• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರಯಾನ 2 ಪ್ರಾಯೋಗಿಕ ಪರೀಕ್ಷೆ ಯಶಸ್ವಿ, ಸೋಮವಾರ ಉಡಾವಣೆ

|

ಬೆಂಗಳೂರು, ಜುಲೈ 21 : ದೇಶದ ಬಹುನಿರೀಕ್ಷಿತ ಚಂದ್ರಯಾನ -2 ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಸೋಮವಾರ ಮಧ್ಯಾಹ್ನ 2.43ಕ್ಕೆ ರಾಕೆಟ್ ಉಡಾವಣೆಗೆ ಸಮಯ ನಿಗದಿ ಮಾಡಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಕುರಿತು ಟ್ವೀಟ್ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಿಂದ ಸೋಮವಾರ ರಾಕೆಟ್ ನಭಕ್ಕೆ ಹಾರಲಿದೆ.

ಚಂದ್ರಯಾನ-2: ಜುಲೈ 22ರಂದು ಬಾಹುಬಲಿಯ ಉಡಾವಣೆ

ಮೊದಲು ಜುಲೈ 15ರಂದು ರಾಕೆಟ್ ಉಡಾವಣೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, ತಾಂತ್ರಿಕ ದೋಷದ ಕಾರಣ ಉಡಾವಣೆಯನ್ನು 56 ನಿಮಿಷ ಮೊದಲು ಸ್ಥಗಿತಗೊಳಿಸಲಾಗಿತ್ತು. ಬಳಿಕ ಜುಲೈ 22ರ ಮಧ್ಯಾಹ್ನ 2.43ಕ್ಕೆ ಸಮಯ ನಿಗದಿ ಮಾಡಲಾಗಿದೆ.

ಚಂದ್ರಯಾನ 2 : 'ಬಾಹುಬಲಿ' ಯಾರನ್ನು ಹೊತ್ತೊಯ್ಯಬೇಕು?

ಭಾರತದ ಅತಿ ಭಾರದ ರಾಕೆಟ್ ಎಂದು ಹೆಸರಿಸಲಾದ ಜಿಎಸ್‌ಎಲ್‌ವಿ ಎಂಕೆ -3 ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತು ಉಡಾವಣೆಗೆ ಸಿದ್ಧವಾಗಿದೆ. ಇಸ್ರೋ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಅದು ಯಶಸ್ವಿಯಾಗಿದೆ.

ಚಂದ್ರಯಾನ 02 'ಬಾಹುಬಲಿ' ಉಡಾವಣೆ, LIVE ನೋಡೋದು ಹೇಗೆ?

ಚಂದ್ರಯಾನ - 2 ಅಮೋಘ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವ ಮಹತ್ವದ ಯೋಜನೆ ಇದಾಗಿದ್ದು, ಇಡೀ ದೇಶವೇ ಸೋಮವಾರದ ಉಡಾವಣೆಗೆ ಕಾದು ಕುಳಿತಿದೆ.

English summary
The Indian Space Research Organisation (ISRO) has completed the rehearsal launch of Chandrayaan 2. rehearsal mission completed and performance normal. It will be launched on July 22, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X