ಮೋದಿ 'ಭಕ್ತ' ರನ್ನು ಕೆಣಕಿದ ಚೇತನ್ ಗೆ ಟ್ವೀಟ್ಸ್ ಪೆಟ್ಟು
ಮುಂಬೈ, ಜುಲೈ 12: ಜನಪ್ರಿಯ ಲೇಖಕ ಚೇತನ್ ಭಗತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ದೈನಿಕಕ್ಕೆ ಬರೆದ ಅಂಕಣದಲ್ಲಿ ಮೋದಿ ಭಕ್ತರನ್ನು ಕೆಣಕಿದ್ದಾರೆ. ಸಿಟ್ಟಿಗೆದ್ದ ಮೋದಿ ಭಕ್ತರು ಚೇತನ್ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಸರಿಯಾಗಿ ಕಾಲೆಳೆದಿದ್ದಾರೆ.
ಮೋದಿ ಭಕ್ತರು ಲೈಂಗಿಕವಾಗಿ ಹತಾಶೆಗೊಂಡವರಾಗಿದ್ದು, ಅವರಿಗೆ ಹೆಣ್ಣುಗಳೇ ಸಿಗುವುದಿಲ್ಲ ಎಂದು ಜನಪ್ರಿಯ ಲೇಖಕ ಚೇತನ್ ಭಗತ್ ಲೇವಡಿ ಮಾಡಿ ಬರೆದಿದ್ದರು. ಮೋದಿ ಪರ ಟ್ವೀಟ್ ಮಾಡುತ್ತಿದ್ದ ಚೇತನ್ ಭಗತ್ ಏಕಾಏಕಿ ಈ ರೀತಿ ಹೇಳಿರುವುದು ಕಂಡು ಹಿಂದೂತ್ವವಾಗಿ ಕಾರ್ಯಕರ್ತರು ಚೇತನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಚೇತನ್ ಭಗತ್ 'ಅರ್ಧ ಪ್ರೇಯಸಿ'ಯ ಕತೆಯಿದು]
ತಾವು ಈ ನಿರ್ದಿಷ್ಟ ಗುಂಪಿನ ಜನರ ಮನಸ್ಥಿತಿಯನ್ನು ತಮ್ಮ ಲೇಖನದಲ್ಲಿ ಭಗತ್ ವಿಶ್ಲೇಷಿಸಿದ್ದು, ಕಳಪೆ ಇಂಗ್ಲಿಷ್ ಮಾತನಾಡುವ ಮತ್ತು ಮೋದಿ ಅನುಯಾಯಿಗಳೆಂದು ಹೇಳಿಕೊಳ್ಳುವ ಇವರೆಲ್ಲ 'ಹತಾಶೆಗೊಳಗಾದ ಹಾಗೂ ಮನೋವಿಕಾರಪೀಡಿತ ಪುರುಷರು' ಎಂದು ಬಣ್ಣಸಿದ್ದೇನೆ ಇದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ['ಗರ್ಲ್ ಫ್ರೆಂಡ್' ವಿರುದ್ಧ 'ರಾಯಲ್' ಮೊಕದ್ದಮೆ ]
ಪ್ರಧಾನಿ ನರೇಂದ್ರ ಮೋದಿಯವರ ಎಲ್ಲ ನೀತಿಗಳನ್ನು (ಉದಾ: ಸ್ವಚ್ಛ ಭಾರತ ಅಭಿಯಾನ) ಇವರೆಲ್ಲ ಅನುಸರಿಸಲಾರರು. ಆದರೆ, ಪಕ್ಷದ ಧುರೀಣರು ವೌನ ವಹಿಸಿದಾಗಲೆಲ್ಲ ಮೋದಿ ಬೆಂಬಲಕ್ಕೆ ಧಾವಿಸಿ ಬರುತ್ತಾರೆ.
'ಇವರೆಲ್ಲ ಮೋದಿಯವರ ಕಟ್ಟಾ ಬೆಂಬಲಿಗರು. ಅವರೆಲ್ಲ ಹಿಂದೂ ರಾಜಮಹಾರಾಜರನ್ನು ಇಷ್ಟ ಪಡುತ್ತಾರೆ. ಹಿಂದಿನ ಕಾಲದಲ್ಲಿ ಹಿಂದೂಗಳನ್ನು ಹೇಗೆ ವಂಚಿಸಲಾಯಿತು ಎಂಬ ಸಂಚಿನ ಕಥೆಗಳನ್ನು ಆಗಾಗ ಆನ್‌ಲೈನ್‌ನಲ್ಲಿ ಹರಿಯಬಿಡುತ್ತಾರೆ' ಎಂದು ಭಗತ್ ಹೇಳಿದ್ದಾರೆ.

ಪುತ್ರಿ ಜೊತೆಗೆ ಸೆಲ್ಫಿ’ ಅಭಿಯಾನದ ಟ್ವೀಟ್ ಕಿರಿಕ್
ಮೋದಿ ಆರಂಭಿಸಿದ 'ಪುತ್ರಿ ಜೊತೆಗೆ ಸೆಲ್ಫಿ' ಅಭಿಯಾನ ಟ್ವಿಟ್ಟರ್ ನಲ್ಲಿ ಅವರ ಹಿಂಬಾಲಕರಿಂದ ಹಾಳಾಗಿದೆ. ಮಹಿಳೆಯರ ಜೊತೆಗೆ ಮಾತನಾಡುವ ಕಲೆ ತಿಳಿದಿಲ್ಲ. ಮಹಿಳೆಯರ ಕುರಿತು ಆಸೆ ಇದೆ, ಆದರೆ ಅವರನ್ನು ಪಡೆದುಕೊಳ್ಳಲಾರರು.ಅವರೆಲ್ಲ ಲೈಂಗಿಕವಾಗಿ ಹತಾಶೆಗೊಳಗಾದವರು. ಅವರು ಮಹಿಳೆಯರನ್ನು ಹೊಂದಲಾರರು ಎಂದಿದ್ದಾರೆ.

ಎಲ್ಲೆ ಮೀರಿದ ರಣೋತ್ಸಾಹಿ
ಭಾರತ ತೃತೀಯ ಜಗತ್ತಿನ ರಾಷ್ಟ್ರ ಎಂಬ ಅರಿವಿರುವ ಇವರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಮನಸ್ಥಿತಿಯಲ್ಲಿದ್ದಾರೆ. ಎಲ್ಲೆ ಮೀರಿದ ರಣೋತ್ಸಾಹಿಗಳಿಂದ ಬಿಜೆಪಿ ದೂರವಿರಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಮೋದಿಗೆ ಇಂಥವರಿಂದ ತೊಂದರೆ ಎಂಬರ್ಥದಲ್ಲಿ ಚೇತನ್ ಹೇಳಿದ್ದರು.
|
ಚೇತನ್ ತನ್ನನ್ನು ತಾನೇ ಹಾಸ್ಯ ಮಾಡಿಕೊಂಡಿದ್ದಾರೆ
ಚೇತನ್ ತನ್ನನ್ನು ತಾನೇ ಹಾಸ್ಯ ಮಾಡಿಕೊಂಡಿದ್ದಾರೆ ಬಿಡಿ, ಅವರ ಅಧಿಕೃತ ಖಾತೆ ಈಗ ಪರೋಡಿ ಅಕೌಂಟ್ ಆಗಿ ಬದಲಾಗಿದೆ.
|
ಚೇತನ್ ಭಗತ್ ಕಾಲೆಳೆಯಬೇಡಿ
ಚೇತನ್ ಭಗತ್ ಕಾಲೆಳೆಯಬೇಡಿ, ಒನ್ ನೈಟ್ ಅಟ್ ದಿ ಕಾಲ್ ಸೆಂಟರ್ ನಂಥ ಅದ್ಭುತ ಕಾಮಿಕ್ ನೀಡಲು ಯಾರಿಗೆ ತಾನೇ ಸಾಧ್ಯ.
|
ಭಾಷಾ ಸಮಸ್ಯೆ ಎದುರಿಸುತ್ತಿರುವವರ ಮೇಲೆ ಪ್ರಹಾರ
ಭಾಷಾ ಸಮಸ್ಯೆ ಎದುರಿಸುತ್ತಿರುವವರ ಮೇಲೆ ಪ್ರಹಾರ ಬೀರುವ ಚೇತನ್ ನೀನು ಕಪಟಿ.
|
ಚೇತನ್ ಭಗತ್ ಗೆ ಪಾಪ ಈ ಗತಿ ಬರಬಾರದಿತ್ತು
ಚೇತನ್ ಭಗತ್ ಗೆ ಪಾಪ ಈ ಗತಿ ಬರಬಾರದಿತ್ತು, ಏನೋ ಹೇಳಲು ಹೋಗಿ ನೋಡಿ ಏನಾಗಿದೆ.












Click it and Unblock the Notifications