Toll Fee for Bikers: ಬೈಕ್ ಸವಾರರಿಗೆ ಬ್ಯಾಡ್ ನ್ಯೂಸ್! ನೀವು ಹೈವೇ ಟೋಲ್ ಶುಲ್ಕ್ ಕಟ್ಟಬೇಕು?..ಹೊಸ ರೂಲ್ಸ್ ಬರುತ್ತಾ?
ಬೆಂಗಳೂರು, ಜೂನ್ 26: ಕೇಂದ್ರ ಸರ್ಕಾರವು ದ್ವಿಚಕ್ರ ವಾಹನ ಸವಾರರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ. ಹೆದ್ದಾರಿ ಟೋಲ್ ಶುಲ್ಕದ ವಿಚಾರದಲ್ಲಿ ಬೈಕ್ ಸವಾರರಿಗೂ ಶಾಕ್ ನೀಡಲಾಗಿದೆ. ಈತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದಂತೆ ವಾರ್ಷಿಕ 3000 ರೂ.ಪಾಸ್ ಅನ್ನು ಪರಿಚಯಿಸಿತ್ತು. ಇದಾದ ಬೆನ್ನಲ್ಲೇ ವಾಹನ ಸವಾರರಿಗೂ ಶಾಕ್ ನೀಡಿದೆ ಎಂದು ವರದಿ ಆಗಿದೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಬೈಕ್ ಸವಾರರು ಈ ಸುದ್ದಿ ಓದಲೇಬೇಕು.
ಇತ್ತೀಚಿನ ವರ್ಷಗಳಲ್ಲಿ ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಟೋಲ್ ಶುಲ್ಕ ಪಾವತಿಯಲ್ಲಿ ಇರುವ ಗೊಂದಲಗಳನ್ನು ಪರಿಹರಿಸಬೇಕು ಹಾಗೂ ಸರಳೀಕರಣ ಮಾಡಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ. ದುಬಾರಿ ಟೋಲ್ ಶುಲ್ಕವನ್ನು ವಿರೋಧಿಸಿ, ಕರ್ನಾಟಕದ ವಿವಿಧ ಭಾಗದಲ್ಲಿ ಸರಣಿ ಪ್ರತಿಭಟನೆಯೂ ನಡೆದಿದೆ. ಈ ವಿಚಾರಗಳ ಬಗ್ಗೆ ಮಾತನಾಡಿದ್ದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಗುಡ್‌ನ್ಯೂಸ್ ಕೊಟ್ಟಿದ್ದರು. ಆದರೆ, ಅದರ ಬೆನ್ನಲ್ಲೇ ಶಾಕಿಂಗ್ ವಿಚಾರವೊಂದು ಬಂದಿದೆ.

ಜುಲೈ 15ರಿಂದ ಹೊಸ ನಿಯಮ ಜಾರಿ
ದೇಶದಾದ್ಯಂತ ಬೈಕ್ ಸವಾರರಿಗೆ ಆಘಾತ ಸುದ್ದಿಯೊಂದು ಗುರುವಾರ ಹೊರ ಬಿದ್ದಿದೆ. ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ಅಪ್ಡೇಟ್ಸ್ ಆಗಿದೆ. ತ್ರಿಚಕ್ರ, ನಾಲ್ಕು ಚಕ್ರ, ಬಸ್, ಲಾರಿ ಇತರ ದೊಡ್ಡ ವಾಹನಗಳಂತೆ ಬೈಕ್ ಸವಾರರು ಸಹ ಟೋಲ್ ಶುಲ್ಕ ಭರಿಸಬೇಕು. ಹೀಗೊಂದು ನಿಯಮ ರೂಪಿಸಲಾಗಿದೆ. ಈ ಹೊಸ ರೂಲ್ಸ್ ಮುಂದಿನ ಜುಲೈ 15ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಯಾವುದೇ ರಾಷ್ಟ್ರೀಯ ಹೆದ್ದಾರಿ ಮೂಲಕ ದ್ವಿಚಕ್ರ ವಾಹನ ಸವಾರರು ಓಡಾಡಿದರು ಸಹ, ಅಲ್ಲಿ ಎದುರಾಗುವ ಪ್ರತಿ ಟೋಲ್‌ಗಳಲ್ಲಿ ಬೈಕ್ ಸವಾರರು ಟೋಲ್ ಫೀ ಕಟ್ಟಬೇಕು. ಈ ಮೂಲಕ ಜುಲೈ 15ರಿಂದ ಟೋಲ್ ಫೀ ಸೇವೆ ಅಂತ್ಯವಾಗಲಿದೆ. ಬೈಕ್‌ಗಳಿಗೆ ಫಾಸ್ಟ್ಯಾಗ್ ಸೇವೆ ಬರಲಿದೆ ಎಂದು ವರದಿ ಆಗಿದೆ. ಈ ಕುರಿತು ಕೇಂದ್ರ ಹೆದ್ಧಾರಿ ಸಚಿವಾಲಯ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಯಾವುದೇ ಮಾಹಿತಿ ನೀಡಿಲ್ಲ. ಈ ಪ್ರಸ್ತಾಪವನ್ನು ತಿರಸ್ಕರಿಸಿದೆ.
ಮತ್ತಷ್ಟು ಗೊಂದಲ ಉಂಟಾಗುತ್ತಾ?
ಟೋಲ್ ಶುಲ್ಕದಲ್ಲಿ ಆಗಾಗ ಆಗುತ್ತಿರುವ ಬದಲಾವಣೆ, ಶುಲ್ಕ ವಸೂಲಿ ವಿರುದ್ಧ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬೈಕ್ ಸವಾರರಿಂದಲೂ ಟೋಲ್ ಶುಲ್ಕ ವಸೂಲಿಗೆ ಮುಂದಾಗಿದ್ದೇ ಆದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೈಕ್ ಸವಾರರು ಖಂಡಿಸಲಿದ್ದಾರೆ. ಜುಲೈ 15ರಿಂದ ಟೋಲ್ ವಸೂಲಾತಿ ವೇಳೆ ಮತ್ತಷ್ಟು ಗೊಂದಲಗಳು ಎದುರಾದರೂ ಅಚ್ಚರಿ ಇಲ್ಲ.
ನಿತಿನ್ ಗಡ್ಕರಿ ಸ್ಪಷ್ಟನೆ ಇಲ್ಲಿದೆ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸುವ ಬಗ್ಗೆ ಕೆಲವು ಮಾಧ್ಯಮಗಳು ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿವೆ. ಅಂತಹ ಯಾವುದೇ ನಿರ್ಧಾರವನ್ನು ಪ್ರಸ್ತಾಪಿಸಲಾಗಿಲ್ಲ. ದ್ವಿಚಕ್ರ ವಾಹನಗಳಿಗೆ ಟೋಲ್‌ನಲ್ಲಿ ಸಂಪೂರ್ಣ ವಿನಾಯಿತಿ ಮುಂದುವರಿಯುತ್ತದೆ. ಇದುವೆ ಸತ್ಯ. ದ್ವಿಚಕ್ರ ವಾಹನ ಸವಾರರಿಗೆ ಯಾವುದೇ ರೀತಿ ನಿರ್ಧಾರ, ಚಿಂತನೆ, ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಚಿವರ ಈ ಸ್ಪಷ್ಟನೆ ಬರುವ ಹೊತ್ತಿಗಾಗಲೇ ಸಾಕಷ್ಟು ಮಾಧ್ಯಮಗಳುವ ವರದಿ ಮಾಡಿದ್ದವು. ಇದೀಗ ದ್ವಿಚಕ್ರ ವಾಹನ ಸವಾರರಿಗೆ ಎದುರಾಗಿದ್ದ ಚಿಂತನೆ ದೂರವಾಗಿದೆ.












Click it and Unblock the Notifications