ಹರ್ಯಾಣದಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ, ಉತ್ತರ ಪ್ರದೇಶದಲ್ಲಿ ಚುನಾವಣಾ ಬಿಸಿ

ಅರೆಕಾಲಿಕ ಉಪನ್ಯಾಸಕರ ಸಮಸ್ಯೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಹರ್ಯಾಣದಲ್ಲೂ ಇದೆ. ಅಲ್ಲೂ ಗುರುವಾರದಿಂದ ಪ್ರತಿಭಟನೆ ಶುರುವಾಗಿದೆ. ಆಲ್ ಹರ್ಯಾಣ ಲೆಕ್ಚರರ್ಸ್ ಸಂಘದ ವತಿಯಿಂದ ಗುರುವಾರ ಹರ್ಯಾಣದ ಅಲ್ಲಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.

ಸದ್ಯಕ್ಕೀಗ ಅಲ್ಲಿ ಪ್ರತಿ ಉಪನ್ಯಾಸಕ್ಕೆ 250 ರು. ಲೆಕ್ಕಾಚಾರದಲ್ಲಿ ವೇತನ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.

ಇದಲ್ಲದೆ, ತಮ್ಮನ್ನು ಖಾಯಂ ಸಿಬ್ಬಂದಿಗಳನಾಗಿ ನೇಮಕ ಮಾಡುವಂತೆಯೂ ಅವರು ಅಲ್ಲಿನ ಸರ್ಕಾರವನ್ನು ಪ್ರಾರ್ಥಿಸಿದ್ದಾರೆ. ಆದರೆ, ವರ್ಷಗಳಿಂದ ಅವರ ಬೇಡಿಕೆ ಈಡೇರಿಲ್ಲವಾದ್ದರಿಂದ ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಶುಕ್ರವಾರವೂ ಆ ಪ್ರತಿಭಟನೆ ಮುಂದುವರಿದಿದೆ.

ಅತಿ ಉಪನ್ಯಾಸಕರ ಗೋಳು

ಅತಿ ಉಪನ್ಯಾಸಕರ ಗೋಳು

ಪಂಖುಲಾದಲ್ಲಿ ಆಲ್ ಹರ್ಯಾಣ ಲೆಕ್ಚರರ್ಸ್ ಸಂಘದಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು, ಪೊಲೀಸರು ಜಲ ಫಿರಂಗಿ ಬಳಸಿದ ರೀತಿಯಿದು.

ಹಡಗು ಸಂಸ್ಥೆಯಲ್ಲಿ ಅಧ್ಯಕ್ಷ

ಹಡಗು ಸಂಸ್ಥೆಯಲ್ಲಿ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ ಫೋಲ್ಕ್ ನಲ್ಲಿರುವ ಗೆರಾಲ್ಡ್ ಆರ್. ಫೋರ್ಡ್ ಎಂಬ ಹಡಗು ನಿರ್ಮಾಣ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯನ್ನುದ್ದೇಶಿಸಿ ಭಾಷಣ ಮಾಡಿದರು.

ಮೆಕ್ಸಿಕರ್ ಟೆನಿಸ್ ಪಂದ್ಯಾವಳಿ

ಮೆಕ್ಸಿಕರ್ ಟೆನಿಸ್ ಪಂದ್ಯಾವಳಿ

ಮೆಕ್ಸಿಕೋದ ಅಕಾಪುಲೋದಲ್ಲಿ ನಡೆಯುತ್ತಿರುವ ಮೆಕ್ಸಿಕನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸ್ ಪಂದ್ಯವೊಂದರಲ್ಲಿ ಸ್ಪೇನ್ ನ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರು, ಜಪಾನ್ ನ ಯೊಶಿಹಿಟೊ ನಿಶಿಹಿಟೊ ವಿರುದ್ಧ ಸೆಣಸಿದ್ದು ಹೀಗೆ.

ಮಳೆಯಲ್ಲಿ ತೊಯ್ದ ಫ್ರಾಂಕ್ ಫರ್ಟ್

ಮಳೆಯಲ್ಲಿ ತೊಯ್ದ ಫ್ರಾಂಕ್ ಫರ್ಟ್

ಫ್ರಾಂಕ್ ಫರ್ಟ್ ನಲ್ಲಿ ಗುರುವಾರ ಸುರಿದ ಭರ್ಜರಿ ಮಳೆಯಿಂದಾಗಿ ರಸ್ತೆಗಳೆಲ್ಲಿ ನೀರು ನಿಂತಿದೆ. ಅಂಥದ್ದೇ ರಸ್ತೆ ನೀರಿನಲ್ಲಿ ಆ ನಗರದ ಓಲ್ಡ್ ಒಪೇರಾ ಕಟ್ಟಡದ ಪ್ರತಿಬಿಂಬ ಕಂಡಿದ್ದು ಹೀಗೆ.

ಪ್ರಥಮ ಪ್ರಜೆಯ ಕಲಾ ವೀಕ್ಷಣೆ

ಪ್ರಥಮ ಪ್ರಜೆಯ ಕಲಾ ವೀಕ್ಷಣೆ

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಕೇರಳದ ಕೊಚ್ಚಿಯಲ್ಲಿ ಗುರುವಾರ 'ಕೊಚ್ಚಿ ಮುಜಿರಿಜ್ ಬೆನಾಲೆ' ಎಂಬ ಕಲಾಕೇಂದ್ರವನ್ನು ಉದ್ಘಾಟಿಸಿದಾಗ ತೆಗೆದ ಫೋಟೋ ಇದು.

ರಾಹುಲ್ ಪ್ರಚಾರ

ರಾಹುಲ್ ಪ್ರಚಾರ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ ಪ್ರಚಾರಕ್ಕಾಗಿ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಜನರತ್ತ ಕೈಬೀಸುತ್ತಿರುವುದು.

ತರಬೇತಿಯ ಚಿತ್ರಣ

ತರಬೇತಿಯ ಚಿತ್ರಣ

ಯುನೈಟೆಡ್ ಅರಬ್ ಎಮೆರೇಟ್ಸ್ ನ ರಾಜಧಾನಿಯಾದ ಅಬುಧಾಬಿಯಲ್ಲಿ ಸೈನಿಕರು ಪಾಲ್ಗೊಂಡಿದ್ದ ಕಾರ್ಯಾಚರಣೆ ತರಬೇತಿಯ ವೇಳೆ ಕಂಡು ಬಂದ ದೃಶ್ಯವಿದು.

ಭಟ್ ಪ್ರಚಾರ ಕಾರ್ಯಕ್ರಮ

ಭಟ್ ಪ್ರಚಾರ ಕಾರ್ಯಕ್ರಮ

ತಮ್ಮ ಹೊಸ ಪಂಜಾಬಿ ಚಿತ್ರವಾದ 'ದುಶ್ಮನ್ 'ನ ಪ್ರಚಾರಕ್ಕಾಗಿ ಮೊಹಾಲಿಯಲ್ಲಿನ ಚಂಡೀಗಢ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಚಿತ್ರ ನಿರ್ದೇಶಕ ಮಹೇಶ್ ಭಟ್, ಅಲ್ಲಿನ ಸಿಬ್ಬಂದಿ, ವಿದ್ಯಾರ್ಥಿಗಳೊಂದಿಗೆ ವೇದಿಕೆ ಮೇಲೆ ನೃತ್ಯ ಮಾಡಿ ರಂಜಿಸಿದರು.

ಅಮಿತ್ ರೋಡ್ ಶೋ

ಅಮಿತ್ ರೋಡ್ ಶೋ

ಗೋರಖ್ ಪುರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಏರ್ಪಡಿಸಲಾಗಿದ್ದ ರೋಡ್ ಶೋನಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ.

ಮಂಡಿಯಲ್ಲಿ ಇನ್ನೂ ಆಚರಣೆ

ಮಂಡಿಯಲ್ಲಿ ಇನ್ನೂ ಆಚರಣೆ

ಶಿವರಾತ್ರಿ ಹಬ್ಬ ಮುಗಿದಿದ್ದರೂ ಕೆಲವೆಡೆ ಆ ಹಬ್ಬದ ಆನಂತರದ ವ್ರತ, ಪೂಜಾ ವಿಧಾನಗಳಿನ್ನೂ ಜಾರಿಯಲ್ಲಿವೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ವಾರ ಪೂರ್ತಿ ಶಿವರಾತ್ರಿ ನಡೆಯುವುದರಿಂದ ಅಲ್ಲಿನ ಭಕ್ತರು ಪ್ರಸಾದ ಮಾಡಿಕೊಂಡು ದೇಗುಲಕ್ಕೆ ಹೋಗುತ್ತಿದ್ದ ದೃಶ್ಯವಿದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+