Breaking: ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿ ಬಾಂಬ್ ಇರಿಸಿದ ಬೆದರಿಕೆ!
ಪಾಟ್ನಾ, ಡಿಸೆಂಬರ್ 20: ಬಿಹಾರದ ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ವರದಿ ಸೋಮವಾರ ಸಾಕಷ್ಟು ಗೊಂದಲವನ್ನು ಸೃಷ್ಟಿ ಮಾಡಿತು. ಈ ಬೆದರಿಕೆಯಿಂದಾಗಿ ಪ್ರಯಾಣಿಕರು ಆತಂಕಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಮಾಹಿತಿ ಲಭಿಸಿದ ತಕ್ಷಣ ರೈಲ್ವೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿಯಿತು. ಅವರು ಶೋಧ ಕಾರ್ಯಾಚರಣೆ ಮತ್ತು ತನಿಖೆಯನ್ನು ಅಧಿಕಾರಿಗಳು ಪ್ರಾರಂಭಿಸಿದರು.
ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆಯ ಬಗ್ಗೆ ಪೊಲೀಸರು ವದಂತಿ ಎಂದು ಕರೆದರೂ, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಬಾಂಬ್ ಪತ್ತೆಯಾದ ಮಾಹಿತಿಯಿಲ್ಲ:
ರೈಲ್ವೆ ಜಂಕ್ಷನ್ ಪೂರ್ತಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಆದರೆ ಯಾವುದೇ ಬಾಂಬ್ ಪತ್ತೆಯಾದ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ನಾವು ವಿಶೇಷ ತನಿಖೆಯನ್ನೂ ನಡೆಸುತ್ತಿದ್ದೇವೆ, ಎಂದು ಪಾಟ್ನಾ ರೈಲ್ವೆ ಜಂಕ್ಷನ್ ನಿಲ್ದಾಣದ ಉಸ್ತುವಾರಿ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ದೆಹಲಿಯಲ್ಲೂ ಅನುಮಾನಾಸ್ಪದ ಬ್ಯಾಗ್ ಪತ್ತೆ:
ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ಬಳಿ ಸೋಮವಾರ ಬೆಳಗ್ಗೆ ಯಾರೂ ಗಮನಿಸದ ಬ್ಯಾಗ್‌ನಲ್ಲಿ ಬಾಂಬ್‌ನಂತಹ ಅನುಮಾನಾಸ್ಪದ ವಸ್ತು ಪತ್ತೆಯಾಗಿತ್ತು. ಬೆಳಗ್ಗೆ 9.04 ರ ಸುಮಾರಿಗೆ ದೆಹಲಿ ಪೊಲೀಸರಿಗೆ ಪಿಸಿಆರ್ ಕರೆ ಬಂದಿದ್ದು, ಪಶ್ಚಿಮ ವಿಹಾರ್‌ನ ರಾಡಿಸನ್ ಬ್ಲೂ ಹೋಟೆಲ್ ಬಳಿ ರಸ್ತೆಯಲ್ಲಿ ಯಾರೂ ಗಮನಿಸದ ಬ್ಯಾಗ್ ಬಿದ್ದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ದೆಹಲಿ ಪೊಲೀಸ್ ತಂಡ ಮತ್ತು ಬಾಂಬ್ ಸ್ಕ್ವಾಡ್ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಬದಿಯ ಬ್ಯಾಗ್‌ನ ಬಳಿ ಕಂಟೇನರ್‌ಗಳನ್ನು ಲಾಕ್ ಮಾಡಲು ಬಳಸುವ ಡಿಜಿಟಲ್ ಲಾಕ್ ಪತ್ತೆಯಾಗಿದೆ, ಆದರೆ ಒಳಗೆ ಯಾವುದೇ ಸ್ಫೋಟಕಗಳು ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications