11 ವರ್ಷಗಳ ಬಳಿಕ ಭಾರತದಲ್ಲಿ ಟಿವಿ ಚಾನೆಲ್‌ಗಳಿಗೆ ಹೊಸ ಮಾರ್ಗಸೂಚಿ
ನವದೆಹಲಿ, ನವೆಂಬರ್ 9: ಕೇಂದ್ರ ಸರ್ಕಾರ ಅಪ್‌ಲಿಂಕಿಂಗ್ ಮತ್ತು ಡೌನ್‌ಲಿಂಕಿಂಗ್ ಮಾರ್ಗಸೂಚಿಗಳು-2022ರನ್ನು ಅನುಮೋದಿಸಲಾಗಿದೆ. ಈ ಮಾರ್ಗಸೂಚಿಗಳು ಟಿವಿ ಚಾನೆಲ್‌ಗಳಿಗೆ ಅನುಸರಣೆಯನ್ನು ಸುಲಭಗೊಳಿಸುತ್ತದೆ. ಈಗ ಭಾರತೀಯ ಟೆಲಿಪೋರ್ಟ್ ವಿದೇಶಿ ಚಾನೆಲ್‌ಗಳನ್ನು ಅಪ್‌ಲಿಂಕ್ ಮಾಡಬಹುದು. ಈ ಮೊದಲು ಈ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಪೂರ್ವಾನುಮತಿ ಇರಲಿಲ್ಲ. ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಮಾಡುವ ಮಾರ್ಗಸೂಚಿಗಳನ್ನು ಕೊನೆಯದಾಗಿ 2011ರಲ್ಲಿ ನೀಡಲಾಗಿದ್ದು ಅವುಗಳನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸುಮಾರು 11 ವರ್ಷಗಳ ನಂತರ ನಾವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದೇವೆ ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಮಾಡಿದ ಸುಧಾರಣೆಗಳಿಗೆ ಅನುಗುಣವಾಗಿ ವ್ಯವಹಾರವನ್ನು ಸುಲಭಗೊಳಿಸುವ ವಿಷಯದಲ್ಲಿ ನಾವು ಹಲವಾರು ಸುಧಾರಣೆಗಳನ್ನು ಮಾಡಿದ್ದೇವೆ. ರಾಷ್ಟ್ರೀಯ ಪ್ರಾಮುಖ್ಯತೆ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಿಗೆ 30 ನಿಮಿಷಗಳ ಸ್ಲಾಟ್ ನೀಡಬೇಕೆಂದು ನಾವು ನಿಬಂಧನೆ ಮಾಡಿದ್ದೇವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.
ಉಪಗ್ರಹಗಳ ಅಪ್‌ಲಿಂಕಿಂಗ್ -ಡೌನ್‌ಲಿಂಕಿಂಗ್ ನಿಯಂತ್ರಣ
ಇನ್ನು ಇದಕ್ಕಾಗಿ ಮಹಿಳಾ ಸಬಲೀಕರಣ, ಕೃಷಿ, ಬೋಧನೆ ಮುಂತಾದ 7-8 ವಿಷಯಗಳನ್ನು ನೀಡಲಾಗಿದೆ. ಎಲ್ಲರಿಗೂ ಸಮಾನ ಅವಕಾಶ ನೀಡಲು ಪ್ರಯತ್ನಿಸಿದ್ದೇವೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಉಪಗ್ರಹ ದೂರದರ್ಶನ ಚಾನೆಲ್‌ಗಳ 'ಅಪ್‌ಲಿಂಕಿಂಗ್'ನ್ನು ಒಂದು ತಿಂಗಳಲ್ಲಿ ಡಿ-ಕಂಟ್ರೋಲ್ ಮಾಡುವುದಾಗಿ ಹೇಳಿದೆ. ಸರ್ಕಾರದ ಈ ನಡೆಯ ಉದ್ದೇಶ ಭಾರತವನ್ನು 'ಅಪ್‌ಲಿಂಕಿಂಗ್'ನ ಪ್ರಮುಖ ಕೇಂದ್ರವನ್ನಾಗಿ ಮಾಡುವುದು. ವಾಸ್ತವವಾಗಿ ಉಪಗ್ರಹ ದೂರಸಂಪರ್ಕದಲ್ಲಿ ಅಪ್‌ಲಿಂಕ್ ಎನ್ನುವುದು ನೆಲದ ನಿಲ್ದಾಣದಿಂದ ಉಪಗ್ರಹಕ್ಕೆ ಲಿಂಕ್ ಆಗಿದೆ. ಮತ್ತೊಂದೆಡೆ ಡೌನ್‌ಲಿಂಕ್ ಎನ್ನುವುದು ಉಪಗ್ರಹದ ಕೆಳಗಿನ ಒಂದು ಅಥವಾ ಹೆಚ್ಚಿನ ನೆಲದ ಕೇಂದ್ರಗಳ ನಡುವಿನ ಲಿಂಕ್ ಆಗಿರುತ್ತದೆ.

ದೇಶದ 898 ದೂರದರ್ಶನ ಪ್ರಸಾರಕರಲ್ಲಿ 532 ಚಾನೆಲ್‌ಗಳು ತಮ್ಮ ಸೇವೆಗಳ 'ಅಪ್‌ಲಿಂಕ್' ಮತ್ತು 'ಡೌನ್‌ಲಿಂಕ್' ಮಾಡಲು ವಿದೇಶಿ ಉಪಗ್ರಹಗಳನ್ನು ಬಳಸುತ್ತವೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಭಾರತವು ಕೇಂದ್ರವಾಗಿ ಹೊರ ಹೊಮ್ಮಲು ನಾವು ಉಪಗ್ರಹಗಳ ಅಪ್‌ಲಿಂಕ್ ಮಾಡುವುದನ್ನು ನಿಯಂತ್ರಿಸಲು ಬಯಸುತ್ತೇವೆ. ಅಪ್‌ಲಿಂಕ್ ಮತ್ತು ಡೌನ್‌ಲಿಂಕಿಂಗ್ ಮಾರ್ಗಸೂಚಿಗಳನ್ನು ಕೊನೆಯದಾಗಿ 2011ರಲ್ಲಿ ನೀಡಲಾಗಿದ್ದು, ಅವುಗಳನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಸಚಿವಾಲಯ ಕಾರ್ಯದರ್ಶಿ ತಿಳಿಸಿದರು.












Click it and Unblock the Notifications