ನವೆಂಬರ್ 23ರಂದು ಮೆಡಿಕಲ್ ಶಾಪ್ ದೇಶವ್ಯಾಪಿ ಮುಷ್ಕರ

Posted By:
Subscribe to Oneindia Kannada

ಮುಂಬೈ, ನವೆಂಬರ್ 03: ಆನ್ ಲೈನ್ ಮೂಲಕ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ, ನವೆಂಬರ್ 23ರಂದು ದೇಶವ್ಯಾಪಿ ಮೆಡಿಕಲ್ ಶಾಪ್ ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಒಕ್ಕೂಟ(ಎಐಒಸಿಡಿ) ಹೇಳಿದೆ.

ಸಾಮಾನ್ಯ ಜನರ ಆರೋಗ್ಯ ರಕ್ಷಣೆ, ಮಾದಕ ವ್ಯಸನಿಗಳ ಮೇಲೆ ಕಡಿವಾಣ, ಅಕ್ರಮ ಮಾರಾಟ ನಿಯಂತ್ರಣ ಹಾಗೂ 8,80,000 ಔಷಧ ವ್ಯಾಪಾರಿಗಳ ಒಳಿತಿಗಾಗಿ ಮುಷ್ಕರ ಅನಿವಾರ್ಯ ಎಂದು ಎಐಒಸಿಡಿ ಅಧ್ಯಕ್ಷಜಿಎಸ್ ಶಿಂಧೆ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಆನ್‌ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಬಂದ್ ಗೆ ಕರ್ನಾಟಕದ ಔಷಧಿ ಮಾರಾಟಗಾರರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿದೆ.

Chemists call for strike on November 23 against e Pharmacies

ಕರ್ನಾಟಕದ ಕೆಮಿಸ್ಟ್ ಹಾಗೂ ಡ್ರಗಿಸ್ಟ್ ಸಂಘದ ಪದಾಧಿಕಾರಿಗಳಾದ ಎಂ.ಸಿ.ಮೇದಪ್ಪ, ರಘುನಾಥರೆಡ್ಡಿ, ಎಸ್. ಶಿವಾನಂದ ಅವರು ಮಾತನಾಡಿ, ಇತ್ತೀಚೆಗೆ ಕೇಂದ್ರ ಸರ್ಕಾರ ಆನ್‌ಲೈನ್ ಫಾರ್ಮಸಿಯಲ್ಲಿ ಔಷಧಿ ಮಾರಾಟ ಮಾಡುವುದಕ್ಕೆ ಅನುಮತಿ ನೀಡುತ್ತಿದೆ. ಇದರಿಂದ ಚಿಲ್ಲರೆ, ಸಗಟು ಔಷಧ ವ್ಯಾಪಾರವನ್ನು ನಂಬಿಕೊಂಡು ಬದುಕುತ್ತಿರುವವರು ಬೀದಿಗೆ ಬೀಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಡ್ರಗ್ಸ್ ಮತ್ತು ಕಾಸ್ಮೊಟಿಕ್ ಆಕ್ಟ್ 1940 ಸೆಕ್ಷನ್ 65(10) (ಎ) ರಂತೆ ಯಾವುದೇ ಔಷಧಿಯನ್ನು ವಿತರಣೆ ಮಾಡುವ ಮುನ್ನ ವೈದ್ಯರ ಸಲಹೆ ಚೀಟಿಯ ಮುಖಾಂತರ ನೋಂದಾಯಿತ ಅರ್ಹ ಔಷಧ ವ್ಯಕ್ತಿಯ ಮೂಲಕ ವಿತರಿಸಬೇಕೆಂದು ನಿಯಮವಿದೆ. ಸೆಕ್ಷನ್ 65 (ಬಿ) ಪ್ರಕಾರ ಗ್ರಾಹಕರ ಹೆಸರು ಹಾಗೂ ವಿಳಾಸ ಸರಿಯಾಗಿರಬೇಕಾಗುತ್ತದೆ. ಅದರೆ, ಆನ್ ಲೈನ್ ಮಾರಾಟದಿಂದ ಯಾವುದೇ ನಿಯಮ ಪಾಲನೆಯಾಗುವುದಿಲ್ಲ ಎಂದಿದ್ದಾರೆ.

ಆನ್‌ಲೈನ್ ಫಾರ್ಮಸಿ ಮೂಲಕ ಔಷಧ ವಿತರಣೆ ಮಾಡುವ ಸಂದರ್ಭದಲ್ಲಿ ಮತ್ತು ಬರುವ ಔಷಧಗಳು ಸುಲಭ ರೀತಿಯಲ್ಲಿ ಮನೆ ಬಾಗಿಲಿಗೆ ದೊರಕುವುದರಿಂದ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಸರಿಯಾಗಿ ಔಷಧಿಗಳು ಸಿಗುವುದಿಲ್ಲ. ಜೀವರಕ್ಷಕ ಔಷಧಗಳಿಗೆ ಸಂಚಕಾರ ಉಂಟಾಗುತ್ತದೆ ಎಂದು ಮೆಡಿಕಲ್ ಶಾಪ್ ಮಾಲೀಕರು ದೂಷಿಸಿದ್ದಾರೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
All India Organisation of Chemists & Druggists (AIOCD), an apex body of about eight lakh members involved in sale & distribution of medicines, today called for a nationwide strike on November 23 demanding action from the Centre against 'illegal' online sale of medicines.
Please Wait while comments are loading...