ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬರುವ ಸೂರ್ಯಗ್ರಹಣದ ದಿನವೇ ಕೊರೊನಾ ವೈರಸ್‌ಗೆ ಮುಕ್ತಿ!

|
Google Oneindia Kannada News

ಚೆನ್ನೈ, ಜೂನ್ 15: ಕೊರೊನಾ ವೈರಸ್‌ ಉತ್ಪತ್ತಿ, ಹರಡುವಿಕೆ ಹಾಗೂ 2019ರ ಡಿಸೆಂಬರ್‌ 26ರಂದು ಸಂಭವಿಸಿದ ಸೂರ್ಯ ಗ್ರಹಣಕ್ಕೂ ಸಂಬಂಧವಿದೆ ಎಂದು ಚೆನ್ನೈನ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಸಂಭವಿಸಿದ ಸೂರ್ಯಗ್ರಹಣದಂದು ಹೊರಹೊಮ್ಮಿದ ಗ್ರಹಣ ಸಂದರ್ಭದಲ್ಲಿ ಉಂಟಾದ ಅಣುವಿನ ನಡುವಣ ಸಮ್ಮಿಲನ ಶಕ್ತಿ( ವಿದಳನ ಶಕ್ತಿ) ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರಬಹುದು ಎಂದು ಪರಮಾಣು ಹಾಗೂ ಭೂ ವಿಜ್ಞಾನಿ ಡಾ. ಕೆ.ಎಲ್ ಸುಂದರ್ ಕೃಷ್ಣಾ ತಿಳಿಸಿದ್ದಾರೆ.

ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?

'ಮುಂಬರುವ ಸೂರ್ಯಗ್ರಹಣ ಒಂದು ಮಹತ್ವದ ತಿರುವು ನೀಡುವ ಸಾಧ್ಯತ ಇದೆ, ಸೂರ್ಯನ ಕ್ಷಕಿರಣಗಳ ತೀವ್ರತೆಯು ವೈರಸ್‌ನ್ನು ನಿಷ್ಕ್ರಿಯಗೊಳಿಸಬಹುದು' ಎಂದಿದ್ದಾರೆ.

2019ರ ಡಿಸೆಂಬರ್ 26 ರಂದು ಸೂರ್ಯ ಗ್ರಹಣ ನಡೆದಿತ್ತು

2019ರ ಡಿಸೆಂಬರ್ 26 ರಂದು ಸೂರ್ಯ ಗ್ರಹಣ ನಡೆದಿತ್ತು

ಡಿಸೆಂಬರ್ 2019ರಿಂದ ಕೊರೊನಾ ವೈರಸ್ ಜೀವ ಸಂಕುಲವನ್ನು ನಾಶಮಾಡಲು ಯಮನಂತೆ ಬಂದಿದೆ. ಡಿಸೆಂಬರ್ 26ರಂದು ಸೂರ್ಯಗ್ರಹಣ ಸಂಭವಿಸಿದೆ. ಅದಾದ ಬಳಿಕ ಸೌರಮಂಡಲದಲ್ಲಿ ಗ್ರಹಗಳ ಹೊಸ ಜೋಡಣೆಯಾಗಿದೆ.

ರೂಪಾಂತರ ಪ್ರಕ್ರಿಯೆಯು ಮೊದಲು ಚೀನಾದಲ್ಲಿ ಕಂಡು ಬಂದಿರಬಹುದು ಆದರೆ ನಂತರ ಅಲ್ಲಿನ ವಿಜ್ಞಾನಿಗಳಿಗೆ ಯಾವುದೇ ಪುರಾವೆಯೂ ಸಿಕ್ಕಿಲ್ಲ. ವೈರಸ್ ಹರಡುವಿಕೆ ಪ್ರಯೋಗ ಅಥವಾ ಉದ್ದೇಶ ಪೂರ್ವಕ ಪ್ರಕೋಪವಾಗಿರಬಹುದು.

ಇದು ಗ್ರಹಗಳ ಸಂರಚನೆಯಲ್ಲಿ ನಡೆಯುತ್ತಿರುವ ನೈಸರ್ಗಿಕ ಪ್ರಕ್ರಿಯೆಯಾದ್ದರಿಂದ ನಾವು ಭಯಪಡಬೇಕಾಗಿಲ್ಲ. ಈ ವೈರಸ್‌ಗೆ ಸೂರ್ಯನ ಬೆಳಕು ಮತ್ತು ಸೂರ್ಯಗ್ರಹಣವು ನೈಸರ್ಗಿಕ ಪರಿಹಾರವಾಗಿದೆ ಎಂದು ವಿವರಿಸಿದ್ದಾರೆ.

ಜೂನ್ 21 ರಂದು ಮತ್ತೊಂದು ಸೂರ್ಯಗ್ರಹಣ

ಜೂನ್ 21 ರಂದು ಮತ್ತೊಂದು ಸೂರ್ಯಗ್ರಹಣ

2020ರ ಜನವರಿ 10 ಹಾಗೂ ಜೂನ್ 5 ರಂದು ಸೂರ್ಯಗ್ರಹಣ ಸಂಭವಿಸಿದೆ. ಜೂನ್ 21 ರಂದು ಮತ್ತೊಂದು ಸೂರ್ಯಗ್ರಹಣ ಗೋಚರಿಸಲಿದೆ. ಜೂನ್ 21 ರಂದು ಬೆಳಗ್ಗೆ 9.15ಕ್ಕೆ ಗ್ರಹಣ ಸಂಭವಿಸಲಿದೆ. ಮಧ್ಯಾಹ್ನ 12.10 ಗ್ರಹಣ ಮಧ್ಯಕಾಲ, ಮಧ್ಯಾಹ್ನ 3.04 ಗ್ರಹಣ ಅಂತ್ಯಕಾಲವಾಗಿದೆ.

ಸೂರ್ಯಗ್ರಹಣ ಹಾಗೂ ಕೊರೊನಾ ವೈರಸ್ ಸಂಬಂಧ

ಸೂರ್ಯಗ್ರಹಣ ಹಾಗೂ ಕೊರೊನಾ ವೈರಸ್ ಸಂಬಂಧ

ಸೂರ್ಯಗ್ರಹಣದ ಸಂದರ್ಭದಲ್ಲಿ ಹೊರಸೂಸುವ ವಿದಳನ ಶಕ್ತಿಯಿಂದ ಮೊದಲ ನ್ಯೂಟ್ರಾನ್ ನ ರೂಪಾಂತರಿತ ಕಣಗಳ ಪರಸ್ಪರ ಕ್ರಿಯೆಯ ಬಳಿಕ ಕೊರೊನಾ ವೈರಸ್ ಹರಡಲು ಆರಂಭಿಸಿದೆ. ಮುಂಬರುವ ಸೂರ್ಯಗ್ರಹಣ ಒಂದು ಮಹತ್ವದ ತಿರುವು ನೀಡುವ ಸಾಧ್ಯತ ಇದೆ, ಸೂರ್ಯನ ಕ್ಷಕಿರಣಗಳ ತೀವ್ರತೆಯು ವೈರಸ್‌ನ್ನು ನಿಷ್ಕ್ರಿಯಗೊಳಿಸಬಹುದು

ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ

ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ

ಆಫ್ರಿಕಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕಾಂಗೋ, ಇಥೋಪಿಯಾ, ಪಾಕಿಸ್ತಾನ, ಚೀನಾದಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ.

English summary
A Chennai based scientist has claimed that the COVID-19 outbreak has a definite connection with the solar eclipse that occurred on December 26 last year. According to the scientist, the coronavirus has broken out after a mutated particle interaction of the first neutron due to fission energy emitted after the solar eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X