ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಾರ್ ಧಾಮ್ ಯಾತ್ರೆ': ಉತ್ತರಾಖಂಡ್ ಹವಾಮಾನ ಬಗ್ಗೆ ತಿಳಿಯಿರಿ

|
Google Oneindia Kannada News

ಡೆಹ್ರಾಡೊನ್, ಅಕ್ಟೋಬರ್ 21: ಹಿಂದುಗಳ ಪ್ರಮುಖ ಪವಿತ್ರ ಯಾತ್ರೆಗಳಲ್ಲಿ 'ಚಾರ್ ಧಾಮ್ ಯಾತ್ರೆ' ಯೂ ಒಂದು. ಹೆಸರೇ ಹೇಳುವಂತೆ ಈ ಯಾತ್ರೆಯಡಿ ಜನರು 'ಕೇದಾರನಾಥ್, ಭದ್ರಿನಾಥ್, ಯಮುನೋತ್ರಿ ಹಾಗೂ ಗಂಗೋತ್ರಿ' ನಾಲ್ಕು ಧಾರ್ಮಿಕ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಈ ಕ್ಷೇತ್ರಗಳು ವರ್ಷದಲ್ಲಿ ಗರಿಷ್ಠ ದಿನಗಳು ಹಿಮ ಬೀಳುವ ಭಾರತದ 27ನೇ ರಾಜ್ಯ ಉತ್ತರಾಖಂಡ್ ವ್ಯಾಪ್ತಿಗೆ ಬರುತ್ತವೆ.

ಅಕ್ಟೋಬರ್ ತಿಂಗಳಲ್ಲಿ ಉತ್ತರಾಖಂಡ್ ರಾಜ್ಯದಲ್ಲಿ ಅತೀ ಹೆಚ್ಚು ಚಳಿ ಇರುತ್ತದೆ. ಸದ್ಯ ಅಲ್ಲಿ ಗರಿಷ್ಠ 12 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 05 ಡಿಗ್ರಿ ಸೆಲ್ಸಿಯಸ್ ಇದೆ. ಒಟ್ಟು ಹತ್ತು ದಿನ ಹಗಲು, ಹತ್ತು ರಾತ್ರಿಗಳನ್ನು ವ್ಯಯಿಸಿದರೆ ನಾವು ದೇಶದ ಪ್ರಮುಖ ಈ 4 ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಇದಕ್ಕು ಮೊದಲು ದೇಶ ಗಡಿ ರಾಜ್ಯವಾದ ಉತ್ತರಾಖಂಡ್‌ನಲ್ಲಿ ‌ಹವಾಮಾನ, ಈಗಿನ ವಾತಾವರಣ ಹೇಗಿರುತ್ತದೆ ಎಂಬುದನ್ನು ತಿಳಿಯೇಬೇಕಿದೆ.

ವಿಡಿಯೋ: ಮೊದಲ ಹಿಮಪಾತ, ಕೇದಾರನಾಥ್, ಬದರಿನಾಥ ಬಂದ್ವಿಡಿಯೋ: ಮೊದಲ ಹಿಮಪಾತ, ಕೇದಾರನಾಥ್, ಬದರಿನಾಥ ಬಂದ್

ಏಪ್ರಿಲ್ ನಿಂದ ಈ ಪ್ರದೇಶಗಳಲ್ಲಿ ಉಷ್ಣಾಂಶ ಏರಿಕೆ ಆಗುವುದರಿಂದ ಈ ವರ್ಷ ಮೇ-ಅಕ್ಟೋಬರ್ ಅಂತ್ಯದವರೆಗೆ ಚಾರ್ ಧಾಮ್ ಯಾತ್ರೆಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ ನಂತರ ಇಲ್ಲಿ ಅತ್ಯಧಿಕ ಚಳಿ ಹೆಚ್ಚಾಗುವ ಕಾರಣಕ್ಕೆ ಇದೇ ತಿಂಗಳಾಂತ್ಯಕ್ಕೆ ಯಾತ್ರೆಗೆ ನೀಡಿದ ಅವಕಾಶ ಕೊನೆಗೊಳ್ಳಲಿದೆ.

ಏಪ್ರಿಲ್-ಜೂನ್‌ವರೆಗೆ 35 ಡಿ.ಸೆ. ಉಷ್ಣಾಂಶ ಏರಿಕೆ

ಏಪ್ರಿಲ್-ಜೂನ್‌ವರೆಗೆ 35 ಡಿ.ಸೆ. ಉಷ್ಣಾಂಶ ಏರಿಕೆ

ಉತ್ತರಾಖಂಡ್‌ನಲ್ಲಿ ಏಪ್ರಿಲ್ ನಿಂದ ಜೂನ್‌ವರೆಗೆ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಗರಿಷ್ಠ ತಾಪಮಾನ ತಲುಪಿ ನಂತರ ಅಕ್ಟೋಬರ್ ಅಷ್ಟರಲ್ಲಿ ಇಳಿಕೆಯಾಗುತ್ತದೆ ಗರಿಷ್ಠ 12 ಡಿಗ್ರಿ ಸೆಲ್ಸಿಯಸ್ ಬರುತ್ತದೆ. ಉಳಿದ ದಿನಗಳಲ್ಲಿ ತೀವ್ರ ಹಿಮಪಾತದಿಂದ ಕೊರೆಯುವ ಚಳಿ ಸೃಷ್ಟಿಯಾಗುತ್ತದೆ. ಇದು ಸಾಕಷ್ಟು ಸಾವುಗಳಿಗೂ ಕಾರಣವಾಗಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸದ್ಯ 'ಬದ್ರಿನಾಥ್'ದಲ್ಲಿ ಮುಂದಿನ ಏಳು ದಿನವು ಬಿಸಿಲಿನ ತಾಪಮಾನ ಕಂಡು ಬರಲಿದೆ. ಇಲ್ಲಿ ಸರಾಸರಿ ಕನಿಷ್ಠ ತಾಪಮಾನ -14 ಡಿಗ್ರಿ ಸೆಲ್ಸಿಯಸ್ ಗರಿಷ್ಠ -5.5 ಡಿಗ್ರಿ ಸೆಲ್ಸಿಯಸ್ ಇರಲಿದೆ. 'ಗಂಗೋತ್ರಿ'ಯಲ್ಲಿ ಅಕ್ಟೋಬರ್ 21ರಿಂದ 27ರವರೆಗೆ ಸರಾಸರಿ ಕನಿಷ್ಠ-8 ಡಿಗ್ರಿ ಸೆಲ್ಸಿಯಸ್, ಗರಿಷ್ಠ -3 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ಈ ಭಾಗದಲ್ಲಿ ಸದ್ಯಕ್ಕೆ ಮಳೆ, ಹಿಮಪಾತದ ಲಕ್ಷಣಗಳು ಸಂಪೂರ್ಣವಾಗಿ ತಗ್ಗಿವೆ ಎನ್ನಲಾಗಿದೆ.

ಕೇದಾರನಾಥದಲ್ಲಿ ತುಂತುರು ಮಳೆ ನಿರೀಕ್ಷೆ

ಕೇದಾರನಾಥದಲ್ಲಿ ತುಂತುರು ಮಳೆ ನಿರೀಕ್ಷೆ

'ಕೇದಾರನಾಥ'ದಲ್ಲಿ ಅ.21ರಂದು ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದ್ದು, ಉಳಿದಂತೆ ಮುಂದಿನ ಅ.27ರವರೆಗೆ ಬಿಸಿಲಿನ ವಾತಾವರಣ ಕಂಡುಬರಲಿದೆ. ಈ ವೇಳೆ ಇಲ್ಲಿ ಸರಾಸರಿ ಕನಿಷ್ಠ -11 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ-3.5 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಇಷ್ಟು ಪ್ರಮಾಣ ಬಿಸಿಲು ಈ ಭಾಗದಲ್ಲಿ ಸಾಮಾನ್ಯವಾದ ತಕ್ಕಮಟ್ಟಿಗಿನಿ ಬಿಸಿಲಿನ ವಾತಾವರಣ ಎನ್ನಲಾಗಿದೆ. ಅದೇ ರೀತಿ 'ಯಮುನೋತ್ರಿ'ಯಲ್ಲಿ ಸಹ ಇಂದು ಶುಕ್ರವಾರ ಅಲ್ಲಲ್ಲಿ ಚುದರಿದಂತೆ ಮಳೆ ಆಗಲಿದೆ. ಅ. 27ರವರೆಗೆ ಕಡಿಮೆ ಸಂಪೂರ್ಣವಾಗಿ ತಗ್ಗಲಿದ್ದು, ಬಿಸಿಲು ಬೀಳಲಿದೆ. ಸರಸಾರಿ ಕನಿಷ್ಠ -2 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 7.2 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಹವಮಾನ ಇಲಾಖೆ ವರದಿ ತಿಳಿಸಿದೆ.

ಉತ್ತರಾಖಂಡ್‌ನಲ್ಲಿ ಇಂದಿನ ದಿನಗಳಲ್ಲಿ ಬಿಸಿಲಿನ ವಾತಾವರಣ ಇದೆ. ಕಳೆದ 24ಗಂಟೆಯಲ್ಲಿ ಇಲ್ಲಿ ಗರಿಷ್ಠ 29ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇದೆ ಎಂದು ತಿಳಿದು ಬಂದಿದೆ. ಇಲ್ಲಿನ ಜೋರು, ಮಳೆ, ಹಿಮಪಾತ ಕುರಿತು ಯಾವುದೇ ಎಚ್ಚರಿಕೆಗಳು ಇಲ್ಲ.

ಚಾರ್‌ ಧಾಮ್ ಯಾತ್ರೆ: ಆರೋಗ್ಯ ತಪಾಸಣೆ ಕಡ್ಡಾಯ

ಚಾರ್‌ ಧಾಮ್ ಯಾತ್ರೆ: ಆರೋಗ್ಯ ತಪಾಸಣೆ ಕಡ್ಡಾಯ

ಈ ಚಾರ್‌ ಧಾಮ್ ಯಾತ್ರೆ ಮಾಡುವ 50 ವರ್ಷಕ್ಕಿಂತ ಮೇಲಿನವರು ಕಡ್ಡಾಯ ಆರೋಗ್ಯ ತಪಾಸಣೆ ಮಾಡಿಸಬೇಕಿದೆ. ಕಾರಣ ಇಲ್ಲಿನ ಮೈಕೊರೆವ ಚಳಿಗೆ ಬೇಗನೇ ಹೈಪೋಥರ್ಮಿಯಾಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲಿನ ಸರ್ಕಾರದ ಪ್ರಕಾರ ಇದುವರೆಗೆ ಯಾತ್ರೆಯಲ್ಲಿ 101ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಯಲು ಸೀಮೆಯ ಜನಕ್ಕೆ ಈ ಯಾತ್ರೆ ತುಸು ಕಷ್ಟವೇ ಆಗಿದ್ದು, ಅಗತ್ಯ ಹೊದಿಕೆ, ಆರೋಗ್ಯ ತಪಾಸಣೆ, ಸೂಕ್ತ ಮುಂಜಾಗ್ರತೆ ವಹಿಸಿದರೆ ಯಾತ್ರೆ ಸುಲಭವಾಗುತ್ತದೆ.

- ಬದರಿನಾಥ ದೇವಾಲಯದ ಬಾಗಿಲು ನವೆಂಬರ್ 19ರಂದು ಮುಚ್ಚಲಾಗುತ್ತದೆ

- ಕೇದಾರನಾಥ ಕ್ಷೇತ್ರದ ದರ್ಶನ ಅಕ್ಟೋಬರ್ 27ರಂದು ಮುಚ್ಚಲಾಗುತ್ತಿದೆ.

- ಗಂಗೋತ್ರಿ ಅಕ್ಟೋಬರ್ 26ರಂದು ಮತ್ತು ಯಮುನೋತ್ರಿಯ ಬಾಗಿಲನ್ನು ಅ. 27ರಂದು ಮುಚ್ಚಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಕೇದಾರನಾಥಗೆ ಪ್ರಧಾನಿ ಮೋದಿ ಭೇಟಿ

ಕೇದಾರನಾಥಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ ಕೇದಾರನಾಥಕ್ಕೆ ಭೇಟಿ ನೀಡಿದ್ದು, ಅಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಪರಿಶೀಲಿಸಿದ್ದಾರೆ. ಜೊತೆಗೆ ಹಲವು ಹೊಸ ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದಾರೆ. ಅವರ ಆಗಮನ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

English summary
Char Dham Yatra Now How is the weather conditions in Uttarakhand state of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X