ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 3 ಮತ್ತಷ್ಟು ವಿಳಂಬ, 2022ರಲ್ಲಿ ಉಡಾವಣೆ ಸಾಧ್ಯತೆ

|
Google Oneindia Kannada News

ನವದೆಹಲಿ,ಫೆಬ್ರವರಿ 21: ಚಂದ್ರಯಾನ 3 ಮತ್ತಷ್ಟು ವಿಳಂಬವಾಗಲಿದ್ದು 2022ರಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಹೇಳಿದ್ದಾರೆ.

ಈ ಹಿಂದಿನ ಚಂದ್ರಯಾನಗಳಲ್ಲಿ ಆರ್ಬಿಟರ್ ಇತ್ತು. ಆದರೆ ಚಂದ್ರಯಾನ-3 ಆರ್ಬಿಟರ್ ರಹಿತವಾಗಿರಲಿದೆ. ಚಂದ್ರಯಾನ-3 ರೆಡೆಗೆ ನಾವು ಕೆಲಸ ಮಾಡುತ್ತಿದ್ದೇವೆ, ಚಂದ್ರಯಾನ-2 ಮಾದರಿಯಲ್ಲೇ ಚಂದ್ರಯಾನ-3 ರ ಸಂರಚನೆ ಇರಲಿದ್ದು, 2022 ಕ್ಕೆ ಉಡಾವಣೆಯಾಗುವ ನಿರೀಕ್ಷೆ ಇದೆ ಎಂದು ಶಿವನ್ ಪಿಟಿಐ ಗೆ ತಿಳಿಸಿದ್ದಾರೆ.

ಮಾನವ ಸಹಿತ ಚಂದ್ರಯಾನ ನಾಸಾ ತಂಡದಲ್ಲಿ ಓರ್ವ ಭಾರತೀಯ ಮಾನವ ಸಹಿತ ಚಂದ್ರಯಾನ ನಾಸಾ ತಂಡದಲ್ಲಿ ಓರ್ವ ಭಾರತೀಯ

ಕೋವಿಡ್-19 ಲಾಕ್ ಡೌನ್ ನ ಪರಿಣಾಮವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಹಲವು ಯೋಜನೆಗಳು ವಿಳಂಬವಾಗಿದ್ದವು.

Chandrayaan 3 Launch Delayed

ಚಂದ್ರಯಾನ-2 ರೋವರ್ ನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸಿ ಅಲ್ಲಿನ ಅನ್ವೇಷಣೆಗೆ ಉದ್ದೇಶಿಸಲಾಗಿತ್ತು. ಆದರೆ ಹಾರ್ಡ್ ಲ್ಯಾಂಡಿಂಗ್ ನಿಂದಾಗಿ ಯೋಜನೆ ನಿರೀಕ್ಷೆಯಂತೆ ಕಲಸ ಮಾಡಲಿಲ್ಲ.

2020 ರ ವರ್ಷಾಂತ್ಯಕ್ಕೆ ಉಡಾವಣೆಯಾಗಬೇಕಿದ್ದ ಚಂದ್ರಯಾನ-3 ಹಾಗೂ ಗಗನ್ ಯಾನ್ (ಮೊದಲ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ) ಯೋಜನೆಗಳು ಮುಂದೂಡಲ್ಪಟ್ಟಿವೆ.

English summary
Chandrayaan 3 India's third mission on moon, is likely to be launched in 2022, ISRO chief K Sivan has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X