ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತಷ್ಟು ಕಡಿಮೆ ಬೆಲೆಗೆ ಲಸಿಕೆ ಪಡೆಯಲು ಯಶಸ್ವಿಯಾಗುತ್ತಾ ಕೇಂದ್ರ?

|
Google Oneindia Kannada News

ನವದೆಹಲಿ, ಜೂನ್ 10: ಕಳೆದ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಲಸಿಕೆ ನೀತಿಯಲ್ಲಿ ಬದಲಾವಣೆಯನ್ನು ಘೋಷಿಸಿದ್ದರು. ಕೇಂದ್ರೀಕೃತ ಲಸಿಕೆ ನೀತಿಯನ್ನು ಘೋಷಿಸಿದ ಅವರು ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಪೂರೈಸಲಿದೆ ಎಂದು ತಿಳಿಸಿದರು. ಈ ಬೆಳವಣಿಗೆಯ ನಂತರ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರೊಂದಿಗೆ ಲಸಿಕೆ ಬೆಲೆ ವಿಚಾರವಾಗಿ ಮತ್ತೊಮ್ಮೆ ಚರ್ಚೆ ನಡೆಸುವ ಸಂಭವವಿದೆ.

ಲಸಿಕೆಯ ಬೆಲೆಯಲ್ಲಿ ಬದಲಾವಣೆ ಮಾಡುವ ವಿಚಾರವಾಗಿ ಕೇಂದ್ರ ಸರ್ಕಾರ ಪ್ರಮುಖ ಎರಡು ಲಸಿಕೆಗಳಾದ ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್ ಉತ್ಪಾದಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯ ಬಗ್ಗೆ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಈ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ನೀಡಿದ್ದಾರೆ. ಎರಡು ಲಸಿಕೆಗಳ ಪ್ರತಿ ಒಂದು ಡೋಸ್‌ನ ಪರಿಷ್ಕೃತ ಖರೀದಿ ಬೆಲೆಯನ್ನು ಹೊಸ ನಿಯಮದ ನಂತರ ಇನ್ನಷ್ಟೇ ನಿರ್ಧರಿಸಬೇಕಿದೆ ಎಂದಿದ್ದಾರೆ. ಈಗ ಎರಡು ಲಸಿಕೆಗಳನ್ನು 150 ರೂಪಾಯಿಗೆ ಖರೀದಿಸಲಾಗುತ್ತಿದೆ.

ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ ಘೋಷಣೆಯಲ್ಲಿ ಲಸಿಕೆ ಖರೀದಿಗೆ ರಾಜ್ಯಗಳಿಗೆ ನೀಡಲಾಗಿದ್ದ 25 ಶೇಕಡಾ ಖೋಟಾ ಸೇರಿದಂತೆ 75 ಶೇಕಡಾ ಲಸಿಕೆಯನ್ನು ಕೇಂದ್ರವೇ ಖರೀದಿಸುತ್ತದೆ. ಇದನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಿದ್ದರು. 21 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಯನ್ನು ನೀಡುವ ಗುರಿಯೊಂದಿಗೆ ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಸರ್ಕಾರದ ಈ ಘೋಷಣೆಯಿಂದ ಈಗಾಗಲೇ ಲಸಿಕೆಗಾಗಿ ಬಜೆಟ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ 15,000 ಕೋಟಿ ರೂಪಾಯಿ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಲಸಿಕೆಗಾಗಿ 35,000 ಕೋಟಿ ಕಾಯ್ದಿರಿಸಿತ್ತು.

ಆರಂಭದಲ್ಲಿ ಬೆಲೆ ನಿಗದಿಯಾಗಿದ್ದೆಷ್ಟು?

ಆರಂಭದಲ್ಲಿ ಬೆಲೆ ನಿಗದಿಯಾಗಿದ್ದೆಷ್ಟು?

ಕಳೆದ ಜನವರಿಯಲ್ಲಿ ಲಸಿಕೆ ಖರೀದಿ ಆರಂಭಿಸಿದಾಗ ಖರೀದಿಸಿದ್ದ 1 ಕೋಟಿ 10 ಲಕ್ಷ ಕೋವಿಶೀಲ್ಡ್‌ ಡೋಸ್‌ಗಳಿಗೆ ತೆರಿಗೆ ಹೊರತು ಪಡಿಸಿ 200 ರೂಪಾಯಿಗೆ ಖರೀದಿಸಿತ್ತು. 55 ಲಕ್ಷ ಕೋವಾಕ್ಸಿನ್ ಡೋಸ್‌ಗಳಿಗೆ ಖರೀದಿಸಿತ್ತು. ಆದರೆ ಅದಾದ ನಂತರ ಈ ಬಗ್ಗೆ ಚೌಕಾಸಿಯನ್ನು ನಡೆಸಿ ಪ್ರತಿ ಡೋಸ್‌ಗೆ 150 ರೂಪಾಯಿಯಂತೆ ಖರೀದಿಸುತ್ತಿದೆ.

ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ

ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ

ಇನ್ನು ಖಾಸಗೀ ಆಸ್ಪತ್ರೆಗಳು ಲಸಿಕೆಯನ್ನು ಮೊದಲಿಗೆ ಸರ್ಕಾರದ ಮೂಲಕವೇ ಖರೀದಿಸಬೇಕಾಗಿತ್ತು. ಆಗ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್‌ನ ಪ್ರತಿ ಡೋಸ್‌ಗೆ 250 ರೂಪಾಯಿಯಲ್ಲಿ ಖರೀದಿಸಲು ಸರ್ಕಾರ ಬೆಲೆ ನಿಗದಿಪಡಿಸಿತ್ತು. ಅದಾದ ನಂತರ 18-44ರ ವಯೋಮಾನದವರಿಗೂ ಲಸಿಕೆಯನ್ನು ನೀಡಲು ಅವಕಾಶ ನೀಡಿದ ನಂತರವೂ ಲಸಿಕೆಯ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿರಲಿಲ್ಲ.

ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದ ಬೆಲೆ ನಿಗದಿ

ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದ ಬೆಲೆ ನಿಗದಿ

ಆದರೆ ಏಪ್ರಿಲ್‌ಗ ತಿಂಗಳಿನಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಾಗೂ ಖಾಸಗೀ ಆಸ್ಪತ್ರೆಗಳಿಗೆ ತಮ್ಮದೇ ಬೆಲೆಯನ್ನು ನಿಗದಿಪಡಿಸಲು ಅವಕಾಶವನ್ನು ನೀಡಿತ್ತು. ಆಗ ಉತ್ಪಾದಕರಾಗ ಸೀರಂ ಇನ್‌ಸ್ಟಿಟ್ಯೂಟ್ ಹಾಗೂ ಮತ್ತು ಭಾರತ್ ಬಯೋಟೆಕ್ ಆರಂಭದಲ್ಲಿ ತಮ್ಮ ಲಸಿಕೆಗಳನ್ನು ರಾಜ್ಯಗಳಿಗೆ ಕ್ರಮವಾಗಿ 400 ಮತ್ತು 600 ರೂ. ಮಾರಾಟ ಮಾಡಿದರೆ ಖಾಸಗಿ ಆಸ್ಪತ್ರೆಗಳಿಗೆ ಕ್ರಮವಾಗಿ 600 ಮತ್ತು 1,200 ರೂಪಾಯಿಯನ್ನು ನಿಗದಿಪಡಿಸಿತ್ತು. ಆದರೆ ಈ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ ರಾಜ್ಯಗಳಿಗೆ ನೀಡುವ ದರದಲ್ಲಿ ಬದಲಾವಣೆ ಮಾಡಲಾಯಿತು.

ಟೀಕೆಯ ಬಳಿಕ ರಾಜ್ಯಗಳಿಗೆ ನೀಡುವ ಲಸಿಕೆ ಬೆಲೆ ಇಳಿಕೆ

ಟೀಕೆಯ ಬಳಿಕ ರಾಜ್ಯಗಳಿಗೆ ನೀಡುವ ಲಸಿಕೆ ಬೆಲೆ ಇಳಿಕೆ

ಟೀಕೆಯ ಬಳಿಕ ರಾಜ್ಯಗಳಿಗೆ ನೀಡುವ ಪ್ರತಿ ಡೋಸ್‌ಗೆ 300 ರೂಪಾಯಿಯಂತೆ ಕೋವಿಶೀಲ್ಡ್ ಲಸಿಕೆ ಹಾಗೂ 400 ರೂಪಾಯಿಯಂತೆ ಕೋವಾಕ್ಸಿನ್ ಲಸಿಕೆಯನ್ನು ನಿಗದಿಪಡಿಸಲಾಯಿತು. ಆರಂಭದಲ್ಲಿ ಈ ಲಸಿಕೆಗಳಿಗಾಗಿ ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಜೊತೆಗೆ ಪೈಪೋಟಿಯನ್ನು ನಡೆಸಬೇಕಾಗಿತ್ತು. ನಂತರ 25 ಶೇಕಡಾ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಉಳಿದ 25 ಶೇಕಡಾ ರಾಜ್ಯ ಸರ್ಕಾರಗಳಿಗೆ ಸರ್ಕಾರ ನಿಗದಿ ಪಡಿಸಿತು. ಉಳಿದ 50 ಶೇಕಡಾ ಲಸಿಕೆಯನ್ನು ಕೇಂದ್ರ ಸರ್ಕಾರವೇ ಕೊಂಡುಕೊಳ್ಳುತ್ತಿತ್ತು. ಈಗ ಈ 75 ಶೇಕಡಾ ಲಸಿಕೆಯನ್ನು ಕೂಡ ಕೇಂದ್ರ ಸರ್ಕಾರವೇ ಖರೀದಿ ಮಾಡಿ ನಂತರ ರಾಜ್ಯಸರ್ಕಾರಗಳಿಗೆ ಹಂಚಿಕೆ ಮಾಡುತ್ತದೆ. ಉಳಿದ 25 ಶೇಕಡಾ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುತ್ತದೆ.

English summary
The Centre may renegotiate vaccination rates with Vaccine companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X