ಚೆನ್ನೈ: ಮಕ್ಕಳ ಹಕ್ಕುಗಳ ಪ್ರತಿಪಾದಕಿ ಲಲಿತಾ ನಟರಾಜನ್‌ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ
ಚೆನ್ನೈ, ಜೂನ್ 13: ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಲೇಬರ್ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ನಡೆಸಿದ ಪ್ರಯತ್ನಗಳಿಗಾಗಿ ನೀಡುವ 2023ನೇ ಸಾಲಿನ ಇಕ್ಬಾಲ್ ಮಸಿ ಪುರಸ್ಕಾರಕ್ಕೆ ಚೆನ್ನೈನ ಲಲಿತಾ ನಟರಾಜನ್ ಭಾಜನರಾಗಿದ್ದಾರೆ. ಯು.ಎಸ್ ಕಾನ್ಸಲ್ ಜನರಲ್ ಜುಡಿತ್ ರೇವಿನ್ ಈ ಪ್ರಶಸ್ತಿಯನ್ನು ಚೆನ್ನೈನ ಯು.ಎಸ್. ಕಾನ್ಸಲೇಟ್ ಜನರಲ್‌ನಲ್ಲಿ ನಡೆದ ಸಮಾರಂಭದಲ್ಲಿ ಲಲಿತಾ ನಟರಾಜನ್ ಅವರಿಗೆ ಪ್ರದಾನ ಮಾಡಿದರು.
ಲಲಿತಾ ನಟರಾಜನ್ ಅವರು ಬಾಲ ಕಾರ್ಮಿಕ ಪದ್ಧತಿಯಲ್ಲಿ ಹಕ್ಕು-ಆಧಾರಿತ ವಿಧಾನಗಳನ್ನು ಅಳವಡಿಸಲು ವಕೀಲರು ಮತ್ತು ಹೋರಾಟಗಾರರಾಗಿ ತಮ್ಮ ವೃತ್ತಿಜೀವನದುದ್ದಕ್ಕೂ ದುಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಬಾಲಕಾರ್ಮಿಕರ ಶೋಷಣೆಗೆ ಅಂತ್ಯ ಹಾಡಲು, ಮಕ್ಕಳ ಕಳ್ಳಸಾಗಣೆಗೆ ಒಳಗಾದವರನ್ನು ಅದರಲ್ಲೂ ಮುಖ್ಯವಾಗಿ ಜೀತಕ್ಕಿದ್ದವರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಮರು ಸೇರ್ಪಡೆ ಮಾಡಲು ಶ್ರಮಿಸುತ್ತಿದ್ದಾರೆ.

ತಮಿಳುನಾಡು ಸರ್ಕಾರದ ಸಾಮಾಜಿಕ ರಕ್ಷಣೆ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿ (ಉತ್ತರ ವಲಯ)ದ ಸದಸ್ಯರಾಗಿ ಅವರು ಬಾಲಕಾರ್ಮಿಕ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ(ಪೊಕ್ಸೊ) ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ದೊರೆಯುವಂತೆ ಮಾಡಿದ್ದಾರೆ. ಬಾಲಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿರುವುದಲ್ಲದೇ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರಿಗೆ ಕಾನೂನು ಮತ್ತು ಕೌನ್ಸೆಲ್ಲಿಂಗ್ ಬೆಂಬಲ ನೀಡಿದ್ದಾರೆ.
ಇಕ್ಬಾಲ್ ಮಸಿ ಪುರಸ್ಕಾರವು ಯು.ಎಸ್. ಕಾಂಗ್ರೆಸ್ ನೀಡುವ ಪ್ರಶಸ್ತಿಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಸಾಧಾರಣ ಕೊಡುಗೆ ನೀಡಿದವರನ್ನು ಗೌರವಿಸಲು ಈ ಪ್ರಶಸ್ತಿಯನ್ನು 2008ರಲ್ಲಿ ಸೆಕ್ರೆಟರಿ ಆಫ್ ಲೇಬರ್ ಪ್ರಾರಂಭಿಸಿದರು.
ಪಾಕಿಸ್ತಾನದ ಇಕ್ಬಾಲ್ ಮಸಿ, ನಾಲ್ಕರ ಎಳೆ ವಯಸ್ಸಿನಲ್ಲಿ ಕಾರ್ಪೆಟ್ ನೇಕಾರನಾಗಿ ಜೀತಕ್ಕೆಮಾರಾಟವಾಗಿದ್ದ, ತನ್ನ 10ನೇ ವಯಸ್ಸಿನಲ್ಲಿ ಅದರಿಂದ ಪಾರಾಗಿ ಮಕ್ಕಳ ಶೋಷಣೆಯ ಬಗ್ಗೆ ಧ್ವನಿ ಎತ್ತಿದ್ದರು. ಅದಕ್ಕಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದವು. ಆದರೆ ಆತ ಹನ್ನೆರಡು ವರ್ಷದವನಿದ್ದಾಗ 1995ರಲ್ಲಿ ದುರದೃಷ್ಟಕರ ರೀತಿಯಲ್ಲಿ ಕೊನೆಯುಸಿರೆಳೆದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹೋರಾಟ ಮತ್ತು ಅದರ ಬಗೆಗಿನ ತಿಳಿವಳಿಕೆ ಹೆಚ್ಚಿಸುವ ಸಲುವಾಗಿ ಪ್ರತಿವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಗುತ್ತದೆ. ಈ ಪ್ರಶಸ್ತಿಯೂ ಇದರ ಭಾಗವಾಗಿದೆ.
ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರೇವಿನ್, "ಯು.ಎಸ್.ಸರ್ಕಾರ ಮತ್ತು ಅಮೆರಿಕದ ಜನರಿಗೆ ಜೀತ ಪದ್ಧತಿಯ ವಿರುದ್ಧದ ಹೋರಾಟ ಅತ್ಯಂತ ಪ್ರಮುಖವಾಗಿದೆ.
ಇಂದು ನಮಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಲೇಬರ್‌ನ 2023 ಇಕ್ಬಾಲ್ ಮಸಿ ಪುರಸ್ಕಾರವನ್ನು ಈ ಕ್ಷೇತ್ರದ ನಿಜವಾದ ಚಾಂಪಿಯನ್ ಲಲಿತಾ ನಟರಾಜನ್ ಅವರಿಗೆ ಕೊಡುತ್ತಿರುವುದು ನಮಗೆ ಹೆಮ್ಮೆಯ ವಿಷಯ" ಎಂದರು.
"ಲಲಿತಾ ನಟರಾಜನ್ ಅವರ ದಿಟ್ಟ ಪ್ರಯತ್ನಗಳು ಭಾರತದ ಯುವಜನರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಪಡೆಯುವಲ್ಲಿ ನೆರವಾಗಿವೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅವರು ತಮಿಳು ನಾಡಿನಲ್ಲಿ ಕಲ್ಲಿನ ಕ್ವಾರಿಗಳು, ಆಹಾರ ಸಂಸ್ಕರಣಾ ಕಾರ್ಖಾನೆಗಳು ಹಾಗೂ ಮಗ್ಗಗಳು ಸೇರಿದಂತೆ ಹಲವಾರು ಕೈಗಾರಿಕಾ ವಲಯಗಳಲ್ಲಿ ಜೀತಕ್ಕೊಳಗಾಗಿದ್ದ ಮಕ್ಕಳನ್ನು ಇವರು ರಕ್ಷಿಸಿದ್ದಾರೆ. ನೂರಾರು ಭಾರತೀಯ ಮಕ್ಕಳ ಜೀವನವನ್ನು ಬದಲಿಸುವಲ್ಲಿನ ಲಲಿತಾ ನಟರಾಜನ್ ಅವರ ಪರಿಶ್ರಮವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ" ಎಂದು ಕಾನ್ಸುಲ್ ಜನರಲ್ ರೇವಿನ್ ಹೇಳಿದರು.
ಈ ಬಗ್ಗೆ ಮಾತನಾಡಿದ ಲಲಿತಾ ನಟರಾಜನ್ "ಯು.ಎಸ್. ಡಿಪಾರ್ಟ್ ಮೆಂಟ್ ಆಫ್ ಲೇಬರ್ ನಿಂದ ಪ್ರತಿಷ್ಠಿತ ಇಕ್ಬಾಲ್ ಮಸಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಬಹಳ ಗೌರವವೆನಿಸಿದೆ. ಈ ಪ್ರಶಸ್ತಿಯು ನನ್ನನ್ನು ಮಕ್ಕಳ ಮತ್ತಷ್ಟು ಕಾರ್ಯಗಳಿಗೆ ತೊಡಗಿಕೊಳ್ಳಲು ಸ್ಫೂರ್ತಿ ನೀಡಿದೆ.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆಯಾಗಿ ನಾನು ಹಲವಾರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು, ನ್ಯಾಯಾಂಗ ಮತ್ತು ಪೊಲೀಸರೊಂದಿಗೆ ಕಾರ್ಯ ನಿರ್ವಹಿಸಿ ಮಕ್ಕಳ ಹಕ್ಕುಗಳ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದೇನೆ. ಪೊಲೀಸರಿಂದ ಪ್ರಥಮ ವರ್ತಮಾನ ವರದಿ(ಎಫ್.ಐ.ಆರ್) ನೋಂದಣಿಯಾಗುವುದನ್ನು ಖಚಿತ ಪಡಿಸಿಕೊಳ್ಳಲು ಮಾವನ ಹಕ್ಕುಗಳ ಸಂಸ್ಥೆಗಳೊಂದಿಗೆ ಒಡನಾಗುತ್ತೇನೆ.
ಈ ಮೂಲಕ ಅಪರಾಧವನ್ನು ಗುರುತಿಸುವುದನ್ನು ದೃಢಪಡಿಸಿಕೊಳ್ಳುತ್ತೇನೆ. ನಾನು ಹಲವಾರು ವರ್ಷಗಳಿಂದ ನಡೆಸಿದ ಹೋರಾಟದಿಂದ ಮಾನವ ಕಳ್ಳಸಾಗಣೆ ಮತ್ತು ಜೀತದಿಂದ ಮುಕ್ತರಾದ ಮಕ್ಕಳನ್ನು ಗುರುತಿಸಲು ಬಯಸುತ್ತೇನೆ ಮತ್ತು ಅವರು ನೆಮ್ಮದಿಯಿಂದಿರಲಿ ಎಂದು ಹಾರೈಸುತ್ತೇನೆ" ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications