ಅಂಗನವಾಡಿ ಸಮಸ್ಯೆ ಸಂಸತ್ ಗಮನಕ್ಕೆ ತಂದ ರಾಜ್ಯದ ಸಂಸದ
ಈ ಹಿಂದಿದ್ದಂತೆ, ಅಂಗನವಾಡಿ ಕಾರ್ಯಕರ್ತೆಯರ ವೇತನದಲ್ಲಿ ಶೇ. 90ರಷ್ಟು ಪಾಲು ನೀಡುತ್ತಿದ್ದ ಕೇಂದ್ರ ಸರ್ಕಾರ, ಈಗಲೂ ಅದೇ ಸೌಲಭ್ಯವನ್ನು ಮತ್ತೆ ನೀಡಬೇಕೆಂದು ಆಗ್ರಹಿಸಿದ ತುಮಕೂರು ಸಂಸದ ಮುದ್ದಹನುಮೇಗೌಡ.
ನವದೆಹಲಿ, ಮಾರ್ಚ್ 21: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರವನ್ನು ತುಮಕೂರು ಕಾಂಗ್ರೆಸ್ ಪಕ್ಷದ ಸಂಸದ ಮುದ್ದಹನುಮೇಗೌಡ ಬುಧವಾರ ಸಂಸತ್ತಿನ ಗಮನಕ್ಕೆ ತಂದರು.
ಅಂಗನವಾಡಿ ಕಾರ್ಯಕರ್ತೆಯರ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ವೇತನ ಹೆಚ್ಚಳಕ್ಕಾಗಿ ಅವರು ಧರಣಿ ನಡೆಸುತ್ತಿದ್ದಾರೆ ಎಂದು ಅವರು ಲೋಕಸಭೆಗೆ ತಿಳಿಸಿದರು.[ಅಂಗನವಾಡಿ ಕಾರ್ಯಕರ್ತೆಯರ U ಟರ್ನ್, ಧರಣಿ ವಾಪಸ್ ಇಲ್ಲ]

ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ''ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ವೇತನದಲ್ಲಿ ಕೇಂದ್ರ ಸರ್ಕಾರವು ಶೇ. 90ರಷ್ಟು ಹಣ ನೀಡುತ್ತಿತ್ತು. ಆದರೆ, ಇತ್ತೀಚೆಗೆ ಕೇಂದ್ರದಿಂದ ಶೇ. 60ರಷ್ಟು ಮಾತ್ರ ಬರುತ್ತಿದೆ. ಇದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಹಾಗಾಗಿ, ಈ ಹಿಂದೆ ನೀಡುತ್ತಿದ್ದಂತೆ ಶೇ. 90ರಷ್ಟು ಹಣವನ್ನು ಕೇಂದ್ರ ನೀಡಬೇಕು'' ಎಂದ ಅವರು ಆಗ್ರಹಿಸಿದರು.












Click it and Unblock the Notifications