ಛತ್ತೀಸ್ ಗಢದ ಸುಕ್ಮಾದಲ್ಲಿ 14 ನಕ್ಸಲರ ಬಂಧನ
ಸುಕ್ಮಾ (ಛತ್ತೀಸ್ ಗಢ), ಜೂನ್ 15: ಕಳೆದ ಏಪ್ರಿಲ್ ನಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಬುರ್ಕಾಪಾಲ್ ನಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ 14 ನಕ್ಸಲರನ್ನು ಛತ್ತೀಸ್ ಗಢದ ಚಿಂತಾಗುಫ ಮತ್ತು ಚಿಂತಲ್ನರ್ ಎಂಬ ಪ್ರದೇಶದಲ್ಲಿ ಬಂಧಿಸಲಾಗಿದೆ.
ಮೂರು ದಿನಗಳ ಹಿಂದಷ್ಟೇ ಛತ್ತೀಸ್ ಗಢದಲ್ಲಿ ಇದೇ ಘಟನೆಗೆ ಸಂಬಂಧಿಸಿದಂತೆ 34 ನಕ್ಸಲರನ್ನು ಬಂಧಿಸಲಾಗಿತ್ತು.

ಛತ್ತೀಸ್ ಗಢ ಸೇರಿದಂತೆ ಸುತ್ತಲಿನ ರಾಜ್ಯಗಳಲ್ಲಿ ರಸ್ತೆ ನಿರ್ಮಿಸಲು ಕೇಂದ್ರ ಗೃಹ ಸಚಿವಾಲಯ ಹಸಿರು ನಿಶಾನೆ ನೀಡಿತ್ತು. ಅದರಂತೆ ಮೈಲುಗಟ್ಟಲೆ ರಸ್ತೆ ಕೂಡ ನಿರ್ಮಾಣವಾಗಿತ್ತು. ಈ ಎಲ್ಲ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಹಕಾರ ನೀಡುತ್ತಿತ್ತು. ಇದು ನಕ್ಸಲೀಯರಿಗೆ ಬೇಡವಾಗಿತ್ತು.
ತದನಂತರ, ಸಿಆರ್ ಪಿಎಫ್ ಪೊಲೀಸರು ಮಾಡಿರುವ ಈ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅಬ್ಬರಿಸಿದ್ದರು.












Click it and Unblock the Notifications