ಕೇಂದ್ರದಿಂದ ಆಧಾರ್ ಕಾರ್ಡ್ ಜತೆ ಡ್ರೈವಿಂಗ್ ಲೈಸನ್ಸ್ ಲಿಂಕ್: ಸುಪ್ರೀಂ

ನವದೆಹಲಿ, ಫೆಬ್ರವರಿ 7: ಕೇಂದ್ರ ಸರಕಾರ ಆಧಾರ್ ಸಂಖ್ಯೆ ಜತೆ ಡ್ರೈವಿಂಗ್ ಲೈಸನ್ಸ್ ಜೋಡಣೆ ಮಾಡುವ ಪ್ರಕ್ರಿಯೆ ನಡೆಸುತ್ತಿದೆ. ನಕಲಿ ಲೈಸನ್ಸ್ ಗಳನ್ನು ನಿವಾರಣೆ ಮಾಡಲು ಈ ಕ್ರಮಕ್ಕೆ ಮುಂದಾಗಿದೆ ಮತ್ತು ಇದಕ್ಕಾಗಿ ಎಲ್ಲಾ ರಾಜ್ಯಗಳನ್ನು ಒಳಗೊಳ್ಳುವ ಸಾಫ್ಟ್ ವೇರ್ ಸಿದ್ದಪಡಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಮತ್ತು ದೀಪಕ್ ಮಿಶ್ರಾ ಅವರಿದ್ದ ಪೀಠಕ್ಕೆ ನ್ಯಾಯಾಲಯ ನೇಮಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಈ ಮಾಹಿತಿ ನೀಡಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ಎಸ್ ರಾಧಾಕೃಷ್ಣನ್ ಈ ಸಮಿತಿ ಅಧ್ಯಕ್ಷರಾಗಿದ್ದಾರೆ.

ಸುಪ್ರಿಂ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಸಮಿತಿಯು, "ನಕಲಿ ಲೈಸನ್ಸ್ ಗಳನ್ನು ರದ್ದುಗೊಳಿಸಲು ಎನ್ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ) 'ಸಾರ್ಥಿ4' ಸಿದ್ದಪಡಿಸುತ್ತಿದೆ ಎಂದು ರಸ್ತೆ ಸಂಪರ್ಕ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ. ಇದರಲ್ಲಿ ಎಲ್ಲಾ ಲೈಸನ್ಸ್ ಗಳನ್ನು ಆಧಾರ್ ಜತೆ ಜೋಡಿಸಲಾಗುವುದು," ಎಂದು ಹೇಳಿದೆ.

Centre to link driving licence with Aadhaar: SC told

"ರಿಯಲ್ ಟೈಮ್ ನಲ್ಲಿ ಈ ಸಾಫ್ಟ್ ವೇರ್ ಎಲ್ಲಾ ರಾಜ್ಯಗಳನ್ನು ಒಳಗೊಳ್ಳಲಿದೆ. ಇದರಿಂದ ಯಾವುದೇ ರಾಜ್ಯಗಳಲ್ಲಿ ಯಾವುದೇ ವ್ಯಕ್ತಿ ನಕಲಿ ಅಥವಾ ಇನ್ನೊಂದು ಲೈಸನ್ಸ್ ಪಡೆಯಲಾಗುವುದಿಲ್ಲ," ಎಂದು ವರದಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಾಂವಿಧಾನಿಕ ಪೀಠ ಆಧಾರ್ ಯೋಜನೆಯ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+