ಛತ್ತೀಸ್ ಗಢ:ಬಿಜೆಪಿ ಶಾಸಕನ ಕೊಲೆಗೈದ ಇಬ್ಬರು ನಕ್ಸಲರ ಹತ್ಯೆ
ರಾಯ್ಪುರ, ಏಪ್ರಿಲ್ 18: ಛತ್ತೀಸ್ ಗಢದಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡೆವಿ ಎಂಬುವವರನ್ನು ಏಪ್ರಿಲ್ 09 ರಂದು ಕೊಲೆಗೈದಿದ್ದ ಇಬ್ಬರು ನಕ್ಸಲರನ್ನು ಬುಧವಾರ ಹತ್ಯೆಗೈಯ್ಯಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಬಲಿಯಾದರೆ, ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದೆ.
ಏಪ್ರಿಲ್ 9 ರಂದು ಬಿಜೆಪಿ ಶಾಸಕ ಭೀಮಾ ಮಾಂಡೆವಿ ಅವರ ವಾಹನದ ಮೇಲೆ ನಕ್ಸಲರು ಏಕಾ ಏಕಿ ದಾಳಿ ನಡೆಸಿದ್ದರು. ವಾಹನದೊಳಗಿದ್ದ ಮಾಂಡೆವಿ, ಡ್ರೈವರ್ ಮತ್ತು ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ಛತ್ತೀಸ್ ಗಢ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಿದ್ದದ್ದ ಮಾಂಡೆವಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಮಹೇಂದ್ರ ಕರ್ಮಾರನ್ನು ಸೋಲಿಸಿದ್ದರು.
ಏಪ್ರಿಲ್ ನಾಲ್ಕರಂದು ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಬಿಎಸ್ ಎಫ್ ಜವಾನರ ನಡುವೆ ನಡೆದ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದರು.
ಇದಕ್ಕೂ ಮುನ್ನ ಮಾರ್ಚ್ 26 ರಂದು ಛತ್ತೀಸ್ ಗಢ ರಾಜಧಾನಿ ರಾಯ್‍ಪುರದಿಂದ 800 ಕಿ.ಮೀ. ದೂರದಲ್ಲಿರುವ ಕರ್ಕನ್ ಗುಡ ಗ್ರಾಮದ ಬಳಿ ಕಾಡಿನಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ಲಭ್ಯವಾದ ಕಾರಣ ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆ ನಡೆಸಿ, ನಾಲ್ವರು ನಕ್ಸಲರನ್ನು ಬಲಿತೆಗೆದುಕೊಂಡಿದ್ದರು.












Click it and Unblock the Notifications