ಲಾಲು ಪ್ರಸಾದ್ ಯಾದವ್ ರಿಂದ Z+ ಸೆಕ್ಯುರಿಟಿ ಕಸಿದುಕೊಂಡ ಕೇಂದ್ರ

Posted By:
Subscribe to Oneindia Kannada

ಪಾಟ್ನಾ, ನವೆಂಬರ್ 27 : ಆರ್ ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ಝೆಡ್ ಪ್ಲಸ್ (Z +) ಶ್ರೇಣಿಯ ಭದ್ರತೆಯನ್ನು ಕೆಂದ್ರ ಸರ್ಕಾರ ಹಿಂಪಡೆದಿದೆ.

ಸುಶೀಲ್ ಮೋದಿ ಪುತ್ರನ ಮದುವೆಗೆ ಹೋಗಿ ಮೋದಿಗೆ ಹೊಡೆದುಬರುತ್ತೇನೆ!

ಝೆಡ್ ಪ್ಲಸ್ ಬದಲಾಗಿ ಲಾಲು ಪ್ರಸಾದ್ ಯಾದವ್ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಲಾಗುವುದು. ಹಾಗೂ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಬ್ಲಾಕ್ ಕ್ಯಾಟ್ ಕಮಾಂಡೋ (ಎನ್ ಎಸ್ ಜಿ) ಗಳ ಬದಲಿಗೆ ಕೇಂದ್ರ ಮೀಸಲು ಪಡೆ (ಸಿಆರ್ ಪಿಫ್) ಒದಗಿಸಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಗುಜರಾತ್ ಚುನಾವಣೆ ರಂಗೇರಿಸಲಿದ್ದಾರೆ ಲಾಲೂ ಪ್ರಸಾದ್ ಯಾದವ್

Centre withdraws RJD chief Lalu Prasad Yadav's 'Z+' NSG security cover

ಇನ್ನೋರ್ವ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರಿಗೂ ನೀಡಲಾಗಿದ್ದ ಝೆಡ್ ಪ್ಲಸ್ ಶ್ರೇಣಿಯ ಭದ್ರತೆ ಹಾಗೂ ಸಿಆರ್ ಪಿಎಫ್ ವಿಐಪಿ ಭದ್ರತೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯಲಾಗಿದ್ದು, ರಾಜ್ಯ ಪೊಲೀಸರು ಭದ್ರತೆ ನೀಡಲಿದ್ದಾರೆ.

ವಿಐಪಿಗಳಿಗೆ ಬಂದಿದ್ದ ಬೆದರಿಕೆಯ ವಿಷಯವನ್ನು ಪುನರ್ ಪರಿಶೀಲನೆ ನಡೆಸಿದ ಬಳಿಕ ಕೇಂದ್ರ ಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Centre has withdrawn RJD chief Lalu Prasad Yadav's 'Z+' VIP security cover of NSG commandos after a recent review of the threat to various protectees, official sources said today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ