Chennai: 13 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಇಂದು ಶಾಲೆಗೆ ಬರಲಿಲ್ಲ ಮಕ್ಕಳು

ಚೆನ್ನೈ ಫೆಬ್ರವರಿ 9: ಇತ್ತೀಚಿಗೆ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಹೆಚ್ಚಾಗಿ ಬರುತ್ತಿದ್ದು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿವೆ. ಚೆನ್ನೈನ 13 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಇದರಿಂದಾಗಿ ಇಂದು ಶಾಲೆಗಳಿಗೆ ಮಕ್ಕಳು ಹಾಜರಾಗಿಲ್ಲ.

ಕಳೆದ ದಿನ ಚೆನ್ನೈನ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಇದರಿಂದ ಪೋಷಕರು ಆತಂಕಗೊಂಡಿದ್ದು ತಕ್ಷಣ ಶಾಲೆಗಳಿಗೆ ಬಂದು ತಮ್ಮ ಮಕ್ಕಳನ್ನು ಕರೆದೊಯ್ದಿದ್ದಾರೆ. ಇಂದು ಕೂಡ ಮಕ್ಕಳು ಶಾಲೆಗಳಿಗೆ ಹಾಜರಾಗದೇ ಇರುವುದು ಕಂಡು ಬಂದಿದೆ.

Chennai: Bomb threat to 13 private schools: Children did not come to school today

ಚೆನ್ನೈನ ಪ್ರತಿಷ್ಠಿತ ಅಣ್ಣಾನಗರ, ಜೆಜೆ ನಗರ, ಪ್ಯಾರಿಸ್ ಕಾರ್ನರ್, ಗೋಪಾಲಪುರಂ ಮತ್ತು ಮೈಲಾಪುರ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನೆಲೆಗೊಂಡಿರುವ ಶಾಲೆಗಳಿಗೆ ಈ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಈ ವೇಳೆ ಶಾಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತ್ವರಿತವಾಗಿ ಸಕ್ರಿಯಗೊಳಿಸಿದರು. ತಕ್ಷಣವೇ ಪೊಲೀಸ್ ಸಿಬ್ಬಂದಿ ಶಾಲೆ ಹಾಗೂ ಆವರಣವನ್ನು ಸಂಪೂರ್ಣವಾಗಿ ಶೋಧನೆಗೆ ಒಳಪಡಿಸಿದ್ದಾರೆ.

ಆತಂಕದ ನಡುವೆಯೇ ಶಾಲೆಗಳಿಗೆ ಧಾವಿಸಿದ ಪೋಷಕರು:-

ನಡೆಯುತ್ತಿರುವ ಘಟನೆಗಳಿಂದ ಆತಂಕಗೊಂಡ ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯಲು ಶಾಲೆಗಳಿಗೆ ಧಾವಿಸಿದರು. ಕೆಲವು ಶಾಲೆಗಳು ತಮ್ಮ ಆವರಣದೊಳಗೆ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿದವು.

Chennai: Bomb threat to 13 private schools: Children did not come to school today

ಪೊಲೀಸ್ ನಿಯೋಜನೆ ಮತ್ತು ತನಿಖೆ

ಆತಂಕಕಾರಿ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ಗ್ರೇಟರ್ ಚೆನ್ನೈ ಪೊಲೀಸರು, ನಾವು ತಪಾಸಣೆ ನಡೆಸಲು ವಿಶೇಷ ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (ಬಿಡಿಡಿಎಸ್) ತಂಡಗಳನ್ನು ನಿಯೋಜಿಸಿದ್ದೇವೆ. ಬೆದರಿಕೆ ಇಮೇಲ್‌ಗಳ ಹಿಂದಿರುವ ದುಷ್ಕರ್ಮಿಗಳನ್ನು ಗುರುತಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬ ಸಂದೇಶ ನೀಡಿದರು. ಇದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ತನಿಖೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಶಾಂತವಾಗಿ ಮತ್ತು ಸಹಕರಿಸುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಶೋಧ ಕಾರ್ಯಾಚರಣೆಗಳು

ಇ-ಮೇಲ್ ಬೆದರಿಕೆ ಪರಿಣಾಮ ವಿದ್ಯಾರ್ಥಿಗಳನ್ನು ಶಾಲ ಅವಧಿ ಮುಗಿಯುವುದಕ್ಕೂ ಮುನ್ನ ಮನೆಗೆ ಕಳುಹಿಸಲಾಯಿತು. ಇ-ಮೇಲ್ ಗಳನ್ನು ಪರಿಶೀಲನೆ ಮಾಡಿದ ಬಳಿಕ ಹುಸಿ ಬೆದರಿಕೆ ಇದಾಗಿದೆ ಎಂಬುದು ದೃಢಪಟ್ಟಿದೆ. ಇ-ಮೇಲ್ ಕಳಿಸಿದವನ ಗುರುತನ್ನು ಪತ್ತೆ ಮಾಡಲು ಶೋಧಕಾರ್ಯಾಚರಣೆ ನಡೆಯುತ್ತಿದೆ.

ಒಟ್ಟು 13 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿಗಳನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕರು ಭಯಪಡಬೇಕಿಲ್ಲ ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಗುರುತಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಜಿಸಿಪಿ ಸಹಾಯಕ ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ತಿಳಿಸಿದ್ದಾರೆ.

ಬೆಳಗ್ಗೆ 10.30 ರಿಂದ 11.00 ರ ನಡುವೆ ಪೊಲೀಸರಿಗೆ ಇಮೇಲ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿನ್ಹಾ ಹೇಳಿದ್ದಾರೆ. ಶಾಲೆಗಳಿಂದ ಮಾಹಿತಿ ಪಡೆದ ನಂತರ ಅಥವಾ ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ನೋಡಿದ ನಂತರ ಪೋಷಕರು ಗೋಪಾಲಪುರಂ, ಮೊಗಪ್ಪೈರ್, ಪ್ಯಾರಿಸ್ ಮತ್ತು ಅಣ್ಣಾನಗರದಂತಹ ಪ್ರದೇಶಗಳ ಶಾಲೆಗಳಿಗೆ ಧಾವಿಸಿದರು. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಮಬ್ ಬೆದರಿಕೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+