ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2022: ದೇಶದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದ ಬಂಪರ್ ಗಿಫ್ಟ್?

|
Google Oneindia Kannada News

ನವದೆಹಲಿ, ಜನವರಿ 21: ಭಾರತದ 2022-23ನೇ ಸಾಲಿನ ಕೇಂದ್ರ ಬಜೆಟ್ ಮೇಲೆ ಉದ್ಯೋಗಾಕಾಂಕ್ಷಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷದಂತೆ ದೇಶದ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ವಲಯಗಳು ಮುಂಬರುವ ಬಜೆಟ್‌ನ ಮೇಲೆ ಬಂಡೆಯಷ್ಟು ಭರವಸೆಗಳನ್ನು ಇಟ್ಟುಕೊಂಡಿವೆ.

ಫೆಬ್ರವರಿ 1, 2022 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಕೃಷಿಯಿಂದ ರಿಯಲ್ ಎಸ್ಟೇಟ್‌ವರೆಗೆ ಎಲ್ಲಾ ಕ್ಷೇತ್ರಗಳು ನಿರೀಕ್ಷಿತ ಬದಲಾವಣೆಗಳಿಂದ ಪ್ರಯೋಜನ ಪಡೆಯುವ ನಿರೀಕ್ಷೆ ಹೆಚ್ಚಾಗಿದೆ.

2022ರ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ: ಸಮೀಕ್ಷೆ2022ರ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ: ಸಮೀಕ್ಷೆ

ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಆಕಾಂಕ್ಷಿಗಳು ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೇಂದ್ರ ಸರ್ಕಾರವು ಉದ್ಯೋಗಿಗಳು, ನಿರೋದ್ಯೋಗಿಗಳಿಗೆ ಯಾವ ರೀತಿ ಕೊಡುಗೆಗಳನ್ನು ನೀಡಲಿದೆ ಎಂಬುದರ ಕುರಿತು ಮುಂದೆ ಓದಿ.

ತೆರಿಗೆ ವಿನಾಯಿತಿ ನಿರೀಕ್ಷೆಯಲ್ಲಿ ಉದ್ಯೋಗಿಗಳು

ತೆರಿಗೆ ವಿನಾಯಿತಿ ನಿರೀಕ್ಷೆಯಲ್ಲಿ ಉದ್ಯೋಗಿಗಳು

ಕಳೆದ ಕೆಲವು ವರ್ಷಗಳಿಂದ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಇದರ ಹಿನ್ನೆಲೆ ಉದ್ಯೋಗಾಕಾಂಕ್ಷಿಗಳು 2022ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಯಲ್ಲಿ ಸ್ವಲ್ಪ ಹೆಚ್ಚಳ ಮಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಪಂಚರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಉದ್ಯೋಗಿಗಳ ವಲಯದಲ್ಲಿ ಕೆಲಸ ಮಾಡುವವರ ಮತಗಳನ್ನು ಸೆಳೆಯಲು ವಿನಾಯಿತಿ ನೀಡುವುದೇ ಉತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತಿದೆ.

ಎಷ್ಟು ಆಗಬಹುದು ತೆರಿಗೆ ವಿನಾಯಿತಿ

ಎಷ್ಟು ಆಗಬಹುದು ತೆರಿಗೆ ವಿನಾಯಿತಿ

ದೇಶದಲ್ಲಿ ಪ್ರಸ್ತುತ ತೆರಿಗೆ ವಿನಾಯಿತಿ ಮಿತಿಯು 2.5 ಲಕ್ಷ ರೂಪಾಯಿಗಳಷ್ಟಿದೆ. ಕಳೆದ ಎಂಟು ವರ್ಷಗಳಿಂದ ತೆರಿಗೆ ವಿನಾಯಿತಿ ದರವು ಸ್ಥಿರವಾಗಿದ್ದು, ಯಾವುದೇ ಏರಿಳಿತಗಳು ಆಗಿಲ್ಲ. ಅದಕ್ಕೂ ಮೊದಲು ಕೇಂದ್ರ ಸರ್ಕಾರವು ತೆರಿಗೆ ವಿನಾಯಿತಿ ದರವನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಿದ್ದು, ಉದ್ಯೋಗಿಗಳಿಗೆ ನಿರಾಳತೆಯನ್ನು ಮೂಡಿಸಿತ್ತು. ತೆರಿಗೆ ಪಾವತಿಸುತ್ತಿರುವ ಉದ್ಯೋಗಿಗಳು ತೆರಿಗೆ ವಿನಾಯಿತಿಯನ್ನು 2.5 ಲಕ್ಷದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರವು ತೆರಿಗೆ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆ ಆರಂಭವಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ತೆರಿಗೆ ವಿನಾಯಿತಿ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿ ವಿನಾಯಿತಿ

ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿ ವಿನಾಯಿತಿ

ಪ್ರಸ್ತುತ, ಉದ್ಯೋಗ ವಲಯದ ಉದ್ಯೋಗಿಗಳಿಗೆ ತೆರಿಗೆ ಉಳಿತಾಯವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಿನ್ನೆಲೆ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ಸರ್ಕಾರವು 1.5 ಲಕ್ಷದವರೆಗೆ ವಿನಾಯಿತಿ ಘೋಷಿಸಿದೆ. ಈ ಹಿಂದೆ ವಿನಾಯಿತಿಯನ್ನು 1 ರಿಂದ 1.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. 2022ರ ಬಜೆಟ್‌ನಲ್ಲಿ ಸರ್ಕಾರವು ಈ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಲ್ಲಿ ಉದ್ಯೋಗಾಕಾಂಕ್ಷಿಗಳಿದ್ದಾರೆ.

ಎಫ್‌ಡಿಗಳ ತೆರಿಗೆ-ಮುಕ್ತ ಅವಧಿ ಕಡಿಮೆ ಮಾಡುವುದು

ಎಫ್‌ಡಿಗಳ ತೆರಿಗೆ-ಮುಕ್ತ ಅವಧಿ ಕಡಿಮೆ ಮಾಡುವುದು

ಮೊದಲ ಐದು ವರ್ಷಗಳ ಅವಧಿಗೆ ಇರುವ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ತೆರಿಗೆ-ಮುಕ್ತ ಎಫ್‌ಡಿಗಳ ಲಾಕ್-ಇನ್ ಅವಧಿ ಕಡಿತಕ್ಕೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಪ್ರಸ್ತುತ ಬ್ಯಾಂಕುಗಳು ಬಡ್ಡಿದರಗಳನ್ನು ಕಡಿಮೆ ಮಾಡಿರುವುದರಿಂದ, PPF ಮೇಲಿನ ಆದಾಯವು ಎಫ್‌ಡಿಗಳಿಗಿಂತ ಉತ್ತಮವಾಗಿದೆ. ಕಡಿಮೆ ಬಡ್ಡಿದರಗಳಿಂದಾಗಿ ಜನರು ಈಗ ಎಫ್‌ಡಿಗಳ ಬದಲಿಗೆ ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮುಂಬರುವ ಬಜೆಟ್‌ನಲ್ಲಿ, ತೆರಿಗೆ ಉಳಿಸುವ ಎಫ್‌ಡಿ ಅಡಿಯಲ್ಲಿ ಜನರು ಮೂರು ವರ್ಷಗಳ ಎಫ್‌ಡಿಯನ್ನು ಸೇರಿಸುವ ನಿರೀಕ್ಷೆಯಿದೆ.

ಕೇಂದ್ರ ಬಜೆಟ್ ಮಂಡನೆ ಯಾವಾಗ?:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2022-2023 ಸಾಲಿನ ಕೇಂದ್ರೀಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಈ ಬಾರಿ ಮಂಡಸಲಿರುವ ಬಜೆಟ್ ಹಿಂದೆಂದಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿರಲಿದೆ. ಹಣಕಾಸಿನ ಕಾಳಜಿಯನ್ನು ಬದಿಗಿಟ್ಟು ಸಾರ್ವಜನಿಕ ಖರ್ಚು, ಬೇಡಿಕೆ ಹೆಚ್ಚಿಸುವ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ದೇಶದ ಆರ್ಥಿಕತೆಗೆ ಮುಷ್ಠಿ ನೀಡುವ ಉದ್ದೇಶದಿಂದ ಬಜೆಟ್ ರಚಿಸುವಲ್ಲಿ ಸಚಿವರಿಗೆ ಹಲವು ಸಲಹೆಗಾರರು ಮತ್ತು ಕಾರ್ಯದರ್ಶಿಗಳು ತಂಡವು ಸಹಾಯ ಮಾಡುತ್ತಿದ್ದಾರೆ.

Recommended Video

ದೇವೇಗೌಡರ ಆರೋಗ್ಯದಲ್ಲಿ ವ್ಯತ್ಯಾಸ! | Oneindia Kannada

English summary
What Will Get Job Seekers from Union Budget 2022; Here Read to know Central Govt Gift to Unemployed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X