' ಸಮೀಕ್ಷೆಯಲ್ಲಿ ಈ ಮಾಹಿತಿ ಸಿಕ್ಕಿದ್ದು, ಒಟ್ಟು 90 ವಿಧಾನಸಭೆ ಕ್ಷೇತ್ರ ಹೊಂದಿರುವ ಛತ್ತೀಸ್‌ಗಢ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿ ವರಿಷ್ಠರ ಭರ್ಜರಿ ಪ್ರಚಾರ
ಈ ಮೂಲಕ ಛತ್ತೀಸ್‌ಗಢ ಚುನಾವಣಾ ಅಖಾಡ ಮತ್ತಷ್ಟು ರಂಗೇರಿದೆ. ಈ ಹಿನ್ನೆಲೆಯಲ್ಲಿ, ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಂದ್ರೆ ಈಗ 2ನೇ ಬಾರಿ ಛತ್ತೀಸ್‌ಗಢ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಸಮೀಕ್ಷೆ ಹೊರತಾಗಿ ಚುನಾವಣೆ ನೋಡುವುದಾದ್ರೆ ಫಲಿತಾಂಶ ಹೊರಬೀಳುವ ತನಕವೂ ಕಾದು ನೋಡಬೇಕಿದೆ. ಈ ಕಾರಣಕ್ಕೆ ಬಿಜೆಪಿ ನಾಯಕರು ಅದರಲ್ಲೂ ವರಿಷ್ಠರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಗೆದ್ದೇ ಗೆಲ್ಲಬೇಕು ಎಂಬ ಮಂತ್ರ!
ಬಹುತೇಕ ಸಮೀಕ್ಷೆಗಳು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುಂದೆ ಇದೆ ಅಂತಿವೆ. ಛತ್ತೀಸ್‌ಗಢದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಬಿಜೆಪಿ ಕೂಡ ಪಣತೊಟ್ಟಿದೆ. ಹೀಗಾಗಿ ಇತ್ತೀಚೆಗೆ ಬಿಜೆಪಿ ರಿಲೀಸ್ ಮಾಡಿರುವ ಛತ್ತೀಸ್‌ಗಢ ಚುನಾವಣಾ ಪ್ರಣಾಳಿಕೆ ಗಮನ ಸೆಳೆದಿತ್ತು. ಅದರಲ್ಲೂ ಖುದ್ದಾಗಿ ಕೇಂದ್ರ ಗೃಹ ಸಚಿವ, ಬಿಜೆಪಿ ಕೇಂದ್ರ ನಾಯಕರಾದ ಅಮಿತ್ ಶಾ ಪ್ರಣಾಳಿಕೆಯ ಬಿಡುಗಡೆ ಮಾಡಿದ್ದರು.
ಏನೆಲ್ಲಾ ಭರವಸೆ ನೀಡಿದೆ ಬಿಜೆಪಿ?
ಛತ್ತೀಸ್‌ಗಢ ಜನರಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ್ರೆ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ಸೇರಿದಂತೆ ಹಲವು ವಾಗ್ದಾನ ನೀಡಲಾಗಿದೆ. ಮೊನ್ನೆ ಬಿಜೆಪಿ ವರಿಷ್ಠರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಛತ್ತೀಸ್‌ಗಢ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಇದೇ ಪ್ರಣಾಳಿಕೆ ಹಲವು ಭರವಸೆ ನೀಡಿ, ಚುನಾವಣೆಯಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರತಿ ವಿವಾಹಿತ ಮಹಿಳೆಗೆ ವಾರ್ಷಿಕ 12 ಸಾವಿರ ನೀಡುವುದಾಗಿ ಬಿಜೆಪಿ ಘೋಷಿಸಿದೆ.
2 ವರ್ಷದಲ್ಲಿ 1 ಲಕ್ಷ ಹುದ್ದೆ ನೇಮಕಾತಿ
ಇದರ ಜೊತೆಗೆ ಪ್ರತಿ ಎಕರೆಗೆ 21 ಕ್ವಿಂಟಾಲ್ ಭತ್ತ ಖರೀದಿ ಮಾಡುವುದರ ಜೊತೆಗೆ, ಕ್ವಿಂಟಲ್‌ಗೆ 3,100 ರೂಪಾಯಿ ಬೆಂಬಲ ಬೆಲೆಯ ನೀಡುವ ಭರವಸೆ ನೀಡಲಾಗಿದೆ. 2 ವರ್ಷದಲ್ಲಿ 1 ಲಕ್ಷ ಖಾಲಿ ಹುದ್ದೆ ನೇಮಕಾತಿಗೆ ಪ್ರಕಟಣೆ ಹೊರಡಿಸುವುದು & ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 18 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅಲ್ಲದೆ ಇನ್ನು ಹಲವು ಬಂಪರ್ ನೀಡಲಾಗಿದ್ದು ಇದೆಲ್ಲ ಎಲೆಕ್ಷನ್ ವೇಳೆ ಯಾವ ರೀತಿ ವರ್ಕೌಟ್ ಆಗುತ್ತೆ? ಕಾದು ನೋಡಬೇಕಿದೆ.

ರಾಹುಲ್ ಗಾಂಧಿ ಕ್ಯಾಂಪೇನ್
ಒಟ್ನಲ್ಲಿ ಛತ್ತೀಸ್‌ಗಢ ಚುನಾವಣೆ ಜಯ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿಯೇ ಎರಡು ಪಕ್ಷಗಳ ಕೇಂದ್ರ ನಾಯಕರು ಛತ್ತೀಸ್‌ಗಢ ರಾಜ್ಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಾಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಕ್ಯಾಂಪೇನ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಸವಾಲು ಕೊಡಲು ಖುದ್ದು ಪ್ರಧಾನಿ ಮೋದಿ ಅವರು ಕೂಡ ಹಲವು ಬಾರಿ ಛತ್ತೀಸ್‌ಗಢದ ಅಖಾಡದಲ್ಲಿ ಪ್ರಚಾರ ನಡೆಸಿದ್ದಾರೆ.
ಇಷ್ಟಾದರೂ ಸಮೀಕ್ಷೆಗಳಲ್ಲಿ, ಕಾಂಗ್ರೆಸ್ ಮುಂದೆ ಇದೆ ಎಂಬ ಮಾಹಿತಿ ಸಿಗುತ್ತಿದೆ. ಹೀಗಾಗಿ ಕಮಲ ಪಾಳಯ ತನ್ನ ತಂತ್ರದಲ್ಲಿ ಯಾವ ರೀತಿ ಬದಲಾವಣೆ ಮಾಡುತ್ತೆ? ಇದೆಲ್ಲ ಕೊನೇ ಕ್ಷಣದಲ್ಲಿ ಬದಲಾವಣೆ ತರುತ್ತಾ? ತನ್ನ ಪ್ರಣಾಳಿಕೆ ಮೂಲಕ BJP ಛತ್ತೀಸ್‌ಗಢದ ಮತದಾರ ಪ್ರಭುವಿನ ಮನಸ್ಸು ಗೆಲ್ಲುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಆದ್ರೆ ಅಲ್ಲಿಯವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ರಾಜಕೀಯ ತಿಕ್ಕಾಟ ಬಲು ಜೋರಾಗಿರುವುದು ಗ್ಯಾರಂಟಿ.












Click it and Unblock the Notifications