Cheetas Dies: ಕುನೋ ರಾಷ್ಟ್ರೀಯ ಉದ್ಯಾನದಿಂದ 'ಚಿರತೆಗಳ' ಸ್ಥಳಾಂತರ ನಿರ್ಧಾರ ನಮ್ಮ ಕೈಲಿಲ್ಲ

ನವದೆಹಲಿ, ಮೇ 24: ಮಧ್ಯಪ್ರದೇಶದ ಶಿಯೋಪುರ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚಿರತೆಗಳ ಪೈಕಿ ಕೆಲವು ಮೃತಪಟ್ಟಿವೆ. ಇದೀಗ ಚಿರತೆಯೊಂದರ ನಾಲ್ಕು ಮರಿಗಳ ಪೈಕಿ ಒಂದು ಮರಿ ಸಹ ಸಾವನ್ನಪ್ಪಿದೆ. ಉದ್ಯಾನದ ನಿರ್ವಹಣೆ ಮೇಲೆ ಅನುಮಾನ ಮೂಡುವಂತಹ ಬೆಳವಣಿಗೆಗಳು ಪದೇ ಪದೆ ನಡೆಯುತ್ತಿವೆ. ಇತ್ತ ಅರಣ್ಯಾಧಿಕಾರಿಗಳು ಚಿರತೆಗಳ ಸ್ಥಳಾಂತರ ನಮ್ಮ ಕೈಯಲ್ಲಿಲ್ಲ, ಅದನ್ನು ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ಚಿರತೆ ಮರಿ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ಅವರು, ಚಿರತೆಗಳನ್ನು ಸ್ಥಳಾಂತರಿಸುವ ನಿರ್ಧಾರವು ಅವರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಕೇಂದ್ರ ಸರ್ಕಾರ ಮಾತ್ರ ನಿರ್ಧರಿಸಲು ಸಾಧ್ಯತೆ ಎಂದರು.

Cheetahs Dies: We Can Not Decide Relocation Of Cheetahs Kuno National Park Union Govt Can Decide

ಇತ್ತೀಚೆಗಷ್ಟೇ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 'ಜ್ವಾಲಾ' ಎಂಬ ಹೆಣ್ಣು ಚಿರತೆಯು ನಾಲ್ಕು ಮರಿಗಳನ್ನು ಹಾಕಿತ್ತು. ಅವೆಲ್ಲವುಗಳನ್ನು ಅರಣ್ಯಾಧಕಾರಿಗಳು ಗಮನಿಸುತ್ತಲೇ ಇದ್ದರು. ಹೀಗಿದ್ದರೂ ಅದರಲ್ಲಿ ಒಂದು ಮರಿ ದೌರ್ಬಲ್ಯದಿಂದ ಸಾವನ್ನಪ್ಪಿದೆ. ಮೂರು ಮರಿಗಳು ಆರೋಗ್ಯವಾಗಿವೆ.

ಮಂಗಳವಾರ ಬೆಳಗ್ಗೆ, ಎಲ್ಲಾ ಮರಿಗಳು ಮತ್ತು ತಾಯಿ ಚಿರತೆಗಳು ಒಂದೇ ಸ್ಥಳದಲ್ಲಿ ಉಳಿದುಕೊಂಡಿರುವುದನ್ನು ನಿಗಾ ತಂಡದ ಸದಸ್ಯರು ಕಂಡಿದ್ದರು. ಆಗ ನಾಲ್ಕು ಮರಿಗಳು ಸಹಿತ ತಾಯಿ ಚಿರತೆಯು ಇತ್ತು. ಸ್ವಲ್ಪ ಹೊತ್ತಿನ ನಂತರ ತಾಯಿ ಜ್ವಾಲಾ ಜೊತೆ ಮೂರು ಮರಿಗಳು ಮಾತ್ರ ಬೆರೆಡೆ ತೆರಳಿದ್ದವು. ಮೃತ ಚಿರತೆ ಮರಿ ಅಲ್ಲಿಯೆ ಇತ್ತು.

ಕೂಡಲೇ ನಿರ್ವಹಣಾ ತಂಡವು ದೌರ್ಬಲ್ಯದಿಂದ ಕೂಡಿದ್ದ ಚಿರತೆ ಮರಿಯನ್ನು ಪಶುವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಕೇವಲ 10 ನಿಮಿಷಗಳಲ್ಲಿ ಚಿರತೆ ಮರಿ ಸಾವನ್ನಪ್ಪಿತು. ಹುಟ್ಟಿನಿಂದಲೇ ದೌರ್ಬಲ್ಯದಿಂದ ಕೂಡಿದ ಮರಿ ಸಾವಾಗಿದೆ. ಉಳಿದ ಮೂರು ಮರಿಗಳು ಫಿಟ್ ಆಗಿವೆ ಎಂದು ಅವರು ವಿವರಿಸಿದ್ದಾರೆ.

Cheetahs Dies: We Can Not Decide Relocation Of Cheetahs Kuno National Park Union Govt Can Decide

ಚೀತಾಗಳ ನಿರ್ವಹಣೆಯಲ್ಲಿ ಲೋಪವಾಗಿಲ್ಲ

ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಅಲ್ಲಿ ಈವರೆಗೆ ವಿವಿಧ ಕಾರಣಗಳಿಗಾಗಿ 03 ಚಿರತೆಗಳು ಸಾವನ್ನಪ್ಪಿದ್ದವು.

ಪದೇ ಪದೆ ಸಾವಿನ ಘಟನೆ ಮರುಕಳಿಸುತ್ತಿವೆ. ಇದರಿಂದ ಕುನೋ ಪಾರ್ಕ್‌ನಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಅನುಮಾನ ಮೂಡಿವೆ. ಆದರೆ ಈ ಬಗ್ಗೆ ಉತ್ತರಿಸಿದ ಚೌಹಾಣ್ ಅವರು, ಚಿರತೆ ನಿರ್ವಹಣೆಯ ಪ್ರತಿ ಹಂತದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡಿದ್ದೇವೆ. ನಮ್ಮಿಂದ ಯಾವ ತಪ್ಪು ಸಹ ಆಗಿಲ್ಲ ಎಂದು ತಿಳಿಸಿದರು.

ಪ್ರಾಜೆಕ್ಟ್ ಚೀತಾದಡಿ ನಮೀಬಿಯಾದ ನಂತರ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪುನರ್ವಸತಿ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+