ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ನೆಪದಲ್ಲಿ ಹಿರಿಯ ನಾಗರಿಕರಿಗೆ ಮೋಸ; ಕೇಂದ್ರದ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜನವರಿ 22: ಕೊರೊನಾ ಸೋಂಕಿನ ವಿರುದ್ಧ ಜನವರಿ 16ರಿಂದ ಭಾರತದಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಮೊದಲು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ ಈ ಕೊರೊನಾ ಲಸಿಕೆ ನೆಪದಲ್ಲಿ ವಂಚನೆ ನಡೆಯುತ್ತಿರುವುದೂ ಬೆಳಕಿಗೆ ಬಂದಿದೆ.

ಕೊರೊನಾ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿಕೊಡುತ್ತೇವೆ ಎಂದು ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿರುವುದು ತಿಳಿದುಬಂದಿದೆ. ಈ ಸಂಗತಿ ಗಮನಕ್ಕೆ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಜನರಿಗೆ ಎಚ್ಚರಿಕೆ ಸಂದೇಶ ನೀಡಿದೆ.

ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿ

ಹಿರಿಯ ನಾಗರಿಕರಿಗೆ ಕರೆ ಮಾಡಿ ತಾವು ಕೇಂದ್ರ ಔಷಧ ಮಂಡಳಿಯ ಸದಸ್ಯರು ಎಂದು ಹೇಳಿಕೊಂಡು ವೈಯಕ್ತಿಕ ಮಾಹಿತಿ ಪಡೆದು ವಂಚನೆ ಎಸಗುತ್ತಿದ್ದಾರೆ. ಹೀಗಾಗಿ ಒಟಿಪಿ ಸಂಖ್ಯೆ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ ಎಂದು ತಿಳಿಸಿದೆ.

Centre Alerts On Fraud In The Name Of Corona Vaccine To Senior Citizens

ಕೆಲವೇ ದಿನಗಳಲ್ಲಿ ಹಿರಿಯ ನಾಗರಿಕರಿಗೂ ಲಸಿಕೆ ನೀಡಲಾಗುವುದು. ಲಸಿಕಾ ಅಭಿಯಾನವನ್ನು ಹಂತಹಂತಗಳಲ್ಲಿ ನಡೆಸುತ್ತಿದ್ದು, ಕೆಲವು ವಂಚಕರು ಹೆಸರು ನೋಂದಣಿ ಮಾಡಿಕೊಡುತ್ತೇವೆ ಎಂದು ಹಣ ಕೇಳುತ್ತಿರುವುದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹರಿಯಾಣ, ಹೈದರಾಬಾದ್, ತೆಲಂಗಾಣದಲ್ಲಿ ಕರೆ ಮಾಡಿ, ಕೊರೊನಾ ಲಸಿಕೆ ನೋಂದಣಿಗೆ 500 ರೂ ನೀಡುವಂತೆ ಕೇಳಿ ವಂಚನೆಗೆ ಪ್ರಯತ್ನಿಸಿರುವುದು ಕಂಡುಬಂದಿದೆ ಎಂದು ತಿಳಿಸಿದೆ.

ಮಧ್ಯಪ್ರದೇಶದ ಸೈಬರ್ ಸೆಲ್ ಘಟಕದ ಪೊಲೀಸರು ವಂಚಕರ ಜಾಡಿಗೆ ಬಲೆ ಬೀಸಿದ್ದಾರೆ.

ಕೊರೊನಾ ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಳ್ಳುವುದು ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾಲ್ಗೊಳ್ಳುವಿಕೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಕೋವಿನ್ ಆಪ್ ಮೂಲಕ ನೋಂದಣಿ ಮಾಡಲಷ್ಟೇ ತಿಳಿಸಲಾಗಿದೆ. ಆದರೆ ಲಸಿಕೆ ನೆಪದಲ್ಲಿಯೂ ವಂಚನೆ ನಡೆಸಲಾಗುತ್ತಿದೆ.

English summary
Central government alert people on fraudster in the name of coronavirus vaccine registration to senior citizens
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X