ಜುಲೈ 11ರಂದು 32 ಲಕ್ಷ ನೌಕರರಿಂದ ಮುಷ್ಕರ?

Posted By:
Subscribe to Oneindia Kannada

ನವದೆಹಲಿ, ಜೂನ್ 08: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಮುಂದಾಗಿರುವ ಕೇಂದ್ರ ಸರ್ಕಾರಿ ನೌಕರರಿಗೆ ಈಗ ರೈಲ್ವೆ ಇಲಾಖೆ ಸಿಬ್ಬಂದಿ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಜುಲೈ 11ರಂದು ಸರಿ ಸುಮಾರು 32 ಲಕ್ಷ ನೌಕರರು ಮುಷ್ಕರ ನಿರತರಾಗುವ ಸಾಧ್ಯತೆ ಕಂಡು ಬಂಡಿದೆ. ಯಾವುದಕ್ಕೂ ಜೂನ್ 9ರಂದು ಕೇಂದ್ರ ಇಲಾಖೆ ಕಚೇರಿಗಳಲ್ಲಿ ನೋಟಿಸ್ ಬೋರ್ಡ್ ನೋಡಿ.

13 ಲಕ್ಷ ರೈಲ್ವೆ ನೌಕರರು ಸೇರಿದಂತೆ ರಕ್ಷಣಾ ಇಲಾಖೆ, ಅಂಚೆ ಕಚೇರಿ ಸಿಬ್ಬಂದಿಗಳು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜುಲೈ 11 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ನ್ಯಾಷನಲ್ ಫೆಡರೇಶನ್ ಅಫ್ ಇಂಡಿಯನ್ ರೈಲ್ವೆಮೆನ್ ಎಲ್ಲಾ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಮತ್ತು ಉತ್ಪಾದನಾ ಘಟಕಕ್ಕೆ ಜೂನ್ 9ರಂದು ಅಧಿಕೃತವಾಗಿ ಪತ್ರ ನೀಡಲಿದ್ದಾರೆ.[ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಒಳ್ಳೆ ಸುದ್ದಿ]

Central govt staff to go on strike from July 11

7ನೇ ವೇತನಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಹೊಸ ಪಿಂಚಣಿ ಯೋಜನೆ(ರಾಷ್ಟ್ರೀಯ ಪಿಂಚಣಿ ಯೋಜನೆ) ಬಗ್ಗೆ ಕೂಡಾ ಮಾತಿಲ್ಲ, ರೈಲ್ವೆ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯುತ್ತಿಲ್ಲ. ಈ ರೀತಿ ಹಲವು ಸಮಸ್ಯೆಗಳಿವೆ ಎಂದು ನ್ಯಾಷನಲ್ ಜಾಯಿಂಟ್ ಆಕ್ಷನ್ ಕಮಿಟಿ (ಎನ್ ಜೆಎಸಿ) ಸಂಚಾಲಕ ಶಿವಗೋಪಾಲ್ ಮಿಶ್ರಾ ಹೇಳಿದ್ದಾರೆ. [ಸರ್ಕಾರಿ ನೌಕರರ ಆಸ್ತಿ ಘೋಷಣೆ ಕಡ್ಡಾಯ]

ಈ ಬಗ್ಗೆ ನಮಗೆ ಅಪ್ಡೇಟ್ ಸಿಕ್ಕಿದ ಕೂಡಲೇ ನಿಮ್ಮ ಮುಂದಿಡುತ್ತೇವೆ. ಸದ್ಯಕ್ಕೆ ಜುಲೈ 11 ರಂದು ಕೇಂದ್ರ ಸರ್ಕಾರಿ ಕಚೇರಿಗಳ ಸಿಬ್ಬಂದಿಯಿಂದ ಮುಷ್ಕರ ಎಂಬ ಘೋಷಣೆ ನೋಟ್ ಮಾಡ್ಕೊಳ್ಳಿ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
About 32 lakh Central Government employees including railways(32 lakh), defence and postal department have decided to go on indefinite strike from July 11, for which they will serve strike notices to their respective departments on June 9.
Please Wait while comments are loading...